ಚಿತ್ರದುರ್ಗ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬಹುತೇಕೆ ಕೊರೊನಾ ಸೋಂಕಿತರು ಮತ್ತು ನಾನ್ ಕೊವಿಡ್ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿರುವುದು ವರದಿಯಾಗಿವೆ. ಕೋಟೆನಾಡು ಚಿತ್ರದುರ್ಗದಲ್ಲೂ ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತ ವೃದ್ಧ ಸಾವನ್ನಪ್ಪಿದ್ದಾರೆ. ಮೃತ ವೃದ್ಧನ ಮೊಮ್ಮಗಳು ಹಿರಿಯೂರು ಸರ್ಕಾರಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಕಾಟನಾಯಕನಹಳ್ಳಿ ಗ್ರಾಮದ ರಾಮಪ್ಪ ಎಂಬ 75 ವರ್ಷದ ವೃದ್ಧ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೊನೆಯುಸಿರೆಳೆದಿದ್ದಾರೆ. ಕೇವಲ 5 ನಿಮಿಷ ಆಕ್ಸಿಜನ್ ಕೊಡುವುದಾಗಿ ಹೇಳಿದ್ದರು. ಅದಾದ ಬಳಿಕ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಹೇಳುತ್ತಾರೆ. ರಾತ್ರಿ ವೇಳೆ ಶಿಫ್ಟ್ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಮೊಮ್ಮಗಳು ವಸಂತಕುಮಾರಿ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರು, ಸಂಸದರು, 108ಗೂ ನಾನು ಕರೆ ಮಾಡಿದೆ. ಯಾರೂ ಕೂಡ ನನ್ನ ಕರೆಗೆ ಸ್ಪಂದಿಸಲೇ ಇಲ್ಲ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ತೀವ್ರ ಆಕ್ರೋಶಗೊಂಡ ಮೊಮ್ಮಗಳು ಅಜ್ಜನ ಶವದ ಬಳಿ ಸೆಲ್ಫಿ ವಿಡಿಯೋ ಮಾಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ.
ಇದನ್ನೂ ಓದಿ
ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
ಬೆಂಗಳೂರಲ್ಲಿ ಆಕ್ಸಿಜನ್ ಪ್ಲಾಂಟ್ ಸೋರಿಕೆ; ಪೊಲೀಸರು ಹಾಗೂ ಸೋನುಸೂದ್ ಟ್ರಸ್ಟ್ ಸದಸ್ಯರ ಸಮಯಪ್ರಜ್ಞೆಯಿಂದ ನಿಂತ ಅವಘಡ
(Elderly man died of coronavirus without oxygen and granddaughter expressed outraged against Government Hospital at chitradurga)
Published On - 8:28 am, Thu, 13 May 21