‘ಮದ್ಯಾ’ಹ್ನದ ವೇಳೆಗೆ TV9ನಲ್ಲಿ ಪ್ರಸಾರವಾದ ಎಣ್ಣೆಪ್ರಿಯರ ‘ಟಾಪ್’ 40 ಹೆಡ್ಡಿಂಗ್​​ಗಳು!

|

Updated on: May 05, 2020 | 1:13 PM

ಎರಡನೆಯ ದಿನವೂ ‘ಮದ್ಯಾ’ಹ್ನದ ವರೆಗೂ ಯಶಸ್ವೀ ಪ್ರ‘ದರ್ಶನ’ | ‘ಪೆಗ್’ಗಾಗಿ ‘ಲೆಗ್’ ನೋವಿದ್ರೂ ಸಾಲು ಸಾಲು ಕ್ಯೂ| ‘ಸಾಲು’ತ್ತಿಲ್ಲ ಅಂತಿದ್ದಾರೆ ಎಣ್ಣೆ ಪ್ರಿಯರು..| ಎಣ್ಣೆಗೂ ಮೊದಲು ‘ಅಂತರ’.. ಆಮೇಲೆ ‘ಅವಾಂತರ’| ‘ಮದ್ಯಾ’ಹ್ನಕ್ಕೆ ಚಿತ್ ಆಗುತ್ತಾರಾ ಮದ್ಯ ಪ್ರಿಯರು! ‘ಕಪ್ ನಮ್ಮದೇ.‌.’ ಎಂದ ‘ರಾಯಲ್ ಚಾಲೆಂಜರ್ಸ್’ ಫ್ಯಾನ್ (ಶಿವಸ್ವಾಮಿ ನುಣ್ಣೂರು, ಟಿವಿ9 -ಬುಲೆಟಿನ್ ಪ್ರೊಡ್ಯೂಸರ್) 1) ಇವತ್ತೂ ಅದೇ ‘ಸ್ಪಿರಿಟ್’ನಲ್ಲೇ ಬಂದ ಮದ್ಯಪ್ರಿಯರು..! 2) ‘ಬ್ರ್ಯಾಂಡ್’ಗಳ ಮೇಲೆ ‘ಅಂಬಾಸಿಡರ್’ಗಳ ಕಣ್ಣು 3) ‘ಬಾಕ್ಸ್’ ‘ಮದ್ಯ’ ನಿಂತು ‘ಬಾಕ್ಸ್’ಗಳನ್ನೇ ಎತ್ತೋಯ್ತಾರೆ […]

‘ಮದ್ಯಾ’ಹ್ನದ ವೇಳೆಗೆ TV9ನಲ್ಲಿ ಪ್ರಸಾರವಾದ ಎಣ್ಣೆಪ್ರಿಯರ ‘ಟಾಪ್’ 40 ಹೆಡ್ಡಿಂಗ್​​ಗಳು!
Follow us on

ಎರಡನೆಯ ದಿನವೂ ‘ಮದ್ಯಾ’ಹ್ನದ ವರೆಗೂ ಯಶಸ್ವೀ ಪ್ರ‘ದರ್ಶನ’ | ‘ಪೆಗ್’ಗಾಗಿ ‘ಲೆಗ್’ ನೋವಿದ್ರೂ ಸಾಲು ಸಾಲು ಕ್ಯೂ| ‘ಸಾಲು’ತ್ತಿಲ್ಲ ಅಂತಿದ್ದಾರೆ ಎಣ್ಣೆ ಪ್ರಿಯರು..| ಎಣ್ಣೆಗೂ ಮೊದಲು ‘ಅಂತರ’.. ಆಮೇಲೆ ‘ಅವಾಂತರ’| ‘ಮದ್ಯಾ’ಹ್ನಕ್ಕೆ ಚಿತ್ ಆಗುತ್ತಾರಾ ಮದ್ಯ ಪ್ರಿಯರು! ‘ಕಪ್ ನಮ್ಮದೇ.‌.’ ಎಂದ ‘ರಾಯಲ್ ಚಾಲೆಂಜರ್ಸ್’ ಫ್ಯಾನ್
(ಶಿವಸ್ವಾಮಿ ನುಣ್ಣೂರು, ಟಿವಿ9 -ಬುಲೆಟಿನ್ ಪ್ರೊಡ್ಯೂಸರ್)

