Shivamogga Blast ತುಂಗಾ ಭದ್ರಾ ಡ್ಯಾಂ ಇನ್ ಡೇಂಜರ್: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಹೇಳಿದ್ದೇನು?
ಶಿವಮೊಗ್ಗ: ಮೈನಿಂಗ್ ಮಾಫಿಯಾ ಅಕ್ರಮದಿಂದ ನಿನ್ನೆ ರಾತ್ರಿ ಒಂದೇ ಒಂದು ಸ್ಫೋಟಕ್ಕೆ ಇಡೀ ಶಿವಮೊಗ್ಗ ಜಿಲ್ಲೆ ಶೇಕ್ ಆಗಿದೆ. ಅದೂ ಸ್ಫೋಟದ ಸ್ಥಳದಿಂದ ಭದ್ರಾ ಡ್ಯಾಂ 36 ಕಿ. ಮೀ. ದೂರದಲ್ಲಿದ್ದು, ತುಂಗಾ ಡ್ಯಾಂ ಕೇವಲ 18 ಕಿ ಮೀ ದೂರದಲ್ಲಿದೆ. ಒಂದು ವೇಳೆ ಸ್ಫೋಟದ ತೀವ್ರತೆ ಇನ್ನೂ ಹೆಚ್ಚಾಗಿದಿದ್ದದ್ದರೆ.. ಶಿವಮೊಗ್ಗ ಜಿಲ್ಲೆಗೆ ದೊಡ್ಡ ಗಂಡಾಂತರ ಇತ್ತು. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳು ಸೇರಿದಂತೆ ತಾಲೂಕುಗಳು ಮುಳುಗಡೆ ಆಗುವ ಸಾಧ್ಯತೆ ಇತ್ತು. ಅಕ್ರಮ ಗಣಿಗಾರಿಕೆಗೆ ಇದೊಂದು ದೊಡ್ಡ […]
ಶಿವಮೊಗ್ಗ: ಮೈನಿಂಗ್ ಮಾಫಿಯಾ ಅಕ್ರಮದಿಂದ ನಿನ್ನೆ ರಾತ್ರಿ ಒಂದೇ ಒಂದು ಸ್ಫೋಟಕ್ಕೆ ಇಡೀ ಶಿವಮೊಗ್ಗ ಜಿಲ್ಲೆ ಶೇಕ್ ಆಗಿದೆ. ಅದೂ ಸ್ಫೋಟದ ಸ್ಥಳದಿಂದ ಭದ್ರಾ ಡ್ಯಾಂ 36 ಕಿ. ಮೀ. ದೂರದಲ್ಲಿದ್ದು, ತುಂಗಾ ಡ್ಯಾಂ ಕೇವಲ 18 ಕಿ ಮೀ ದೂರದಲ್ಲಿದೆ. ಒಂದು ವೇಳೆ ಸ್ಫೋಟದ ತೀವ್ರತೆ ಇನ್ನೂ ಹೆಚ್ಚಾಗಿದಿದ್ದದ್ದರೆ.. ಶಿವಮೊಗ್ಗ ಜಿಲ್ಲೆಗೆ ದೊಡ್ಡ ಗಂಡಾಂತರ ಇತ್ತು. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳು ಸೇರಿದಂತೆ ತಾಲೂಕುಗಳು ಮುಳುಗಡೆ ಆಗುವ ಸಾಧ್ಯತೆ ಇತ್ತು. ಅಕ್ರಮ ಗಣಿಗಾರಿಕೆಗೆ ಇದೊಂದು ದೊಡ್ಡ ಎಚ್ಚರಿಕೆ ಪಾಠವಾಗಬೇಕಿದೆ.
ಈ ಮಧ್ಯೆ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ನಿನ್ನೆ ರಾತ್ರಿಯೇ ಭದ್ರಾ ಜಲಾಶಯವನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದ್ದಾರೆ. ಗುರುವಾರ ರಾತ್ರಿ ಸುಮಾರು 10.20ರ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಉಂಟಾದ ಭಾರಿ ಕಂಪನದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಭದ್ರಾ ಜಲಾಶಯವನ್ನು ವೀಕ್ಷಣೆ ಮಾಡಿ ಜಲಾಶಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಭದ್ರಾ ಕಾಡ ಪ್ರಾಧಿಕಾರವು ಸುಮಾರು 12ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 5ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಲಕ್ಷಾಂತರ ರೈತರಿಗೆ ಭದ್ರಾ ಜಲಾಶಯವು ಜೀವನಾಡಿಯಾಗಿದ್ದು ಅಚ್ಚುಕಟ್ಟು ಭಾಗದ ರೈತರು ಇದನ್ನೇ ನಂಬಿ ಬದುಕುತ್ತಿದ್ದಾರೆ. ನಿನ್ನೆ ರಾತ್ರಿಯ ಭೂ ಕಂಪನದಿಂದ ಜಲಾಶಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಈ ಭರವಸೆಯ ಮಾತುಗಳನ್ನಾಡಿದ್ದಾರೆ.
Published On - 10:46 am, Fri, 22 January 21