ಜೀವನಾಂಶ ನೀಡದ ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಆದೇಶ

|

Updated on: Oct 28, 2019 | 6:14 PM

ಮೈಸೂರು: 7 ವರ್ಷದ ಹಿಂದೆ ವಿವಾಹವಾಗಿದ್ದ ತನ್ನ ಮಡದಿಗೆ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಗಂಡನ ಮನೆ ಜಪ್ತಿಗೆ ಮೈಸೂರಿನ ಕೋರ್ಟ್‌ ಆದೇಶ ನೀಡಿದೆ. ಮಾಜಿ ಶಾಸಕ ದಿ. ಶಂಕರಲಿಂಗೇಗೌಡ ಅವರ ಮಗ ನಾಗೇಶ್, 7 ವರ್ಷದ ಹಿಂದೆ ಜಯಶ್ರೀ ಎಂಬುವವರನ್ನ ವಿವಾಹವಾಗಿದ್ದರು. ನಾಗೇಶ್, ಒಂದೂವರೆ ವರ್ಷದ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಜಯಶ್ರೀಗೆ 10,000 ರೂಪಾಯಿ ಜೀವನಾಂಶ ನೀಡ್ತಿದ್ದ ನಾಗೇಶ್, ಕಳೆದ 7 ತಿಂಗಳಿನಿಂದ ಜೀವನಾಂಶ ನೀಡಿಲ್ಲ ಎಂದು ವಿಚ್ಛೇದಿತ ಪತ್ನಿ ಜಯಶ್ರೀ ಕೋರ್ಟ್ ಮೊರೆ […]

ಜೀವನಾಂಶ ನೀಡದ ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಆದೇಶ
Follow us on

ಮೈಸೂರು: 7 ವರ್ಷದ ಹಿಂದೆ ವಿವಾಹವಾಗಿದ್ದ ತನ್ನ ಮಡದಿಗೆ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಗಂಡನ ಮನೆ ಜಪ್ತಿಗೆ ಮೈಸೂರಿನ ಕೋರ್ಟ್‌ ಆದೇಶ ನೀಡಿದೆ.

ಮಾಜಿ ಶಾಸಕ ದಿ. ಶಂಕರಲಿಂಗೇಗೌಡ ಅವರ ಮಗ ನಾಗೇಶ್, 7 ವರ್ಷದ ಹಿಂದೆ ಜಯಶ್ರೀ ಎಂಬುವವರನ್ನ ವಿವಾಹವಾಗಿದ್ದರು. ನಾಗೇಶ್, ಒಂದೂವರೆ ವರ್ಷದ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಜಯಶ್ರೀಗೆ 10,000 ರೂಪಾಯಿ ಜೀವನಾಂಶ ನೀಡ್ತಿದ್ದ ನಾಗೇಶ್, ಕಳೆದ 7 ತಿಂಗಳಿನಿಂದ ಜೀವನಾಂಶ ನೀಡಿಲ್ಲ ಎಂದು ವಿಚ್ಛೇದಿತ ಪತ್ನಿ ಜಯಶ್ರೀ ಕೋರ್ಟ್ ಮೊರೆ ಹೋಗಿದ್ದರು. ಇದೀಗ ನಾಗೇಶ್ ಮನೆಯಲ್ಲಿರುವ ವಸ್ತುಗಳನ್ನ ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ.

Published On - 2:00 pm, Mon, 28 October 19