ಬರ ಹೆಚ್ಚಾಗಬಹುದು: ಕುಡಿಯುವ ನೀರು, ಮೇವು ಸಿದ್ಧತೆಗೆ ಡಿಸಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದು, ಬರದ ಪರಿಸ್ಥಿತಿ ಇಷ್ಟು ದಿನ ಹತೋಟಿಯಲ್ಲಿ ಇತ್ತು. ಇನ್ನು ಮುಂದೆ ಇನ್ನಷ್ಟು ಸಮಸ್ಯೆ ಆಗಬಹುದು. ಯಾವುದಾದರೂ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದರೆ 24 ಗಂಟೆ ಒಳಗೆ ವ್ಯವಸ್ಥೆ ಮಾಡಲು ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಕುಡಿಯುವ ನೀರು, ಮೇವು ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 1: ಬರದ ಪರಿಸ್ಥಿತಿ ಇಷ್ಟು ದಿನ ಹತೋಟಿಯಲ್ಲಿ ಇತ್ತು. ಇನ್ನು ಮುಂದೆ ಇನ್ನಷ್ಟು ಸಮಸ್ಯೆ ಆಗಬಹುದು. ಯಾವುದಾದರೂ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದರೆ 24 ಗಂಟೆ ಒಳಗೆ ವ್ಯವಸ್ಥೆ ಮಾಡಲು ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಕುಡಿಯುವ ನೀರು, ಮೇವು ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಟ್ಯಾಂಕರ್ಗಳ ಟೆಂಡರ್ ಮಾಡಿಟ್ಟುಕೊಳ್ಳಲು ಸೂಚಿಸಿದೆ. ಟ್ಯಾಂಕರ್ ನೀರಿನಿಂದ ಜನರಿಗೆ ನೀರು ಸರಬರಾಜು ಮಾಡಿದರೆ ಸಮಾಧಾನ ಇಲ್ಲ. ಹಾಗಾಗಿ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
991 ಪರವಾನಗಿ ಸರ್ವೆಯರ್ಗಳನ್ನು ಎಲ್ಲ ಜಿಲ್ಲೆಗಳಿಗೆ ಒದಗಿಸುತ್ತಿದ್ದೇವೆ. 364 ಸರ್ಕಾರಿ ಸರ್ವೆಯರ್ ನೇಮಕಾತಿ ಮಾಡುತ್ತಿದ್ದೇವೆ. ಮೇಲುಸ್ತುವಾರಿಗೆ 27 ಸರ್ವೆ ಅಸಿಸ್ಟಂಟ್ ಲ್ಯಾಂಡ್ ರೆಕಾರ್ಡ್ಸ್ಗಳ ನೇಮಕ ಮಾಡುತ್ತಿದ್ದೇವೆ. ಆಧುನಿಕ ಸರ್ವೆ ಉಪಕರಣಗಳ ಖರೀದಿ ಮಾಡಿ ಎಲ್ಲ ತಾಲೂಕುಗಳಿಗೆ ನೀಡುತ್ತಿದ್ದೇವೆ. 18 ಕೋಟಿ ರೂ. ವೆಚ್ಚದಲ್ಲಿ ಸರ್ವೆ ರೋವರ್ ಉಪಕರಣಗಳ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಆಕಾರ್ ಬಂದ್ ಡಿಜಿಟಲೈಸೇಷನ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. 65 ಲಕ್ಷ ರೂ. ಆರ್ಟಿಸಿಯ ಆಕಾರ್ ಬಂದ್ ಡಿಜಿಟಲೈಸ್ ಮಾಡುವುದಕ್ಕೆ ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. 66 ಸಾವಿರ ಸರ್ಕಾರಿ ಸರ್ವೆ ನಂಬರ್ಗಳಲ್ಲಿ ಭೂಮಂಜುರಾತಿ ಆಗಿದೆ. ದುರಸ್ಥಿಗೆ ಇನ್ನೂ ಲಕ್ಷಾಂತರ ಪ್ರಕರಣ ಬಾಕಿ ಇರಬಹುದು. 66 ಸಾವಿರ ಸರ್ವೆ ಮಂಜೂರಾಗಿದ್ದು ಕನಿಷ್ಟ 20 ಸಾವಿರ ಸರ್ವೆ ನಂಬರ್ಗೆ ಒನ್ ಟು ಫೈವ್ ನಮೂನೆ ಮಾಡಬೇಕು. ಒನ್ ಟು ಫೈವ್ ಅಂದರೆ ಮುಂದೆ ಆಕಾರ್ ಬಂದ್ ಸೇರಿ ಎಲ್ಲ ಸರ್ವೆ ಕೆಲಸ ಸರಳವಾಗಲಿದೆ.
ಯಾದಗಿರಿ ನಗರದಲ್ಲೂ ಉಂಟಾದ ಕುಡಿಯುವ ನೀರಿನ ಸಮಸ್ಯೆ
ಯಾದಗಿರಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಗರದ ಅಂಬೇಡ್ಕರ್ ಬಡಾವಣೆಯ ಜನ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಬಿಂದಿಗೆ ಹಿಡಿದು ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಪಕ್ಕದಲ್ಲೇ ಭೀಮಾ ನದಿ ಇದ್ದರೂ ನಗರದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ವಾರಕ್ಕೆ ಒಂದು ಬಾರಿ ನೀರು ಬರುತ್ತೆ. ನೀರಿಗಾಗಿ ಮಹಿಳೆಯರು ಕಚ್ಚಾಡುವಂತಾಗಿದೆ.
ಇದನ್ನೂ ಓದಿ: ಎಫ್ ಎಸ್ ಎಲ್ ವರದಿ ಸಲ್ಲಿಕೆಯಾದ ಕೂಡಲೇ ಅದನ್ನು ಸಾರ್ವಜನಿಕಗೊಳಿಸಲಾಗುವುದು: ಸಿದ್ದರಾಮಯ್ಯ
ಖಾಲಿ ಬಿಂದಿಗೆ ಹಿಡಿದು ನೀರಿಗಾಗಿ ಮಹಿಳೆಯರು ಆಗ್ರಹಿಸುತ್ತಿದ್ದಾರೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋಗಿ ನೀರು ತರಬೇಕಾಗಿದೆ. ಆ ಬಡಾವಣೆಯ ಜನ ಕೊಟ್ಟರೆ ಮಾತ್ರ ನೀರು ತರಬೇಕು ಇಲ್ಲದೆ ಇಲ್ಲ. ಬೆಳಗ್ಗೆ ಎದ್ದು ಮಕ್ಕಳು ಹಿರಿಯರು ಸೇರಿ ನೀರು ತರುವುದಕ್ಕೆ ಹೋಗಬೇಕಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.