ದಾವಣಗೆರೆ: ವಾಲ್ಮೀಕಿ ಶ್ರೀಗಳ ಬಗ್ಗೆ ಪುರಾಣಗಳಲ್ಲಿ ಕಟ್ಟು ಕಥೆ ಕಟ್ಟಿದ್ದಾರೆ. ಪುರಾಣಗಳಲ್ಲಿ ಕಟ್ಟು ಕಥೆ ಕಟ್ಟಿ ಅಪಮಾನ ಮಾಡಿದ್ದಾರೆ ಎಂದು ವಾಲ್ಮೀಕಿ ಜಾತ್ರೆಯಲ್ಲಿ ಹಂಪಿ ವಿ.ವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಹೇಳಿದ್ದಾರೆ. Valmiki Sage
ನಾವು ಓದಿದ್ದು ಸಾಕು, ನಮ್ಮ ಮಕ್ಕಳು ಇದನ್ನು ಓದಬಾರದು. ಈ ಕಟ್ಟು ಕಥೆಗಳನ್ನ ನಮ್ಮ ಮಕ್ಕಳು ಓದಬಾರದು ಎಂದು ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಘಂಟಿ ಹೇಳಿದರು.
ವಾಲ್ಮೀಕಿ ಮಹರ್ಷಿ ದರೋಡೆಕೋರರಾಗಿದ್ದರಂತೆ. ನಾರದ ಮುನಿ ಬಂದು ಜ್ಞಾನೋದಯ ಮಾಡಿದ್ರಂತೆ. ಆಗ ಹೋಗಿ ತಪಸ್ಸು ಮಾಡಿ, ಹುತ್ತ ಬೆಳೆದು, ಮಳೆ ಬಂದು ಕರಗಿ ಹೋಗಿ, ಬಾಯಿ ತೆರೆದು ರಾಮ ರಾಮ ಅಂದ್ರಂತೆ. ಇದು ಕಟ್ಟು ಕಥೆ ಎಂದು ಘಂಟಿ ಹೇಳಿದರು.
ವಾಲ್ಮೀಕಿ ಸಂಸ್ಕೃತ ಭಾಷೆಯನ್ನು ಓದಿದವರು. ಹಾಗೇ ಹೇಳಿದ್ರೆ ಸಮುದಾಯದವರು ವಾಲ್ಮೀಕಿಗಳು ಆಗುತ್ತಾರೆ ಎಂದು ಹೀಗೆ ಹೇಳಿದ್ದಾರೆ. ತಳಸಮುದಾಯದ ನಾಯಕರ ಮೇಲೆ ಈ ರೀತಿಯಾದ ಕಥೆಗಳನ್ನು ಕಟ್ಟಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಅವರು ಕಂಪ್ಯೂಟರ್ ಯುಗದಲ್ಲಿ ಇದಿದ್ದರೆ ಕಂಪ್ಯೂಟರ್ ಮೂಲಕವೇ ರಾಮಾಯಣ ಬರೆಯುತ್ತಿದ್ದರು. ಆದ್ರೆ, ತಾಳೆಗರಿ ಮೂಲಕ ರಾಮಾಯಣ ಬರೆದಿದ್ದಾರೆ ಎಂದು ಡಾ.ಮಲ್ಲಿಕಾ ಎಸ್.ಘಂಟಿ ಹೇಳಿದ್ದಾರೆ.
ರಾಜನಹಳ್ಳಿಯಲ್ಲಿ ಇಂದಿನಿಂದ 2 ದಿನಗಳ ಕಾಲ ವಾಲ್ಮೀಕಿ ಜಾತ್ರೆ ನಡೆಯುತ್ತಿದೆ. ನಾಳೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಈ ವೇಳೆ, ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜೊತೆಗೆ, ರಾಷ್ಟ್ರಪತಿ ಪದಕ ಪಡೆದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಸಹ ಮಾಡಲಿದ್ದಾರೆ.
Anti cow slaughter bill ವಿಧಾನಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ
Published On - 8:42 pm, Mon, 8 February 21