ಬೆಂಗಳೂರು: ಈಗಾಗಲೇ ಭಾರೀ ನಷ್ಟದಿಂದ ನಡೆಯುತ್ತಿರುವ ಸಾರ್ವಜನಿಕ ಸಾರಿಗೆ ಸಂಸ್ಥೆ ಇದೀಗ ಕೊರೊನಾದಿಂದಾಗಿ ಮತ್ತಷ್ಟು ನಷ್ಟ ಅನುಭವಿಸಿದೆ. KSRTC ಸುಮಾರು 900 ಕೋಟಿ ನಷ್ಟ ಅನುಭವಿಸಿದರೆ, ಬಿಎಂಟಿಸಿ ಸುಮಾರು 450 ಕೋಟಿ ನಷ್ಟದಲ್ಲಿದೆ. ಇದರಿಂದ ನೌಕರರ ವೇತನ ಪಾವತಿ ಮಾಡದೆ ಸಾರಿಗೆ ನೌಕರರು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ.
ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ಎಲ್ಲಾ ನೌಕರರಿಗೆ ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ 10 ನೇ ತಾರೀಖು ಕಳೆದರೂ ವೇತನ ಪಾವತಿ ಮಾಡಿಲ್ಲ. ಇದರಿಂದ ಕಂಗಾಲಾಗಿರುವ ಸಾರಿಗೆ ನೌಕರರು ಜೀವನ ನಿರ್ವಹಣೆ ಹೇಗೆ ಎಂಬ ಯೋಚನೆಯಲ್ಲಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನ ಸರ್ಕಾರವೇ ಪಾವತಿ ಮಾಡಿತ್ತು.
ಆದರೆ ಇದೀಗ ಬಸ್ ಓಡಾಟ ನಡೆಸಿದ್ರೂ ನಿಗಮಗಳಿಗೆ ಆದಾಯ ಬರುತ್ತಿಲ್ಲ. ಇದರಿಂದ KSRTCಯ 37 ಸಾವಿರ, BMTCಯ 36 ಸಾವಿರ, NWKSRTC ಯ 25 ಸಾವಿರ ಹಾಗೂ NEKSRTCಯ 22 ಸಾವಿರ ನೌಕರರು ಜೂನ್ ತಿಂಗಳ ವೇತನ ಸಿಗದೇ ಪರದಾಡುತ್ತಿದ್ದಾರೆ.