AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಹ್ಮಾವರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರದೆದುರೇ ಮದ್ಯಸೇವನೆ ಮಾಡಿದ ದಲಿತ ಮುಖಂಡರು

ಬ್ರಹ್ಮಾವರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರದೆದುರೇ ಮದ್ಯಸೇವನೆ ಮಾಡಿದ ದಲಿತ ಮುಖಂಡರು

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 07, 2023 | 5:32 PM

Share

ಇಲ್ಲಿರುವ ವಿವೇಕಹೀನರು ಕುಡಿಯಲು, ತಿನ್ನಲು ಸರ್ವ ಸ್ವತಂತ್ರರು, ಅದನ್ನು ನಾವು ಪ್ರಶ್ನಿಸಲಾರೆವು. ಅದರೆ ಅವರು ಕುಡಿತಕ್ಕೆ ಆರಿಸಿಕೊಂಡ ಜಾಗವಾದರೂ ಯಾವುದು? ಒಬ್ಬ ಮಹಿಳೆ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಕುಡುಕರು ಅವರಿಗೆ ಬೆದರಿಕೆ ಕೂಡ ಹಾಕಿದ್ದರಿಂದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ (Dr BR Ambedkar) ಅವರನ್ನು ನಮ್ಮ ದೇಶದ ದಲಿತ ಸಮುದಾಯ (Dalit community) ದೇವರಂತೆ ಪೂಜಿಸುತ್ತದೆ. ಆದರೆ ದಲಿತ ಸಮುದಾಯಕ್ಕೆ ಕಳಂಕರಾಗಿರುವ ಈ ಜನರನ್ನು ನೋಡಿ ಮಾರಾಯ್ರೇ. ಜಿಲ್ಲೆಯ ಬ್ರಹ್ಮಾವರದ (Brahmavara) ತೆಂಕಭಿರ್ತಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ (Ambedkar Bhavan) ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮತ್ತು ಸಂಘದ ಕೆಲ ಸದಸ್ಯರು ನಾಚಿಕೆ ಮತ್ತು ಮಾನವನ್ನು ಭವನದ ಹೊರಗಿಟ್ಟು ಒಳಗೆ ಮದ್ಯ ಸೇವಿಸುತ್ತಾ ಕುಳಿತಿದ್ದಾರೆ. ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆಯೇ ಇವರೆಲ್ಲ ಕುಡಿದು ಮತ್ತೇರಿಸಿಕೊಂಡು ಮೈ ಮೇಲೆ ಪ್ರಜ್ಞೆಯಿಲ್ಲದೆ ಬಿದ್ದಿದ್ದಾರೆ. ಅಂಬೇಡ್ಕರ್ ಭವನ, ಸಮುದಾಯ ಭವನಗಳಿಗೆ ಎಲ್ಲ ಸರ್ಕಾರಗಳು ಅನುದಾನ ನೀಡುತ್ತವೆ. ಆದರೆ ಭವನಗಳಲ್ಲಿ ಇಂಥ ಹೀನ ಚಟಿವಟಿಕೆಗಳು ನಡೆಯಲಾಂಭಿಸಿದರೆ ಸರ್ಕಾರ, ಹೊಸ ಭವನಗಳ ನಿರ್ಮಾಣಕ್ಕೆ ಕತ್ತರಿ ಹಾಕಿದರೆ ಆಶ್ಚರ್ಯವಿಲ್ಲ. ಇಲ್ಲಿರುವ ವಿವೇಕಹೀನರು ಕುಡಿಯಲು, ತಿನ್ನಲು ಸರ್ವ ಸ್ವತಂತ್ರರು, ಅದನ್ನು ನಾವು ಪ್ರಶ್ನಿಸಲಾರೆವು. ಅದರೆ ಅವರು ಕುಡಿತಕ್ಕೆ ಆರಿಸಿಕೊಂಡ ಜಾಗವಾದರೂ ಯಾವುದು? ಒಬ್ಬ ಮಹಿಳೆ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಕುಡುಕರು ಅವರಿಗೆ ಬೆದರಿಕೆ ಕೂಡ ಹಾಕಿದ್ದರಿಂದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 07, 2023 05:31 PM