AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ, ಶೀಘ್ರದಲ್ಲೇ ಕೆಲಸ ಪುನರಾರಂಭ

ಕಾರ್ಮಿಕರ ದಾಂದಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ ಶೀಘ್ರದಲ್ಲೇ ಕೆಲಸ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲ ಕಿಡಿಗೇಡಿಗಳು ಮಾಡಿದ ತಪ್ಪಿನಿಂದ ಕೆಲಸವಿಲ್ಲದೇ ಕಂಗಲಾಗಿದ್ದ ಅದೆಷ್ಟೋ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ, ಶೀಘ್ರದಲ್ಲೇ ಕೆಲಸ ಪುನರಾರಂಭ
ಆಯೇಷಾ ಬಾನು
|

Updated on:Dec 17, 2020 | 11:31 AM

Share

ಕೋಲಾರ: ಸುನಾಮಿಯಂತೆ ನುಗ್ಗಿ ಕಂಪನಿಯಲ್ಲಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ರು. ಕಣ್ಣಿಗೆ ಕಾಣಿಸಿದ ಕಾರು, ಲ್ಯಾಪ್‌ಟ್ಯಾಪ್ ಸೇರಿದಂತೆ ಇನ್ನಿತರೆ ವಸ್ತುಗಳನ್ನೆಲ್ಲಾ ಪುಡಿಗಟ್ಟಿದ್ರು. ಕಳೆದ 4 ತಿಂಗಳಿನಿಂದ ವೇತನ ಕೊಡ್ತಿಲ್ಲ. ಮನವಿ ಮಾಡಿದ್ರು ರೆಸ್ಪಾನ್ಸ್ ಮಾಡ್ತಿಲ್ಲ ಅಂತಾ ಕಳೆದ ವಾರ ಕೋಲಾರ ತಾಲೂಕಿನ ನರಸಾಪುರದ ಬಳಿಯಿರುವ ವಿಸ್ಟ್ರಾನ್ ಕಂಪನಿಗೆ ಸಾವಿರಾರು ಕಾರ್ಮಿಕರು ನುಗ್ಗಿದ್ರು.

ನೋಡ ನೋಡ್ತಿದ್ದಂತೆ ಇಡೀ ಕಂಪನಿಯಲ್ಲಿ ಸಿಕ್ಕಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಹುಡುಕಿ ಹುಡುಕಿ ಕೆಲ ಕಾರ್ಮಿಕರನ್ನ ಬಂಧಿಸಿದ್ರು. ಬಳಿಕ ಅದೆಷ್ಟೋ ಮಂದಿ ಕೆಲಸವಿಲ್ಲದೇ ಚಿಂತೆಗೊಳಗಾಗಿದ್ರು.

ಇಷ್ಟೆಲ್ಲಾ ಬೆಳವಣಿಗೆ ನಂತರ ಇದೀಗ ಕಂಪನಿ ಶೀಘ್ರದಲ್ಲೇ ಕಾರ್ಯಾರಂಭ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ, ಜೊತೆಗೆ ದಾಂದಲೆ ವೇಳೆ ಸರ್ಕಾರ ನೀಡಿದ ನೆರವಿಗೆ ಅಭಿನಂಧನೆ ಸಲ್ಲಿಸಿರುವ ಕಂಪನಿ, ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಈ ಮಧ್ಯೆ ತೈವಾನ್​ನಿಂದ ತಂಡವೊಂದು ಕಂಪನಿಗೆ ಭೇಟಿ ನೀಡಿ ನಷ್ಟವಾಗಿರುವ ಕುರಿತು ಮಾಹಿತಿ ಪಡೆದಿದೆ. ಇನ್ನು ಕೆಲಸ ಕಳೆದುಕೊಂಡಿದ್ದ ಕೆಲವು ಕಾರ್ಮಿಕರು ಗೇಟ್​ಬಳಿ ನಿಂತು ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ.

161 ಜನರ ಬಂಧನ: ಗಲಾಟೆ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ 161 ಜನರನ್ನು ಬಂಧಿಸಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಬಂಧಿತರು ದಾಂದಲೆ ವೇಳೆ ಕಳುವು ಮಾಡಿದ ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್‌ಗಳಿಗಾಗಿ ಕಂಪನಿ ಬಳಿಯ ನೀಲಗಿರಿ ತೋಪಿನಲ್ಲಿ ಆರೋಪಿಗಳೊಂದಿಗೆ ಹುಡುಕಾಟ ನಡೆಸಿದ್ರು. ಕೆಲ ಮೊಬೈಲ್​ ಫೋನ್​ ಹಾಗೂ ಲ್ಯಾಪ್​ಟ್ಯಾಪ್​ಗಳು ಸಿಕ್ಕಿವೆ ಎನ್ನಲಾಗಿದೆ. ಇನ್ನು ಪ್ರತಿಭಟನೆಗೆ ಕರೆ ನೀಡಿದ್ದ ಎಸ್​ಎಫ್​ಐ ಸಂಘಟನೆ ತಾಲೂಕು ಅಧ್ಯಕ್ಷ ಶ್ರೀಕಾಂತ್​ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದೇ ವೇಳೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಕಂಪನಿಯಲ್ಲಿ ದಾಂದಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಮಾಯಕರು ಬಲಿಯಾಗಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಒಟ್ನಲ್ಲಿ ವಿಸ್ಟ್ರಾನ್ ಕಂಪನಿ ಶೀಘ್ರದಲ್ಲೇ ಕೆಲಸ ಆರಂಭಿಸುವುದಾಗಿ ಹೇಳುವ ಮೂಲಕ ಕಾರ್ಮಿಕರಲ್ಲಿ ಆಶಾಭಾವನೆ ಮೂಡಿಸಿದೆ. ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಸಾವಿರಾರ ಕಾರ್ಮಿಕರ ಆತಂಕ ದೂರವಾಗಿದೆ.

Published On - 6:56 am, Thu, 17 December 20

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?