ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: 8.41 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

| Updated By: ganapathi bhat

Updated on: Apr 06, 2022 | 11:22 PM

2019ರ ಜನವರಿಯಲ್ಲಿ ಅಜ್ಮೀರಾ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ಬಗ್ಗೆ ಹೂಡಿಕೆದಾರರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಜಾರಿ ನಿರ್ದೇಶನಾಲಯ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಿಕೊಂಡಿತ್ತು.

ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: 8.41 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED
ED (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಅಜ್ಮೀರಾ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಂದು (ಮಂಗಳವಾರ) ಹೊಸ ಬೆಳವಣಿಗೆಗಳು ನಡೆದಿವೆ. ಅಜ್ಮೀರಾ ಕಂಪನಿಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ. ಅಜ್ಮೀರಾ ಸಂಸ್ಥೆಯ ಜಮೀನು, ಫ್ಲ್ಯಾಟ್ ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿದಂತೆ ₹ 8.41 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.

2019ರ ಜನವರಿಯಲ್ಲಿ ಅಜ್ಮೀರಾ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ಬಗ್ಗೆ ಹೂಡಿಕೆದಾರರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಜಾರಿ ನಿರ್ದೇಶನಾಲಯ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಿಕೊಂಡಿತ್ತು. ಇದೀಗ ಕಂಪನಿಯ ಕೃಷಿ‌ ಜಮೀನು, ರೆಸಿಡೆನ್ಸಿಯಲ್ ಪ್ಲಾಟ್, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿ 8.41 ಕೋಟಿ ಜಪ್ತಿಯಾಗಿದೆ.

ಅಜ್ಮೀರಾ ಬಹುಕೋಟಿ ವಂಚನೆ ವಿರುದ್ಧ ಆಕ್ರೋಶಗೊಂಡಿದ್ದ ಜನರು

ಚಿಟ್ ಫಂಡ್ ವಿರುದ್ಧ ತಿರುಗಿ ಬಿದ್ದ ಜನ

ಅಜ್ಮೆರಾ ಚಿಟ್ ಫಂಡ್​​ನ ತಬ್ರೇಜ್ ಮನೆ ಮೇಲೆ ತಡರಾತ್ರಿ ಸಿಸಿಬಿ ದಾಳಿ

Published On - 5:49 pm, Tue, 22 December 20