ಗದಗ: ತರಗತಿ ಬಹಿಷ್ಕರಿಸಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ; ಯಾಕೆ ಗೊತ್ತಾ?
ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಗದಗ(Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬಿಸಿಯೂಟ(Bisiyuta), ಪೌಷ್ಟಿಕ ಆಹಾರ ನೀಡದಿದ್ದಕ್ಕೆ ಶಾಲೆಗೆ ಬೀಗ ಜಡಿದ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿ ಎ.ಎಸ್ ರಾಠೋಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ, ನ.07: ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಗದಗ(Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬಿಸಿಯೂಟ(Bisiyuta), ಪೌಷ್ಟಿಕ ಆಹಾರ ನೀಡದಿದ್ದಕ್ಕೆ ಶಾಲೆಗೆ ಬೀಗ ಜಡಿದ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿ ಎ.ಎಸ್ ರಾಠೋಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಳಿಂದ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಬಾಳೆ ಹಣ್ಣು ಸೇರಿ ಇನ್ನಿತರ ಪೌಷ್ಟಿಕ ಆಹಾರ ನೀಡದೇ, ಧಾನ್ಯಗಳಿಲ್ಲದ ತಿಳಿ ಸಾಂಬಾರು ಹಾಗೂ ಹುಳು ಹತ್ತಿದ ಕೊಳೆತ ತರಕಾರಿಯನ್ನು ಬಳಕೆ ಮಾಡಿ ಅಸಮರ್ಪಕವಾಗಿ ಮಧ್ಯಾಹ್ನ ಬಿಸಿಯೂಟವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು 1 ರಿಂದ 7ನೇ ತರಗತಿ ವರೆಗೆ ಬರೊಬ್ಬರಿ 441 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿದ್ದರೂ ಮುಖ್ಯ ಶಿಕ್ಷಕಿ ಎ.ಎಸ್ ರಾಠೋಡ ಅವರು ಮಕ್ಕಳ ಹಿತ ಕಾಪಾಡುತ್ತಿಲ್ಲ, ನಮ್ಮೂರ ಶಾಲೆಗೆ ಇಂಥಹ ಶಿಕ್ಷಕರು ಬೇಡ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Tue, 7 November 23