ಬೆಂಗಳೂರು: ಯಲಹಂಕ ಬಳಿಯ ಬಾಲಾಜಿ ಲೇಔಟ್ನಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ಗಳಾಗಿದ್ದ, ನೈಜೀರಿಯಾ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಿದೇಶಿ ಪ್ರಜೆಯಾದ ಯುದೆಯುದೆಜ, ಪ್ರಸೂನ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ.
ಕ್ರಿಸ್ಮಸ್ ಜೊತೆ ಜೊತೆಗೆ ಹೊಸ ವರ್ಷಾಚರಣೆಯ ಸಮಯ ಕೂಡ ಹತ್ತಿರವಾಗುತ್ತಿರುವುದರಿಂದ ಡ್ರಗ್ಸ್ ಮಾರಾಟಕ್ಕೆಂದು ಈ ಪೆಡ್ಲರ್ಗಳು ಪ್ಲಾನ್ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ಶುರು ಮಾಡಿದ್ದರು.
ಈ ವೇಳೆ ಯಲಹಂಕದ ಬಾಲಾಜಿ ಲೇಔಟ್ನಲ್ಲಿ ಡ್ರಗ್ಸ್ ವ್ಯವಹಾರ ನಡೆಸುತ್ತಿರುವುದು ತಿಳಿದು ಬಂದಿದೆ. ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರಲ್ಲಿದ್ದ 5ಲಕ್ಷ ಬೆಲೆ ಬಾಳುವ 100 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.
ನ್ಯೂ ಇಯರ್ ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ: ಸಿಸಿಬಿ ಬಲೆಗೆ ಸಿಕ್ಕಿ ಬಿದ್ದ ಮಿಕಗಳು