ಕುಡಿದ ಮತ್ತಿನಲ್ಲಿ.. ರೋಡ್​ ರೋಲರ್ ಚಾಲಕನ ಕತ್ತು ಹಿಸುಕಿ ಕೊಲೆಗೈದ ಪ್ರಾಣಸ್ನೇಹಿತರು

| Updated By: KUSHAL V

Updated on: Dec 15, 2020 | 7:11 PM

ನಗರದ ಕುಮಂಡಿ ‘A’ ಬ್ಲಾಕ್​ನಲ್ಲಿ ರೋಡ್ ರೋಲರ್ ಚಾಲಕನಾಗಿದ್ದ ರವಿ(26) ಎಂಬ ಯುವಕನ ಹತ್ಯೆಯಾಗಿದೆ. ಮೃತನ ಸ್ನೇಹಿತರು ಮದ್ಯದ ಅಮಲಿನಲ್ಲಿ ರವಿಯನ್ನು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದೆ.

ಕುಡಿದ ಮತ್ತಿನಲ್ಲಿ.. ರೋಡ್​ ರೋಲರ್ ಚಾಲಕನ ಕತ್ತು ಹಿಸುಕಿ ಕೊಲೆಗೈದ ಪ್ರಾಣಸ್ನೇಹಿತರು
ಘಟನಾ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
Follow us on

ಮೈಸೂರು: ನಗರದ ಕುಮಂಡಿ ‘A’ ಬ್ಲಾಕ್​ನಲ್ಲಿ ರೋಡ್ ರೋಲರ್ ಚಾಲಕನಾಗಿದ್ದ ರವಿ(26) ಎಂಬ ಯುವಕನ ಹತ್ಯೆಯಾಗಿದೆ. ಮೃತನ ಸ್ನೇಹಿತರು ಮದ್ಯದ ಅಮಲಿನಲ್ಲಿ ರವಿಯನ್ನು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದೆ.

ರವಿ ಕಳೆದ ಕೆಲವು ದಿನಗಳಿಂದ ಒಬ್ಬನೇ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಆತನ ಸ್ನೇಹಿತರು ಮನೆಗೆ ಬಂದು ರವಿ ಜೊತೆಯಲ್ಲೇ ಕುಡಿದು ಪಾರ್ಟಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ, ಮದ್ಯದ ಅಮಲಿನಲ್ಲಿ ರವಿ ಸ್ನೇಹಿತರು ಆತನ ಕತ್ತುಬಿಗಿದು ಕೊಲೆ ಮಾಡಿರುವ ಸಂಶಯ ಮೂಡಿದೆ.  ಸದ್ಯ, ಪ್ರಕರಣ ಸಂಬಂಧ N.R​. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.