1) ಇವತ್ತೂ ಅದೇ ‘ಸ್ಪಿರಿಟ್’ನಲ್ಲೇ ಬಂದ ಮದ್ಯಪ್ರಿಯರು..!
2) ‘ಬ್ರ್ಯಾಂಡ್’ಗಳ ಮೇಲೆ ‘ಅಂಬಾಸಿಡರ್’ಗಳ ಕಣ್ಣು
3) ‘ಬಾಕ್ಸ್’ ‘ಮದ್ಯ’ ನಿಂತು ‘ಬಾಕ್ಸ್’ಗಳನ್ನೇ ಎತ್ತೋಯ್ತಾರೆ
4) ‘ರೌಂಡ್’ ಸರ್ಕಲ್​ನಲ್ಲಿ ಇವತ್ತು ಎಷ್ಟು ‘ರೌಂಡ್’..?
5) ಧರಣಿ ಮಂಡಲ ‘ಮದ್ಯ’ದೊಳಗೆ..!
6) ಮದ್ಯಪಾನ ‘ಹಾನಿಕಾರಕ’.. ಇವರಿಗೆ ‘ಹನಿ’ಕಾರಕ..!
7) ಕಿಮೀ ಗಟ್ಟಲೇ ಕ್ಯೂನಲ್ಲಿ ನಿಂತ್ರೂ ಏನ್ ‘ಸ್ಪಿರಿಟ್’ ಗುರು..!
8) ಇವತ್ತಾದರೂ ‘ಓಟಿ’ ಬಿಟ್ಟು ‘ಡ್ಯೂಟಿ’ಗೆ ಹೋಗ್ರಣ್ಣ..!
9) ‘ಕಪ್ ನಮ್ಮದೇ.‌.’ ಎಂದ ‘ರಾಯಲ್ ಚಾಲೆಂಜರ್ಸ್’ ಫ್ಯಾನ್
10. ನಾವೇ ‘ಕಿಂಗ್ ಫಿಷರ್’ ಅಂತಿದ್ದಾರೆ ‘ಕ್ವೀನ್ಸ್’
12) ‘ಕುಡುಕರ ಸಾಮ್ರಾಜ್ಯ’ದಲ್ಲಿ ‘ಬೀರ್’ಬಲ್ಲರು..!
13) ಎಣ್ಣೆ ‘ಹೀರೋ’ದಕ್ಕೆ ಸಾಲುಗಟ್ಟಿ ನಿಂತ ಮಾನಿನಿಯರು..!
14) ‘ಎಣ್ಣೆ’ಗಾಗಿ ಖುಲ್ಲಂ ಖುಲ್ಲಾ ಕ್ಯೂ ನಿಂತ ‘ಹೆಣ್ಣು’
15) ‘ಗಂಡ್ ಮಕ್ಕಳ ತವರು’ ಮನೆಗೆ ಬಂದ ಹೆಣ್ಣೈಕ್ಳು..!
16) ‘ವೈನ್’ ಹಾಗೇ ಬಂದ ಪಿಜಿಯ ‘ಗುಪ್ತಗಾಮಿನಿ’ಯರು..!
17) ಮಾಸ್ಕ್, ಕಾರ್ಫ್ ‘ಹಾಕ್ಕೊಂಡು’ ಬಂದ ಯುವತಿಯರು..
18) ‘ಹಾಲ್ ಟಿಕೆಟ್’ ಕ್ಯೂ ಅಲ್ಲ, ಇದು ‘ಆಲ್ಕೋಹಾಲ್’ ಕ್ಯೂ..!
19) ‘ನಶೆ’ ಮೇಲಿನ ಆಸೆಗೆ ಸಾಲಲ್ಲಿ ನಿಂತ ಹುಡ್ಗೀರು
20) ‘ಎಣ್ಣೆ ಮಾಸ್ಟರ್’ಗಳಿಗೆ ‘ಟೀಚರ್ಸ್’ ಕೈಗೇ ಸಿಕ್ತಿಲ್ಲ
21) ‘ಯುಬಿ’ ಸಿಟಿಯಲ್ಲದಿದ್ರೂ ಗ್ರಾಮಗಳಲ್ಲೂ ಜನರ ಕ್ಯೂ
