
ಬೆಂಗಳೂರು: ಶಾಲೆಗಳನ್ನು ಆರಂಭಿಸುವ ಕುರಿತು ಸಲಹೆ ನೀಡಲು ಮನವಿ ಮಾಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ S ಸುರೇಶ್ ಕುಮಾರ್ ಎಲ್ಲಾ ಕ್ಷೇತ್ರದ ಶಾಸಕರಿಗೆ ಪತ್ರ ಬರೆದಿದ್ದಾರೆ.
ಶಾಲೆಗಳನ್ನು ಆರಂಭಿಸುವುದು ಸೂಕ್ತವಿದೆಯಾ? ಶಾಲೆಗಳನ್ನ ಆರಂಭ ಮಾಡುವುದಾದರೆ ಯಾವ ತರಗತಿಯಿಂದ? UKG, LKGಯಿಂದ ಶಾಲೆ ಆರಂಭಿಸೋದು ಸಾಧ್ಯವೆ? ಶಾಲೆ ಆರಂಭಿಸಲು ಯಾವ ರೀತಿಯ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿಯ ಪತ್ರವನ್ನು ಸುರೇಶ್ ಕುಮಾರ್ ಎಲ್ಲಾ ಕ್ಷೇತ್ರದ ಶಾಸಕರಿಗೆ ಕಳುಹಿಸಿದ್ದಾರೆ.