ಕೊಳ್ಳುವಾಗಲೇ ಕಣ್ಣೀರು ತರಿಸ್ತಿದೆ ಈರುಳ್ಳಿ, ಇನ್ನೂ 2 ತಿಂಗಳು ಇದೇ ಕಣ್ಣೀರು ಗೋಳು

|

Updated on: Sep 24, 2019 | 11:53 AM

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೊಳ್ಳುವಾಗಲೇ ಮಹಿಳೆಯರಿಗೆ ಕಣ್ಣೀರು ತರಿಸ್ತಿದೆ. ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ದೇಶದಲ್ಲೇ ಎರಡನೇ ಅತಿಹೆಚ್ಚು ಈರುಳ್ಳಿ ಬೆಳೆಯವ ಕರ್ನಾಟಕದಲ್ಲೇ ಈರುಳ್ಳಿ ದರ 80 ರೂ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪ್ರತಿ ಕೆಜಿgಎ 50 ರೂ ಗೆ ಏರಿದೆ. ಇನ್ನು, ಗಾತ್ರದಲ್ಲಿ ಸಣ್ಣವಾಗಿರುವ ಈರುಳ್ಳಿಯ ದರ ಕೆಜಿಗೆ 30 ರಿಂದ 40 ರೂಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಕೇಳಿ ಗೃಹಿಣಿಯರು ಕಣ್ಣೀರೋ […]

ಕೊಳ್ಳುವಾಗಲೇ ಕಣ್ಣೀರು ತರಿಸ್ತಿದೆ ಈರುಳ್ಳಿ, ಇನ್ನೂ 2 ತಿಂಗಳು ಇದೇ ಕಣ್ಣೀರು ಗೋಳು
ಈರುಳ್ಳಿ ದರದಲ್ಲಿ ಏರಿಕೆ
Follow us on

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೊಳ್ಳುವಾಗಲೇ ಮಹಿಳೆಯರಿಗೆ ಕಣ್ಣೀರು ತರಿಸ್ತಿದೆ.

ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ದೇಶದಲ್ಲೇ ಎರಡನೇ ಅತಿಹೆಚ್ಚು ಈರುಳ್ಳಿ ಬೆಳೆಯವ ಕರ್ನಾಟಕದಲ್ಲೇ ಈರುಳ್ಳಿ ದರ 80 ರೂ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪ್ರತಿ ಕೆಜಿgಎ 50 ರೂ ಗೆ ಏರಿದೆ. ಇನ್ನು, ಗಾತ್ರದಲ್ಲಿ ಸಣ್ಣವಾಗಿರುವ ಈರುಳ್ಳಿಯ ದರ ಕೆಜಿಗೆ 30 ರಿಂದ 40 ರೂಗೆ ಮಾರಾಟವಾಗುತ್ತಿದೆ.

ಈರುಳ್ಳಿ ಬೆಲೆ ಕೇಳಿ ಗೃಹಿಣಿಯರು ಕಣ್ಣೀರೋ ಕಣ್ಣೀರು ..
ಇನ್ನೂ 2 ತಿಂಗಳು ಈರುಳ್ಳಿ ಬೆಲೆ ಇದೇ ರೀತಿ ಏರಿಕೆಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಲ್ಲೂ ಕೊರತೆ ಎದುರಾಗಿದೆ. ಕಳೆದ ಒಂದು ತಿಂಗಳಿನಿಂದ ಈರುಳ್ಳಿ ದರ ನಿರಂತರ ಏರಿಕೆ ಕಾಣ್ತಿದೆ. ಈರುಳ್ಳಿ, ಕಳೆದ ವಾರ ನಲವತ್ತು ರುಪಾಯಿ ಮಾರಾಟ ದರ ಕಂಡಿತ್ತು.