ಬೆಂಗಳೂರು: ನಾಳೆ (ಜೂನ್ 12) ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ಬಳಿಯ ಕಲಾಗ್ರಾಮದಲ್ಲಿ ಹಿರಿಯ ಕವಿ, ಸಾಹಿತಿ ಸಿದ್ದಲಿಂಗಯ್ಯ ಅವರ ಅಂತ್ಯಸಂಸ್ಕಾರ ಬೌದ್ಧ ಧರ್ಮದ ವಿಧಿ ವಿಧಾನಗಳ ಪ್ರಕಾರ ಮತ್ತು ಕೊವಿಡ್ ನಿಯಮಾನುಸಾರ ನಡೆಯಲಿದೆ. ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನಾಳೆ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಡಾ.ಸಿದ್ದಲಿಂಗಯ್ಯ ಅವರ ಮೃತದೇಹದ ಸಾರ್ವಜನಿಕ ದರ್ಶನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಭವನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಡಾ.ಸಿದ್ದಲಿಂಗಯ್ಯ ಅವರ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.
ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಗೌರವಾರ್ಥವಾಗಿ ಜ್ಞಾನಭಾರತಿ ಬಳಿ ಸ್ಮಾರಕ ಸ್ಥಾಪಿಸುವಂತೆ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಡಾ. ಸಿದ್ದಲಿಂಗಯ್ಯ ಅವರನ್ನು ಮರಣೋತ್ತರವಾಗಿ ರಾಷ್ಟ್ರಕವಿ ಎಂದು ಘೋಷಿಸಬೇಕು. ರಾಷ್ಟ್ರಕವಿ ಎಂದು ಘೋಷಿಸಿ ಅವರ ಸೇವೆಯನ್ನು ಗೌರವಿಸಬೇಕು ಎಂದು ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೊಬ್ಬರೇ ಸಿದ್ದಲಿಂಗಯ್ಯ: ದಲಿತ ಆಕ್ರೋಶದ ಅಭಿವ್ಯಕ್ತಿಗೆ ಹಾಸ್ಯವನ್ನೂ ಅಸ್ತ್ರವಾಗಿಸಿದ್ದ ಅಪರೂಪದ ಕವಿ
ಸಿದ್ದಲಿಂಗಯ್ಯ ನುಡಿನಮನ : ‘ಪ್ರಖರ ಚಿಂತನೆ, ವಿಡಂಬನಾ ಪ್ರಜ್ಞೆ ಏಕಕಾಲಕ್ಕೆ ಸಿದ್ಧಿಸಿತ್ತು’
(Dr Siddalingaiahs funeral according to the rituals of Buddhism with government honors)
Published On - 10:07 pm, Fri, 11 June 21