ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶದ ಬಳಿಕವೇ ಪಿಯುಸಿಗೆ ದಾಖಲಾತಿ ಕಾರ್ಯ ನಡೆಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಪ್ರಥಮ ಪಿಯುಸಿ ದಾಖಲಾತಿಗೆ ಗೈಡ್‌ಲೈನ್ಸ್ ನೀಡುತ್ತೇವೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಗೈಡ್‌ಲೈನ್ಸ್ ಹೊರಡಿಸುತ್ತೇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.
ಮಾರ್ಗಸೂಚಿ 2021-22 ಬಿಡುಗಡೆ ಬಳಿಕ ದಾಖಲಾತಿ ಕಾರ್ಯ ಆರಂಭಿಸಬೇಕು. ಶಿಕ್ಷಣ ಇಲಾಖೆ ಆದೇಶವಿಲ್ಲದೆ ಪ್ರಥಮ ಪಿಯು ದಾಖಲಾತಿ ಮಾಡುವಂತಿಲ್ಲ. ಪ್ರಥಮ ಪಿಯುಸಿ ಆನ್ಲೈನ್ ತರಗತಿ ನಡೆಸುವಂತಿಲ್ಲ. ಇಲಾಖೆ ಆದೇಶ ಧಿಕ್ಕರಿಸುವ ಕಾಲೇಜುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಆದೇಶ ಉಲ್ಲಂಘಿಸುವ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಕ್ರಮಗಳ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.
ಎಸ್ಎಸ್ಎಸಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಸಂಬಂಧ ಇಂದು (ಜೂನ್ 9) ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಡಿಪಿಐಗಳ ಜೊತೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸಭೆ ನಡೆಸಿ ಚರ್ಚಿಸದರು. ಸುಧಾರಿತ ಗೈಡ್‌ಲೈನ್ಸ್‌ನೊಂದಿಗೆ ಪರೀಕ್ಷೆ ನಡೆಸೋಣ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಎಂದು ಎಲ್ಲ ಡಿಡಿಪಿಐಗಳಿಗೆ ಎಸ್. ಸುರೇಶ್‌ಕುಮಾರ್ ಸೂಚನೆ ನೀಡಿದರು.
ಪರೀಕ್ಷೆ ಬರೆಯುವುದಕ್ಕೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಪೋಷಕರಿಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸಲಹೆ ನೀಡಿದರು. ರಾಜ್ಯದಲ್ಲಿ SSLC ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ SSLC ಪರೀಕ್ಷಾ ದಿನಾಂಕ ಘೋಷಣೆ ಮಾಡುತ್ತೇವೆ. ಮುಂದಿನ ವ್ಯಾಸಂಗಕ್ಕೆ ವಿದ್ಯಾರ್ಥಿಗಳ ಸಾಮರ್ಥ್ಯ ಅಗತ್ಯ. ಹಾಗಾಗಿ, ಸಾಮರ್ಥ್ಯ ಗುರುತಿಸಿಕೊಳ್ಳುವ ದೃಷ್ಟಿಯಿಂದ ಪರೀಕ್ಷೆ ಮಾಡುತ್ತೇವೆ. ಹೀಗಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಕ್ರಮಕೈಗೊಳ್ಳಿ ಎಂದು ಡಿಡಿಪಿಐಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು.
2nd PU Exams for Repeaters: ಪಿಯು ಪರೀಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ರಿಪೀಟರ್ಸ್ ವಿದ್ಯಾರ್ಥಿಗಳು