ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ 73ನೇ ಜನ್ಮದಿನದ ಸಂಭ್ರಮ, ಶುಭಾಶಯಗಳ ಸುರಿಮಳೆ
ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭಕೋರಿದ ಬಿ.ಎಸ್.ಯಡಿಯೂರಪ್ಪ, ಅಶ್ವತ್ಥನಾರಾಯಣ, ಪುನೀತ್ ರಾಜ್ಕುಮಾರ್.
ದಕ್ಷಿಣ ಕನ್ನಡ: ಅನ್ನ, ಅಕ್ಷರ, ಅಭಯ, ಔಷಧ ದಾನಗಳ ಮೂಲಕ ಚತುರ್ದಾನ ಪರಂಪರೆಯ ಕ್ಷೇತ್ರವೆಂದೇ ಹೆಸರಾದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ. ಧಾರ್ಮಿಕ ಕ್ಷೇತ್ರವೊಂದು ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಪುನೀತ್ ರಾಜ್ಕುಮಾರ್ ಸೇರಿದಂತೆ ನಾಡಿನೆಲ್ಲೆಡೆಯ ಭಕ್ತರು ಶುಭ ಕೋರಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಶುಭಕಾಮನೆಗಳು. ಶ್ರೀ ಮಂಜುನಾಥ ಸ್ವಾಮಿಯು ತಮಗೆ ಉತ್ತಮ ಆರೋಗ್ಯವನ್ನು, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ನಿಮ್ಮ ಸೇವಾಕೈಂಕರ್ಯ ಇನ್ನೂ ದೀರ್ಘಕಾಲ ಯಶಸ್ವಿಯಾಗಿ ಮುಂದುವರಿಯುವಂತೆ ಹರಸಲಿ pic.twitter.com/EQZJILkEE1
— B.S. Yediyurappa (@BSYBJP) November 25, 2020
ಧರ್ಮಸ್ಥಳದ ಧರ್ಮಾಧಿಕಾರಿಗಳು, ಖಾವಂದರಾದ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳು.
ನಾಡಿನಲ್ಲಿ ಸೇವಾಯಜ್ಞದಲ್ಲಿ ನುರಿತರಾದ ನಿಮಗೆ ಶ್ರೀ ಮಂಜುನಾಥ ಸ್ವಾಮಿಯು ಧರ್ಮ ಕಾರ್ಯ ನಡೆಸಲು ಮತ್ತಷ್ಟು ಹೆಚ್ಚಿನ ಶಕ್ತಿ, ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ನೀಡಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ. @SKDMTemple pic.twitter.com/yrwwZUIpy4
— Dr. Ashwathnarayan C. N. (@drashwathcn) November 25, 2020
ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ|| ಡಿ. ವೀರೇಂದ್ರ ಹೆಗ್ಗಡೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು pic.twitter.com/iQelTjMJl3
— Puneeth Rajkumar (@PuneethRajkumar) November 25, 2020
ಶಿಕ್ಷಣ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣರಾದ ವೀರೇಂದ್ರ ಹೆಗ್ಗಡೆಯವರು ಇನ್ನೂ ನೂರ್ಕಾಲ ಹೀಗೇ ಸಮಾಜದ ಮಾರ್ಗದರ್ಶಕರಾಗಿ ನಮ್ಮೊಂದಿಗಿರಲಿ ಎಂದು ಹಾರೈಸಿದ್ದಾರೆ.
https://www.instagram.com/p/CIAA_VMnOdT/?igshid=1olh9bdy3dz1c
https://www.instagram.com/p/CH_8vchr-m8/?igshid=13b23ab0n9t8x
ಜನರ ಕಷ್ಟಗಳಿಗೆ ಸದಾ ಸ್ಪಂದಿಸುವ ಹೆಗ್ಗಡೆಯವರು ದೇಶ, ಭಾಷೆಗಳ ಗಡಿ ಮೀರಿ ಜನಮನ್ನಣೆಗಳಿಸಿದ್ದು ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಗಳ ಮೂಲಕ ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ನಿಧಿಗೆ 5 ಕೋಟಿ, ಕಳೆದ ಬಾರಿ ನೆರೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 1:46 pm, Wed, 25 November 20