ಬಂತು ಬೆಂಗಳೂರಿಗೆ ಯುಕೆ ರೂಪಾಂತರಿ ವೈರಸ್! 11 ಜನರಲ್ಲಿ ಪತ್ತೆಯಾಯ್ತು

|

Updated on: Apr 19, 2021 | 10:45 AM

UK Virus Variant ಬೆಂಗಳೂರಿನಲ್ಲಿ ಸದ್ದಿಲ್ಲದೆ ಯುಕೆ ರೂಪಾಂತರಿ ವೈರಸ್ ಅಟ್ಟಹಾಸ ಮೆರೆಯೋಕೆ ನಿಂತಿದೆ. ಬೆಂಗಳೂರಿನಲ್ಲಿ ಒಟ್ಟು 11 ಜನರಲ್ಲಿ ಯುಕೆ ವೈರಸ್ ಪತ್ತೆಯಾಗಿದ್ದು ಬೆಂಗಳೂರಿನ R.R.ನಗರದ ಮೂವರು ವಿದೇಶ ಪ್ರವಾಸಕ್ಕೆ ಹೋಗಿದ್ದರು. ಇನ್ನು ಉಳಿದ 8ಜನರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಸೋಂಕು ಪತ್ತೆಯಾಗಿದೆ.

ಬಂತು ಬೆಂಗಳೂರಿಗೆ ಯುಕೆ ರೂಪಾಂತರಿ ವೈರಸ್! 11 ಜನರಲ್ಲಿ ಪತ್ತೆಯಾಯ್ತು
ಸಂಗ್ರಹ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾಗೆ ಇಡೀ ಬೆಂಗಳೂರು ನಡುಗಿ ಹೋಗಿದೆ. ಇದರ ನಡುವೆ ಈಗ ಸಿಲಿಕಾನ್ ಸಿಟಿಯಲ್ಲಿ ಯುಕೆ ರೂಪಾಂತರಿ ವೈರಸ್ ಅಟ್ಟಹಾಸ ಶುರು ಮಾಡಿದೆ. ಬೆಂಗಳೂರು ನಗರದಲ್ಲಿ 11 ಜನರಲ್ಲಿ ಯುಕೆ ರೂಪಾಂತರಿ ವೈರಸ್ ಪತ್ತೆಯಾಗಿದೆ. ಈ ಪೈಕಿ 11 ಜನರಲ್ಲಿ ಮೂವರು ಮಾತ್ರ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಉಳಿದ 8 ಜನರಿಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇಲ್ಲ.

ಬೆಂಗಳೂರಿನಲ್ಲಿ ಸದ್ದಿಲ್ಲದೆ ಯುಕೆ ರೂಪಾಂತರಿ ವೈರಸ್ ಅಟ್ಟಹಾಸ ಮೆರೆಯೋಕೆ ನಿಂತಿದೆ. ಬೆಂಗಳೂರಿನಲ್ಲಿ ಒಟ್ಟು 11 ಜನರಲ್ಲಿ ಯುಕೆ ವೈರಸ್ ಪತ್ತೆಯಾಗಿದ್ದು ಬೆಂಗಳೂರಿನ R.R.ನಗರದ ಮೂವರು ವಿದೇಶ ಪ್ರವಾಸಕ್ಕೆ ಹೋಗಿದ್ದರು. ಇನ್ನು ಉಳಿದ 8ಜನರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಸೋಂಕು ಪತ್ತೆಯಾಗಿದೆ.

ಟ್ರಾವೆಲ್ ಹಿಸ್ಟರಿ ಹೊಂದಿರುವ ಮೂವರು ದಾಸರಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿದ್ದರು. ಹಾಗೂ ದಾಸರಹಳ್ಳಿಯ ಹೌಸ್ ಕಾಲೋನಿಯಲ್ಲಿ ನಾಲ್ವರಿಗೆ ಯುಕೆ ವೈರಸ್ ಧೃಡಪಟ್ಟಿದೆ. ಜೊತೆಗೆ ಸಿಂಗಸಂದ್ರದಲ್ಲಿ ಒಬ್ಬರಿಗೆ ಯುಕೆ ರೂಪಾಂತರಿಗೆ ವೈರಸ್ ತಗುಲಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ರು 8 ಜನರಿಗೆ ಯುಕೆ ರೂಪಾಂತರಿ ವೈರಸ್ ಹರಡಿದೆ. ಸದ್ಯ 11 ಜನರಲ್ಲಿ ಯುಕೆ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಯುಕೆ ರೂಪಾಂತರಿ ವೈರಸ್.. ಈ ವೈರಾಣು ನಮ್ಮದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಸಂಶೋಧನೆಗಳು ತಕ್ಷಣದಿಂದಲೇ ನಡೆದಿವೆ. ಈಗಲೇ ಏನೂ ಹೇಳಲಾಗುವುದಿಲ್ಲ ಎಂದು ಬ್ರಿಟನ್ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ರೂಪಾಂತರಿ ಕೊರೊನಾ; ಬ್ರಿಟನ್​ನಿಂದ ಬಂದ 6 ಮಂದಿಯಲ್ಲಿ ವೈರಸ್​ ಪಕ್ಕಾ.. ಬೆಂಗಳೂರಲ್ಲೂ ಮೂವರಿಗೆ ಸೋಂಕು