AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂದಾನಗರಿಯಲ್ಲಿ ಕೊಲೆಯಾದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ

ಬೆಳಗಾವಿ: ನಗರದ ಮಚ್ಛೆ ಲಕ್ಷ್ಮೀನಗರದಲ್ಲಿ ನಿನ್ನೆ ಕೊಲೆಯಾಗಿದ್ದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ತಮ್ಮ ಊರಿನಲ್ಲಿ ಗರ್ಭಿಣಿಯ ಅಂತ್ಯಕ್ರಿಯೆ ನಡೆಸಬಾರದೆಂದು ಕಾಳೇನಟ್ಟಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಸುಳಗಾ ಗ್ರಾಮದ ನಿವಾಸಿಯಾದ ಮೃತ ಗರ್ಭಿಣಿ ರೋಹಿಣಿ ಕಾಳೇನಟ್ಟಿ ಗ್ರಾಮದವರಾದ ಗಂಗಪ್ಪನನ್ನು ಮದುವೆಯಾಗಿದ್ದಳು. ಕಳೆದ ವಾರವಷ್ಟೇ ರೋಹಿಣಿ ಮಚ್ಛೆ ಗ್ರಾಮದ ಲಕ್ಷ್ಮೀನಗರದಲ್ಲಿರುವ ತಮ್ಮ ಸೋದರ ಸಂಬಂಧಿ ಮನೆಗೆ ಪತಿಯೊಡನೆ ತೆರಳಿದ್ದರು. ನಿನ್ನೆ ಸಂಜೆ ವಾಕಿಂಗ್‌ಗೆ ಹೋದ ವೇಳೆ ರೋಹಿಣಿ ಹಾಗೂ ಆಕೆಯೊಟ್ಟಿಗೆ ಬಂದಿದ್ದ ರಾಜಶ್ರೀಯನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ […]

ಕುಂದಾನಗರಿಯಲ್ಲಿ ಕೊಲೆಯಾದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ
KUSHAL V
|

Updated on: Sep 27, 2020 | 4:37 PM

Share

ಬೆಳಗಾವಿ: ನಗರದ ಮಚ್ಛೆ ಲಕ್ಷ್ಮೀನಗರದಲ್ಲಿ ನಿನ್ನೆ ಕೊಲೆಯಾಗಿದ್ದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ತಮ್ಮ ಊರಿನಲ್ಲಿ ಗರ್ಭಿಣಿಯ ಅಂತ್ಯಕ್ರಿಯೆ ನಡೆಸಬಾರದೆಂದು ಕಾಳೇನಟ್ಟಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಸುಳಗಾ ಗ್ರಾಮದ ನಿವಾಸಿಯಾದ ಮೃತ ಗರ್ಭಿಣಿ ರೋಹಿಣಿ ಕಾಳೇನಟ್ಟಿ ಗ್ರಾಮದವರಾದ ಗಂಗಪ್ಪನನ್ನು ಮದುವೆಯಾಗಿದ್ದಳು. ಕಳೆದ ವಾರವಷ್ಟೇ ರೋಹಿಣಿ ಮಚ್ಛೆ ಗ್ರಾಮದ ಲಕ್ಷ್ಮೀನಗರದಲ್ಲಿರುವ ತಮ್ಮ ಸೋದರ ಸಂಬಂಧಿ ಮನೆಗೆ ಪತಿಯೊಡನೆ ತೆರಳಿದ್ದರು.

ನಿನ್ನೆ ಸಂಜೆ ವಾಕಿಂಗ್‌ಗೆ ಹೋದ ವೇಳೆ ರೋಹಿಣಿ ಹಾಗೂ ಆಕೆಯೊಟ್ಟಿಗೆ ಬಂದಿದ್ದ ರಾಜಶ್ರೀಯನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ ಇಬ್ಬರೂ ಮಹಿಳೆಯರು ಕಾಳೇನಟ್ಟಿ ಗ್ರಾಮದ ಸೊಸೆಯಂದಿರು. ಅದರೆ, ಮೃತ ಮಹಿಳೆಯರ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಲೆಯಾದ ರೋಹಿಣಿ ಗಂಡ ಗಂಗಪ್ಪ ಮೂಲತಃ ಬೇರೆ ಊರಿನವರೆಂದು ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಬೆಳಗ್ಗೆಯಿಂದ ಕಾಳೇನಟ್ಟಿ ಗ್ರಾಮದ ಹೊರ ವಲಯದ ರಸ್ತೆಯಲ್ಲೇ ಮಹಿಳೆಯರ ಮೃತದೇಹವನ್ನು ಇರಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:ವಾಕಿಂಗ್​ ಹೋಗಿದ್ದ ಗರ್ಭಿಣಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದ ದುಷ್ಕರ್ಮಿಗಳು

Follow Us
KUSHAL V
KUSHAL V
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್