ಬೆಂಗಳೂರು: ನಗರದಲ್ಲಿ ಕೊರೊನಾ ಪೀಡಿತರ ನರಕಯಾತನೆ ಮುಂದುವರೆದಿದೆ. ಸೋಂಕಿನಿಂದ ಮೃತಪಟ್ಟರೆ ಶವ ಸಾಗಣೆಗೂ ನರಕ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಜೀವಬಿಟ್ಟ ಸೋಂಕಿತ ವ್ಯಕ್ತಿಯ ಶವ ಸಾಗಿಸಲು ಕುಟುಂಬಸ್ಥರು ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.
ಜೂ.30ರಂದು ನಂದಿನಿ ಲೇಔಟ್ನ ದಂಪತಿಗೆ ಜ್ವರ ಕಾಣಿಸಿತ್ತು. ಹೀಗಾಘಿ ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಂಪತಿ ಹೋಗಿದ್ದರು. ಸ್ಯಾಂಪಲ್ ಪಡೆದ ಸಿಬ್ಬಂದಿ ಹೋಂ ಕ್ವಾರಂಟೈನ್ಗೆ ಸೂಚಿಸಿದ್ರು. ಜುಲೈ 2ರಂದು ಪತಿಗೆ ತೀವ್ರ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ನಂತರ ಚಿಕಿತ್ಸೆ ಪಡೆಯಲು ಇಎಸ್ಐ ಆಸ್ಪತ್ರೆಗೆ ತೆರಳಿದ್ರು. ಆಗ ESI ವೈದ್ಯರು ಖಾಸಗಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ರು. ಖಾಸಗಿ ಆಸ್ಪತ್ರೆ ವೈದ್ಯರು ಕೊವಿಡ್ ಟೆಸ್ಟ್ ರಿಪೋರ್ಟ್ ತರುವಂತೆ ಕಳುಹಿಸಿದ್ರು. ನಂತರ ಮಹಾಲಕ್ಷ್ಮೀ ಲೇಔಟ್ನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ರಕ್ತ ಪರೀಕ್ಷೆ, ಚೆಸ್ಟ್ ಎಕ್ಸ್ರೇ, ಗಂಟಲು ದ್ರವ ಪರೀಕ್ಷೆ ಮಾಡಿಸಿದ್ರು. ರಿಪೋರ್ಟ್ ಬಂದ ಮೇಲೆ ನಿಮಗೆ ಕೊರೊನಾ ದೃಢಪಟ್ಟಿದೆ ಎಂದು ಸಿಬ್ಬಂದಿ ತಿಳಿಸಿದ್ರು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ರು.
ಯಾವ ಆಸ್ಪತ್ರೆಗೆ ಹೋದರು ಚಿಕಿತ್ಸೆ ಸಿಗಲಿಲ್ಲ
ಆಗ ಕೊರೊನಾ ಸೋಂಕಿತ ವ್ಯಕ್ತಿ ತುಮಕೂರು ರಸ್ತೆಯ ಪೀಪಲ್ ಟ್ರೀ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಬೆಡ್ ಖಾಲಿಯಿಲ್ಲವೆಂದು ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಿದ್ರು. ಅಲ್ಲಿಂದ ಮತ್ತೆ MS ರಾಮಯ್ಯ ಆಸ್ಪತ್ರೆ, ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಬೆಡ್ ಖಾಲಿಯಿಲ್ಲ ಎಂದು ವಾಪಸ್ ಅಲ್ಲಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದಾತೆ ಅಲ್ಲಿ ಸಿಬ್ಬಂದಿ ನಾವು ಇಲ್ಲಿ ನಿಮ್ಮನ್ನು ದಾಖಲಿಸಿಕೊಳ್ಳುತ್ತೇವೆ, ಆದರೆ ಇಲ್ಲಿ ವೆಂಟಿಲೇಟರ್ ಇಲ್ಲವೆಂದು ಮಾಹಿತಿ ನೀಡಿದ್ದಾರೆ. ಇಲ್ಲಿ ಆಕ್ಸಿಜನ್ ಕೊರತೆಯಿದೆ ಬೇರೆಡೆ ತೆರಳಿ ಎಂದು ತಿಳಿಸಿದ್ದಾರೆ. ಅಲ್ಲಿಂದ ಸಂಜೀವಿನಿ ಆಸ್ಪತ್ರೆಗೆ ಕೊರೊನಾ ಸೋಂಕಿತ ಹೋಗಿದ್ದಾರೆ. ಆದ್ರೆ ಸಂಜೀವಿನಿ ಆಸ್ಪತ್ರೆಯಲ್ಲಿ ಕೊವಿಡ್ ರಿಪೋರ್ಟ್ ನೀಡಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಆರೋಗ್ಯಾಧಿಕಾರಿ ಬಾಲಸುಂದರ್ಗೆ ಫೋನ್ ಕರೆ ಮಾಡಿದಾಗ ರಿಪೋರ್ಟ್ ನಮ್ಮ ಬಳಿಯಿದೆ ಎಂದಿದ್ದಾರೆ. ನಂತರ ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ರಾತ್ರಿ 2 ಗಂಟೆವರೆಗೆ ಸ್ನೇಹಿತನ ಜತೆ ಸೋಂಕಿತ ವ್ಯಕ್ತಿ ಮಾತನಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಇಎಸ್ಐ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾಗ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆಂದು ಮಾಹಿತಿ ಸಿಕ್ಕಿದೆ. ರಾತ್ರಿವರೆಗೆ ಕಾದರೂ ಶವ ಸಾಗಿಸಲು ಌಂಬುಲೆನ್ಸ್ ಸಿಕ್ಕಿಲ್ಲ. ಮೃತನ ಪತ್ನಿ, ಮಗ ಇಎಸ್ಐ ಆಸ್ಪತ್ರೆ ಬಳಿ ಕಾದು ಕುಳಿತಿದ್ರು. ಕೊನೆಗೆ ಮೃತನ ದೇಹವನ್ನು ಮಂಗಳವಾರ ರಾತ್ರಿ ಌಂಬುಲೆನ್ಸ್ನಲ್ಲಿ ಕೊಂಡೊಯ್ದಿದ್ದಾರೆ.
Published On - 11:23 am, Thu, 9 July 20