ಕಳ್ಳತನ ಮಾಡಿದ್ದಾನೆಂದು ಬಾಲಕನನ್ನ ಹತ್ಯೆಗೈದ ಆರೋಪ: ಅಂಗಡಿ ಮುಂದೆ ಶವವಿಟ್ಟು ಕುಟುಂಬಸ್ಥರ ಧರಣಿ

ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆಂದು ಬಾಲಕನನ್ನು ಹತ್ಯೆಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ಬಾಲಕನ ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಗಿದೆ. ಅಂಗಡಿ ಮುಂದೆ ಬಾಲಕನ ಶವವಿಟ್ಟು ಆತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕಳ್ಳತನ ಮಾಡಿದ್ದಾನೆಂದು ಬಾಲಕನನ್ನ ಹತ್ಯೆಗೈದ ಆರೋಪ: ಅಂಗಡಿ ಮುಂದೆ ಶವವಿಟ್ಟು ಕುಟುಂಬಸ್ಥರ ಧರಣಿ
ಅಂಗಡಿ ಮುಂದೆ ಶವವಿಟ್ಟು ಕುಟುಂಬಸ್ಥರ ಧರಣಿ
Follow us
KUSHAL V
|

Updated on:Mar 23, 2021 | 6:51 PM

ಹಾವೇರಿ: ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆಂದು ಬಾಲಕನನ್ನು ಹತ್ಯೆಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ಬಾಲಕನ ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಗಿದೆ. ಅಂಗಡಿ ಮುಂದೆ ಬಾಲಕನ ಶವವಿಟ್ಟು ಆತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

HVR PROTEST 1

ಅಂಗಡಿ ಮುಂದೆ ಶವವಿಟ್ಟು ಕುಟುಂಬಸ್ಥರ ಧರಣಿ

ಏನಿದು ಪ್ರಕರಣ? ಮಾ.16ರಂದು ಪ್ರವೀಣ್​ ಕರಿಶೆಟ್ಟರ ಎಂಬುವವರ ಅಂಗಡಿಗೆ ಹರೀಶಯ್ಯ ಹಿರೇಮಠ ಎಂಬ ಬಾಲಕ ಹೋಗಿದ್ದನು. ಈ ವೇಳೆ, ಅಂಗಡಿಯಲ್ಲಿ ಹಣ ಕಳ್ಳತನ ಮಾಡಿದ್ದಾನೆಂದು ಆತನ ಹತ್ಯೆಮಾಡಲಾಗಿದೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.

ಹರೀಶಯ್ಯನಿಗೆ ಕಿವಿ ಹಿಡಿಸಿ, ಬೆನ್ನಿನ ಮೇಲೆ ಕಲ್ಲನ್ನಿಟ್ಟು ಹೂತು ಹಾಕಲು ಯತ್ನ ನಡೆಸಲಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ಬಾಲಕನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬಾಲಕ ಮೃತಪಟ್ಟಿದ್ದಾನೆ.

ಇದೀಗ, ಪ್ರವೀಣ ಕರಿಶೆಟ್ಟರ, ಬಸವಣ್ಣೆವ್ವ ಕರಿಶೆಟ್ಟರ, ಶಿವರುದ್ರಪ್ಪ ಮತ್ತು ಕುಮಾರ ಹಾವೇರಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MDK ARREST 2

ಒಂಟಿ ಮಹಿಳೆಯನ್ನು ಕೊಂದಿದ್ದ ಮೆಕ್ಯಾನಿಕಲ್ ಇಂಜಿನಿಯರ್ ಸೆರೆ

ಮಡಿಕೇರಿಯಲ್ಲಿ ಒಂಟಿ ಮಹಿಳೆಯನ್ನು ಕೊಂದಿದ್ದ ಮೆಕ್ಯಾನಿಕಲ್ ಇಂಜಿನಿಯರ್ ಸೆರೆ ಮಡಿಕೇರಿಯಲ್ಲಿ ಒಂಟಿ ಮಹಿಳೆಯನ್ನು ಕೊಂದಿದ್ದ ಆರೋಪಿಯನ್ನು ಅರೆಸ್ಟ್​ ಮಾಡಲಾಗಿದೆ. ಮೂಡಬಿದಿರೆಯ ಹೊಸಬೆಟ್ಟು ನಿವಾಸಿ ಅನಿಲ್(30) ಬಂಧಿತ ಆರೋಪಿ. ಕೊಡಗು ಅಪರಾಧ ಪತ್ತೆ ದಳ ಆರೋಪಿಯನ್ನು ಬಂಧಿಸಿದೆ. ಅಂದ ಹಾಗೆ, ಬಂಧಿತ ಅನಿಲ್​ ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್. ಆದರೆ ಸದ್ಯ, ಖಾಸಗಿ ರೆಸಾರ್ಟ್‌ನಲ್ಲಿ ಕೆಲಸಕ್ಕಿದ್ದನು.

ಅನಿಲ್​ ಫೆಬ್ರವರಿ 23ರಂದು ಕೆನಿಡುಗಣೆ ಗ್ರಾಮದ ಲಲಿತಾ ಎಂಬುವವರನ್ನು ಕೊಂದಿದ್ದ. ಹಣದಾಸೆಗಾಗಿ ಲಲಿತಾರನ್ನ ಅನಿಲ್​ ಕೊಂದಿದ್ದ. ಸದ್ಯ, ಆರೋಪಿ ಬಳಿಯಿದ್ದ ಕಳ್ಳತನದ ಚಿನ್ನಾಭರಣ ಮತ್ತು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆಕಸ್ಮಿಕ ಬೆಂಕಿ, ತಯಾರಿಸಿಟ್ಟಿದ್ದ ಪೊರಕೆಗಳು ಸುಟ್ಟು ಭಸ್ಮ ಆಕಸ್ಮಿಕ ಬೆಂಕಿ ತಾಗಿ ತಯಾರಿಸಿಟ್ಟಿದ್ದ ಪೊರಕೆಗಳು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರದ ಕೊಂಚಿಕೊರಮರ ಕಾಲೋನಿಯಲ್ಲಿ ನಡೆದಿದೆ. ಮಳ್ಳೆಪ್ಪ ಕೊಂಚಿಕೊರಮರಗೆ ಸೇರಿದ ಪೊರಕೆ ಸುಟ್ಟು ಭಸ್ಮವಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

VIJ FIRE 3

ಆಕಸ್ಮಿಕ ಬೆಂಕಿ, ತಯಾರಿಸಿಟ್ಟಿದ್ದ ಪೊರಕೆಗಳು ಸುಟ್ಟು ಭಸ್ಮ

ಇದನ್ನೂ ಓದಿ: ಯೋಧರು ತೆರಳುತ್ತಿದ್ದ ಬಸ್ ಸ್ಫೋಟಿಸಿದ ನಕ್ಸಲರು: ಮೂವರು ಹುತಾತ್ಮ, 21 ಯೋಧರಿಗೆ ಗಾಯ

Published On - 6:50 pm, Tue, 23 March 21

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