ಚಿತ್ರಮಂದಿರ ಪ್ರವೇಶಕ್ಕೆ ನಿರ್ಬಂಧವೇಕೆ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿದ ಎಚ್.ಡಿ.ಕುಮಾರಸ್ವಾಮಿ
ಎಲ್ಲ ಕಡೆ ಜನರು ನಿರ್ಭಯವಾಗಿ ಸಂಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಸಿನಿಮಾ ಮಂದಿರಗಳ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅಂಥದ್ದರಲ್ಲಿ ಈ ನಿರ್ಬಂಧದ ಅವಶ್ಯಕತೆ ಏನಿತ್ತು ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಮೈಸೂರು: ಚಿತ್ರಮಂದಿರ ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಿರ್ದೇಶನದ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಸರ್ಕಾರ ಇಂಥ ಆದೇಶ ಹೊರಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಎಚ್ಡಿಕೆ, ದುಡ್ಡು ತಂದು ಕೊಡಲಿ ಎಂದು ಈ ಆದೇಶ ಮಾಡಿರಬಹುದು ಎಂದು ಲೇವಡಿ ಮಾಡಿದರು.
ಎಲ್ಲ ಕಡೆ ಜನರು ನಿರ್ಭಯವಾಗಿ ಸಂಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಸಿನಿಮಾ ಮಂದಿರಗಳ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅಂಥದ್ದರಲ್ಲಿ ಈ ನಿರ್ಬಂಧದ ಅವಶ್ಯಕತೆ ಏನಿತ್ತು ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶದ ಹಿಂದಿನ ಉದ್ದೇಶಗಳನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಶಿವರಾಜ್ಕುಮಾರ್ ಟ್ವೀಟ್: ಸಿನಿಮಾ ಹಾಲ್ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು
Published On - 4:33 pm, Wed, 3 February 21