ಬೆಂಗಳೂರು: ಚಿತ್ರಮಂದಿರಗಳನ್ನು ಹೌಸ್ಫುಲ್ ಮಾಡಲು ಅವಕಾಶ ಬೇಕು ಎಂಬ ಚಿತ್ರರಂಗದ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿದ್ದೇನೆ. ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಭಾರತದ ಚಿತ್ರಮಂದಿರಗಳು ಸಂಪೂರ್ಣ ತೆರೆಯಲು ಅವಕಾಶ ನೀಡಿದೆ. ರಾಜ್ಯದಲ್ಲಿಯೂ ಚಿತ್ರಮಂದಿರಗಳ ಪ್ರವೇಶಕ್ಕೆ ನಿರ್ಬಂಧ ಬೇಡ ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರ ಬಂಗಾರಪ್ಪ ತಿಳಿಸಿದರು.
ವಿಪತ್ತು ನಿರ್ವಹಣೆ ಕಾರಣದಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ಮಿತಿ ಹೇರಲು ಆರೋಗ್ಯ ಸಚಿವರು ನಿರ್ಧರಿಸಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿ ಜತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಚಿತ್ರಮಂದಿಗಳಿಗೆ ಪೂರ್ಣ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಶಿವರಾಜ್ಕುಮಾರ್ ಟ್ವೀಟ್: ಸಿನಿಮಾ ಹಾಲ್ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು
Published On - 5:35 pm, Wed, 3 February 21