22) ಈರ, ಭೀರ ಎಲ್ಲಾ ‘ಬೀರ’ ಬಿಯರ್​ಗೆ ಮುಗಿಬಿದ್ದಿದ್ದಾರೆ
23) ‘ವೈನ್ ಸ್ಟೋರ್’ ಮಾಲೀಕರರೇ ‘ಡೈರೆಕ್ಟರ್ ಸ್ಪೆಷಲ್’
24) ‘ಮಂಕ್’ ಆಗಿದ್ದ ಮದ್ಯಪ್ರಿಯರ ಕೈಗೆ ‘ಓಲ್ಡ್ ಮಂಕ್’
25) ‘ರಾಜಾ’ರೋಷವಾಗಿ ‘ವಿಸ್ಕಿ’ಗೆ ಸಾಲು ಗಟ್ಟಿದ ಜನ
26) ‘ಎಣ್ಣೆ’ ಅಂಗಡಿ ಮುಂದೆ ‘ಮದ್ಯ’ಂತರದಲ್ಲಿ ನಿಂತ ಜನ
27) ‘100 ಪೈಪರ್ಸ್​’ಗೆ 6 ಅಡಿ ಅಂತರದಲ್ಲಿ ಶಿಸ್ತಿನ ಸಿಪಾಯಿ
28) ‘ಬ್ಯಾಗ್​’ ತಂದು ‘100 ಪೈಪರ್ಸ್’ ತುಂಬಿಕೊಳ್ತಿದ್ದಾರೆ
29) ವೈನ್ ಮಾಲೀಕರು ‘ಮತ್ತು’ ಮದ್ಯಪ್ರಿಯರು ಖುಷ್
30) ಲಾಕ್​ಡೌನ್ ಸಡಿಲಿಕೆ ಬಳಿಕ ಮದ್ಯಪ್ರಿಯರಿಗೆ ‘ಕಿಕ್​’
31) ಬದುಕೇ ‘ಬ್ಲ್ಯಾಕ್​’ ಅಂದುಕೊಂಡಿದ್ದವರ ಬಾಳಲ್ಲಿ ‘ವೈಟ್’
32) ಕಿ.ಮೀ. ಗಟ್ಟಲೆ ಸಾಲುಗಟ್ಟಿ ನಿಂತ ಪಾನಪ್ರಿಯರು
33) ‘ಕುಡಿಯೋದೇ ನಮ್ಮ ವೀಕ್​ನೆಸ್..’ ಅಂತಿದ್ದಾರೆ ಕುಡುಕರು
34) ‘ಎಣ್ಣೆ ಬೇಕು ಅಣ್ಣಾ’ ಅಂತಾ ಸಾಲುಗಟ್ಟಿ ನಿಂತ ಮದ್ಯಪ್ರಿಯರು
35) ಡ್ಯೂಟಿಗೆ ಹೋಗೋದನ್ನೂ ಮರೆತು ‘ಓಟಿ’ಗೆ ನಿಂತ ಜನ
36) ‘ರಾಯಲ್​’ ಆಗಿ ಕ್ಯೂನಲ್ಲಿ ನಿಂತಿದ್ದಾರೆ ಮದ್ಯಪ್ರಿಯರು
37) ‘ಬಾರ್.. ಬಾರ್’ ದೇಖೋ ಹಜಾರ್ ಬಾರ್ ದೇಖೋ..!
38) ಗುಂಡು ಹಾಕೋರಿಗೂ ‘ರೌಂಡ್​’ನಲ್ಲಿ ನಿಂತು ಎಣ್ಣೆ ಖರೀದಿ
39) ಮದ್ಯಪ್ರಿಯರದ್ದು ಏನ್ ‘ಗುಂಡು’ಗೆ ಗುರು..?
40) ‘ಕೌಂಟರ್​’ನಲ್ಲೇ ನಿಂತು ‘ಓಪನ್​ ದ ಬಾಟಲ್’ ಅನ್ಬೇಡಿ

Published On - 11:38 am, Tue, 5 May 20