ಬೆಂಗಳೂರು: ಸಿಡಿಐಯ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿ(33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್ನಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ಆಪ್ತ ಸ್ನೇಹಿತ ಮನು ಎಂಬುವವನ ಮನೆಗೆ ಊಟಕ್ಕೆ ಹೋಗಿದ್ದ ಮಹಿಳಾ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನುವಿನ ಮನೆಯಲ್ಲಿ ಪಾರ್ಟಿಗೆ ಸಿದ್ಧತೆ ನಡೆದಿತ್ತು. ಪಾರ್ಟಿಯ ವೇಳೆ ಮದ್ಯ ಸೇವಿದ್ದರು. ಬಳಿಕೆ ಕೋಣೆಗೆ ತೆರಳಿ ರಾತ್ರಿ 10 ಗಂಟೆಯ ಸರಿಸುಮಾರಿಗೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದು ಲಕ್ಷ್ಮಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮನು ಕಾಂಟ್ರೆಕ್ಟ್ ವೃತ್ತಿಯಲ್ಲಿ ತೊಡಗಿದ್ದವನು. ಬುಧವಾರ ಅಂದರೆ ನಿನ್ನೆ ಸಂಜೆ ಊಟಕ್ಕೆಂದು ಸ್ನೇಹಿತನ ಮನೆಗೆ ಡಿಎಸ್ಪಿ ಲಕ್ಷ್ಮೀ ಬಂದಿದ್ದರು. ಅಧಿಕಾರಿ ಲಕ್ಷ್ಮಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ಅವರ ಪತಿ ಹೊರ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8 ವರ್ಷವಾದರೂ ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಲಕ್ಷ್ಮಿ 2014ರ ಕೆಎಸ್, ಪಿಎಸ್ ಬ್ಯಾಚ್ನ ಅಧಿಕಾರಿಯಾಗಿದ್ದವರು. 2017ರಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಆಪ್ತ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ
Published On - 8:24 am, Thu, 17 December 20