ಕೊರೊನಾ ಸೋಂಕಿನ ನಡುವೆ ನಕಲಿ ವೈದ್ಯರ ಹಾವಳಿ; ಸಾರ್ವಜನಿಕರೇ ಎಚ್ಚರ

Fake doctors: ಎಸ್​ಎಸ್​ಎಲ್​ಸಿ ಅನುತ್ತೀರ್ಣನಾಗಿದ್ದರೂ ವೈದ್ಯನೆಂದು ಬೋರ್ಡ್​ ಹಾಕಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಮಹಾಶಯ ದಾಳಿಯ ವೇಳೆ ಸಿಕ್ಕಿಬಿದ್ದಿದ್ದಾನೆ.

ಕೊರೊನಾ ಸೋಂಕಿನ ನಡುವೆ ನಕಲಿ ವೈದ್ಯರ ಹಾವಳಿ; ಸಾರ್ವಜನಿಕರೇ ಎಚ್ಚರ
ನಕಲಿ ಆಸ್ಪತ್ರೆ
Follow us
guruganesh bhat
|

Updated on:May 06, 2021 | 4:35 PM

ಕಾರವಾರ: ಕೊರೊನಾ ಸೋಂಕಿನಿಂದ ದೇಶಕ್ಕೆ ದೇಶವೇ ನಲುಗುತ್ತಿದ್ದರೆ ಚಿಕಿತ್ಸೆ, ಔಷಧ ಚಿಕಿತ್ಸೆ ಹೆಸರಲ್ಲಿ ಮೋಸ ಮಾಡುವವರು ಹುಟ್ಟಿಕೊಂಡಿರುವುದು ಬಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ 50 ನಕಲಿ ಕ್ಲಿನಿಕ್​ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ನಿತಿನ್ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿದ್ದಾರೆ.

ಎಸ್​ಎಸ್​ಎಲ್​ಸಿ ಅನುತ್ತೀರ್ಣನಾಗಿದ್ದರೂ ವೈದ್ಯರೆಂದು ಬೋರ್ಡ್​ ಹಾಕಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಮಹಾಶಯರು ದಾಳಿಯ ವೇಳೆ ಸಿಕ್ಕಿಬಿದ್ದಿದ್ದಾರೆ. ದಾಳಿಯ ವೇಳೆ ನಕಲಿ ವೈದ್ಯರು ಬಳಸುತ್ತಿದ್ದ ಔಷಧ, ಸಿರಿಂಜ್​, ಪರಿಕರಗಳನ್ನು ಜಪ್ತಿಗೊಳಿಸಲಾಗಿದೆ. ದಾಳಿಯ ವೇಳೆ ಸಿಕ್ಕಿಬಿದ್ದ ನಕಲಿ ವೈದ್ಯರ ವಿರುದ್ಧ ಕರ್ನಾಟಕ ಸ್ಟೇಟ್ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಯಾವುದೇ ಅನುಮತಿ ಹಾಗೂ ವಿದ್ಯಾರ್ಹತೆ ಇಲ್ಲದೇ ಇರುವ ನಕಲಿ ವೈದ್ಯರು ಕೊರೊನಾ ,ಏಡ್ಸ್ ಮುಂತಾದ ರೋಗಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ರೀತಿಯ 50 ಕ್ಲಿನಿಕ್​ಗಳ ಮೇಲೆ ನಡೆಸಿದ ದಾಳಿಯಲ್ಲಿ ವಿವಿಧ ಔಷಧ, ಸಿರೆಂಜ್, ಭ್ರೂಣಪತ್ತೆ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. 50 ಜನರಲ್ಲಿ ಹಲವರು ಎಸ್.ಎಸ್.ಎಲ್.ಸಿ ಸಹ ಪಾಸಾಗದವರಿದ್ದು ಉಳಿದಂತೆ ಅಲೋಪತಿ, ಅಧ್ಯಯನ ಮಾಡಿ  ಯಾವುದೇ ನೊಂದಣಿ ಮಾಡಿಕೊಳ್ಳದೇ ನಿಯಮ ಉಲ್ಲಂಘಿಸಿ ಅಲೋಪಥಿ ಮೆಡಿಸಿನ್ ನೀಡುತ್ತಿದ್ದರು. ಇದಲ್ಲದೇ ಹಲವು ನಕಲಿ ವೈದ್ಯರು ಮೊಬೈಲ್ ಕ್ಲಿನಿಕ್ ಸಹ ಮಾಡಿಕೊಂಡಿದ್ದು, ಕೊರೊನಾ ಸೋಂಕಿತರಿಗೆ ಮನೆಗೆ ತೆರಳಿ ಚಿಕಿತ್ಸೆ ನೀಡುವ ಜೊತೆ ದುಪ್ಪಟ್ಟು ಹಣ ಗಳಿಸುತ್ತಿದ್ದರು ಎಂದು ಹೇಳಲಾಗಿದೆ.  ಸೋಂಕಿತರ ಮಾಹಿತಿಯನ್ನು  ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹ ತಿಳಿಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಹಲವರಿಂದ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ 50 ನಕಲಿ ವೈದ್ಯರಿಗೆ ತಾಲೂಕಾ ವೈದ್ಯಾಧಿಕಾರಿ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಹೆಚ್ಚಾದ ಕೊರೊನಾ ಸೋಂಕಿತರು; ಎರಡನೇ ಅಲೆಯಲ್ಲಿ ಸೋಂಕಿತರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ

ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

(Fake doctors are treating for fever like Covid 19 in Ankola Uttara Kannada)

Published On - 4:19 pm, Thu, 6 May 21