ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ: ಗದಗದಲ್ಲಿ ಆತಂಕ ಹೊರಹಾಕಿದ ಸಚಿವ ಹೆಚ್​ಕೆ ಪಾಟೀಲ್

| Updated By: Rakesh Nayak Manchi

Updated on: Nov 14, 2023 | 6:05 PM

ಕರ್ನಾಟಕ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹವಾಮಾನ ವರದಿ ಪ್ರಕಾರ ಹಿಂಗಾರು ಮಳೆ ಕೊರತೆಯೂ ಬಹಳಷ್ಟಿದೆ. ರಾಜ್ಯದಲ್ಲಿ ಮಳೆ ಪರಿಸ್ಥಿತಿ ಗಂಭೀರ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ ಸಾಧ್ಯತೆ ಇದೆ ಎಂದು ಸಚಿವ ಹೆಚ್​ಕೆ ಪಾಟೀಲ್ ಅವರು ಗದಗದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ: ಗದಗದಲ್ಲಿ ಆತಂಕ ಹೊರಹಾಕಿದ ಸಚಿವ ಹೆಚ್​ಕೆ ಪಾಟೀಲ್
ಹೆಚ್​ಕೆ ಪಾಟೀಲ್
Follow us on

ಗದಗ, ನ.14: ಕರ್ನಾಟಕ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹವಾಮಾನ ವರದಿ ಪ್ರಕಾರ ಹಿಂಗಾರು ಮಳೆ ಕೊರತೆಯೂ ಬಹಳಷ್ಟಿದೆ. ರಾಜ್ಯದಲ್ಲಿ ಮಳೆ ಪರಿಸ್ಥಿತಿ ಗಂಭೀರ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ ಸಾಧ್ಯತೆ ಇದೆ ಎಂದು ಸಚಿವ ಹೆಚ್​ಕೆ ಪಾಟೀಲ್ (H.K.Patil) ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗದಗದಲ್ಲಿ ಮಾತನಾಡಿದ ಅವರು, ಮುಂದಿನ ಜೂನ್, ಜುಲೈ ವರೆಗೂ ಮಳೆ ಬರುವ ಲಕ್ಷಣಗಳು ಕಡಿಮೆ ಇದೆ. ವಾಡಿಕೆ ಮಳೆಗಿಂತ ಬಹಳ ಕೊರತೆ ಇದೆ. ಹೀಗಾಗಿ ಕುಡಿಯುವ ಕೊರತೆ ಸಾಧ್ಯತೆ ಇದೆ‌. ಸಾರ್ವಜನಿಕರು ನೀರಿನ ಬಳಕ ವಿಚಾರ ಮಾಡಿ ಬಳಕೆ ಮಾಡಬೇಕಾದ ಮಾನಸಿಕ ಸ್ಥಿತಿಗೆ ಬರಬೇಕಿದೆ. ನೀರು ಇದ್ದರೆ ಹೇಗೆ ಬೇಕಾದರೂ ಬಳಕೆ ಮಾಡುತ್ತೇವೆ. ಆದರೆ ನೀರಿನ ಕೊರತೆ ಆಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಮುಂಜಾಗ್ರತೆಯಿಂದ ಇರಬೇಕು ಎಂದರು.

ನೀರು ಹಾಳು‌ ಮಾಡದೇ ಮಿತವಾಗಿ ಬಳಸಬೇಕು ಅಂತ ಜಿಲ್ಲೆಯ ಜನರಿಗೆ ಮನವಿ ಮಾಡಿದ ಹೆಚ್​ಕೆ ಪಾಟೀಲ್, ಗದಗ ಜಿಲ್ಲೆಯಲ್ಲಿ ಭೀಕರ ಬರ ಹಿನ್ನೆಲೆ ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ಮೇವು ಬ್ಯಾಂಕ್ ತೆರೆಯಲು ಸೂಚಿಸಿದರು.

ಇದನ್ನೂ ಓದಿ: ಬೇಕಾಬಿಟ್ಟಿ ಪವನ​ ವಿದ್ಯುತ್ ಯಂತ್ರಗಳ ಅವಳಡಿಕೆ: ಸಚಿವ ಹೆಚ್​ಕೆ ಪಾಟೀಲ್​​ ತವರಲ್ಲಿ ಗಾಳಿಗೆ ತೂರಿದ್ರಾ ಕಾನೂನು?

ಈ ಬಗ್ಗೆ ನಿನ್ನೆ ಅಧಿಕಾರಿಗಳ ಸಭೆ ಮಾಡಿ ನಿರ್ದೇಶನ ನೀಡಿದ್ದೇನೆ. ಆದಷ್ಟು ಬೇಗ ಎಲ್ಲ ಪಂಚಾಯತ್​​ನಲ್ಲಿ ಮೇವು ಬ್ಯಾಂಕ್ ತೆರಲು ಸೂಚನೆ ನೀಡಿದ್ದೇನೆ. ಕುಡಿಯುವ ನೀರಿನ ವಿಚಾರದಲ್ಲಿ ನಮ್ಮ ಜಿಲ್ಲೆಯ ಯಾವುದೇ ಭಾಗದಲ್ಲಿ ಟ್ಯಾಂಕರ್​ನಿಂದ ಪೂರೈಸುವ ಸ್ಥಿತಿ‌ ಇಲ್ಲ. ಮೇವಿನ ಸಮ್ಯಸೆ ಇಲ್ಲ ಅನ್ನೋ ಮಾತು ಅಧಿಕಾರಿಗಳಲ್ಲಿದೆ. ಆದರೀ ಜಾನುವಾಗರಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾಗಿ ತಿಳಿಸಿದರು.

ನಮ್ಮ ಪಕ್ಷದಲ್ಲಿ ಲಿಂಗಾಯತ ನಾಯಕರು ಇಲ್ವಾ?: ಹೆಚ್​ಕೆ ಪಾಟೀಲ್ ಗರಂ

ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಲಿಂಗಾಯತರು ಒಗ್ಗೂಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಗರಂ ಆದ ಹೆಚ್​ಕೆ ಪಾಟೀಲ್, ಮನಸ್ಸಿಗೆ ಬಂದಹಾಗೇ ಲೆಕ್ಕ ಹಾಕಿದರೆ ನಡೆಯಲ್ಲ. ಲಿಂಗಾಯತ ಸಮುದಾಯದ ನಾಯಕರು ಯಾರೂ ಅಂತಾ ಪ್ರಶ್ನೆ ಇದೆ. ಶಾಮನೂರ ಶಿವಶಂಕರಪ್ಪನವರು ಲಿಂಗಾಯತ ಸಮಾಜದ ನಾಯಕರು. ಸಮುದಾಯದ ಜಾಗತಿಕ ಅಧ್ಯಕ್ಷರು. ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರು ಇಲ್ಲವಾ?. ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಲಿಂಗಾಯತ ನಾಯಕರು ಅಲ್ವಾ? ಇವಱರೂ ಲಿಂಗಾಯತ ನಾಯಕರಾಗಿ ಕಾಣಲ್ವಾ ಎಂದು ಕೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Tue, 14 November 23