ಶಿಕ್ಷಣ ಇಲಾಖೆಯಲ್ಲಿ ಮತ್ತೊಂದು ಗೊಂದಲ: ವಿದ್ಯಾರ್ಥಿಗಳಿಗೆ ಹಿಂದಿ-ಇಂಗ್ಲಿಷ್​ ಜ್ಞಾನ ಕಡ್ಡಾಯ ವಿಚಾರ, ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

| Updated By: ಸಾಧು ಶ್ರೀನಾಥ್​

Updated on: Jun 15, 2022 | 7:36 PM

ಹೊರರಾಜ್ಯಕ್ಕೆ ಪ್ರವಾಸ ಹೊರಡುವ ಕರ್ನಾಟಕ ವಿದ್ಯಾರ್ಥಿಗಳಿಗೆ ಹಿಂದಿ/ಇಂಗ್ಲಿಷ್​ ಜ್ಞಾನ ಕಡ್ಡಾಯವಾಗಿರಬೇಕು ಎಂಬ ವಿಚಾರ ಶಿಕ್ಷಣ ಇಲಾಖೆಯ ವತಿಯಿಂದ ಬಹಿರಂಗವಾಗಿದೆ. ಆದರೆ ಇಂಥ ಯಾವುದೇ ವಿಚಾರ, ನಿಯಮವಾಗಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿಲ್ಲ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

ಶಿಕ್ಷಣ ಇಲಾಖೆಯಲ್ಲಿ ಮತ್ತೊಂದು ಗೊಂದಲ: ವಿದ್ಯಾರ್ಥಿಗಳಿಗೆ ಹಿಂದಿ-ಇಂಗ್ಲಿಷ್​ ಜ್ಞಾನ ಕಡ್ಡಾಯ ವಿಚಾರ, ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?
ಶಿಕ್ಷಣ ಸಚಿವ ಬಿ ಸಿ ನಾಗೇಶ
Follow us on

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಪಠ್ಯ ಪರಿಷ್ಕರಣೆ ಕಗ್ಗಂಟಾಗಿ, ಸರ್ಕಾರಕ್ಕೆ ತಲೆಬಿಸಿ ತಂದಿರುವಾಗ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯು ಹಿಂದಿ-ಇಂಗ್ಲಿಷ್​ ಜ್ಞಾನ ಕಡ್ಡಾಯ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದಾರೆ. ಇದು ಪಠ್ಯ ಪರಿಷ್ಕರಣೆ ಕಗ್ಗಂಟನ್ನು ಸೂಕ್ಷ್ಮವಾಗಿ ಬಿಡಿಸಿಕೊಂಡುಬಂದಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ (Education minister BC Nagesh) ತಲೆಬಿಸಿ ತಂದಿದೆ.

ವಿಷಯ ಏನೆಂದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ (Azadi Ka Amrit Mahotsav) ಕರ್ನಾಟಕದಿಂದ (karnataka students) ಹೊರರಾಜ್ಯಕ್ಕೆ ಪ್ರವಾಸ ಹೊರಡುವ ವಿದ್ಯಾರ್ಥಿಗಳಿಗೆ ಹಿಂದಿ/ಇಂಗ್ಲಿಷ್​ ಜ್ಞಾನ ಕಡ್ಡಾಯವಾಗಿರಬೇಕು ಎಂಬ ವಿಚಾರ ಶಿಕ್ಷಣ ಇಲಾಖೆಯ ವತಿಯಿಂದ ಬಹಿರಂಗವಾಗಿದೆ. ಆದರೆ ಇಂಥ ಯಾವುದೇ ವಿಚಾರವಾಗಲೀ ಅಥವಾ ನಿಯಮವಾಗಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿಲ್ಲ (tour) ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, ಇಂತಹ ಗೊಂದಲಕ್ಕೆ ಕಾರಣವಾದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ (BC Nagesh clarification).

Bengaluru DDPI ನಡೆ ಆಘಾತಕಾರಿ: ಹೆಚ್​ ಡಿ ಕುಮಾರಸ್ವಾಮಿ ಸರಣಿ ಟ್ವೀಟ್

ಸರ್ಕಾರವು ಹಿಂದಿ ಮಾತನಾಡುವ ಹೈಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡು One Bharat, Shreshta Bharat ಕಾರ್ಯಕ್ರಮದಡಿ ಇತರೆ ರಾಜ್ಯಗಳಿಗೆ ಪ್ರವಾಸ ಕಳಿಸುವ ಪ್ರೋಗ್ರಾಮ್ ಹಾಕಿಕೊಂಡಿದೆ. Bengaluru DDPI ಹೊರಡಿಸಿರುವ ಈ ಪ್ರಕಟಣೆ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನೇತಾರ ಹೆಚ್​ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಟ್ವೀಟ್ ಹೀಗಿದೆ:

Also Read:

ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆಗೆ ಚಾಲನೆ -ಉನ್ನತ ಶಿಕ್ಷಣ ಸಚಿವ ಡಾ‌. ಅಶ್ವಥ್ ನಾರಾಯಣ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Wed, 15 June 22