ಶೋಭಾಗೆ ಸಂಕಷ್ಟ: ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳಿಗರೆಂಬ ಹೇಳಿಕೆ ವಿರುದ್ಧ ಡಿಎಂಕೆ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2024 | 2:01 PM

ನಿನ್ನೆ ನಗರ್ತಪೇಟೆಗೆ ಭೇಟಿ ನೀಡಿದ ವೇಳೆ ತಾವು ಹೇಳಿದ ಹೇಳಿಕೆಯೇ ಸಂಸದೆ ಶೋಭಾ ಕರದ್ಲಾಂಜೆ ಅವರಿಗೆ ಇಂದು ಸಂಕಷ್ಟ ತಂದಿದೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದಿಂದ ಶೋಭಾ ಕರದ್ಲಾಂಜೆ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶೋಭಾಗೆ ಸಂಕಷ್ಟ: ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳಿಗರೆಂಬ ಹೇಳಿಕೆ ವಿರುದ್ಧ ಡಿಎಂಕೆ ದೂರು
ಸಂಸದೆ ಶೋಭಾ ಕರದ್ಲಾಂಜೆ, DMK
Follow us on

ಬೆಂಗಳೂರು, ಮಾರ್ಚ್​​ 20: ಸಂಸದೆ ಶೋಭಾ ಕರದ್ಲಾಂಜೆ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್​​ ಹಿಂದೆ ತಮಿಳಿಗರು ಇದ್ದಾರೆ ಎಂದು ನಿನ್ನೆ ನಗರ್ತಪೇಟೆಗೆ ಭೇಟಿ ನೀಡಿದ ವೇಳೆ ಸಂಸದೆ ಶೋಭಾ ಕರದ್ಲಾಂಜೆ ಹೇಳಿಕೆ ನೀಡಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಹೀಗಾಗಿ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡಿನಲ್ಲಿ ತರಬೇತಿ ಪಡೆದು, ಬಾಂಬ್ ಇಡಲು ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ. ಎನ್​​ಐಎ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಎನ್​ಐಎ ಇದುವರೆಗೂ ಯಾರನ್ನ ಬಂಧನ ಮಾಡಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಶೋಭಾ ಕರಂದ್ಲಾಜೆ ರಾಜ್ಯದ ಜನತೆಗೆ ದ್ರೋಹವೆಸಗಿದ್ದಾರೆ: ಸಿದ್ದರಾಮಯ್ಯ

ಸಂಸದೆ ಶೋಭಾ ಕರದ್ಲಾಂಜೆ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷೇಮೆ ಕೇಳಿದ್ದರು. ಈ ಕುರಿತಾಗಿ ಟ್ವೀಟ್​ ಮಾಡಿದ್ದ ಅವರು, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ತಮಿಳಿಗರು ಇದ್ದಾರೆ ಎಂಬ ನನ್ನ ಹೇಳಿಕೆಯಿಂದ ತಮಿಳಿಗರಿಗೆ ನೋವಾಗಿದ್ದರೆ ನನ್ನ ಅಂತರಾಳದಿಂದ ನಾನು ಕ್ಷಮೆಯನ್ನು ಕೇಳುತ್ತೇನೆ. ಹಾಗೂ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದಿದ್ದಾರೆ.

ಸಂಸದೆ ಶೋಭಾ ಕರದ್ಲಾಂಜೆ ಟ್ವೀಟ್​

ನನ್ನ ತಮಿಳು ಸಹೋದರ ಸಹೋದರಿಯರೆ, ನನ್ನ ಮಾತುಗಳು ಬೆಳಕು ಚೆಲ್ಲುವ ಉದ್ದೇವ ಹೊಂದಿದ್ದವು ಎಂಬುವುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಹೇಳಿಕೆ ಕೆಲವರಿಗೆ ನೋವು ತಂದಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರ ಅನ್ವಯ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:48 pm, Wed, 20 March 24