ಬೆಂಗಳೂರು: ಕೃಷಿ ಕಾಯ್ದೆ ತಿದ್ದು ಪಡಿ ವಾಪಸ್ ಆಗ್ಬೇಕು.. ನೂತನ ಕೃಷಿ ಕಾಯ್ದೆ ತೊಲಗಬೇಕು ಅಂತಾ 116 ದಿನಗಳಿಂದಲೂ ರೈತರು ಹೋರಾಟ ಮಾಡ್ತಿದ್ದಾರೆ. ಅದ್ರಲ್ಲೂ ದೆಹಲಿ ಬಳಿಯೇ ಠಿಕಾಣಿ ಹೂಡಿ ಕೇಂದ್ರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಅನ್ನದಾತರ ಈ ಹೋರಾಟ ನಿನ್ನೆ ರಾಜ್ಯ ರಾಜಧಾನಿಗೂ ಎಂಟ್ರಿಯಾಗಿತ್ತು. ಕೃಷಿ ಕಾಯ್ದೆ ವಿರುದ್ಧ ತಿರುಗಿಬಿದ್ದಿರೋ ರೈತರು ನಿನ್ನೆ ಬೆಂಗಳೂರು ಚಲೋಗೆ ಕರೆ ನೀಡಿದ್ರು. ಹೀಗಾಗಿ ಸಾವಿರಾರು ರೈತರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ಜಮಾವಣೆಗೊಂಡು ಬಳಿಕ ವಿಧಾನಸೌಧದತ್ತ ತೆರಳಿದ್ರು. ಆದ್ರೆ ಮಾರ್ಗ ಮಧ್ಯದಲ್ಲೇ ಪೊಲೀಸರು ವಿಧಾನಸೌಧದತ್ತ ಹೋಗದಂತೆ ತಡೆದ್ರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೀತು. ಈ ವೇಳೆ ಎಂಟ್ರಿಯಾದ ಹಿರಿಯ ಪೊಲೀಸ್ ಅಧಿಕಾರಿಗಳು ರೈತರ ಱಲಿಯನ್ನ ಫ್ರೀಡಂ ಪಾರ್ಕ್‌ನತ್ತ ತಿರುಗಿಸಿದ್ರು.
ಮಾರ್ಚ್ 26 ರಂದು ಕರ್ನಾಟಕ ಬಂದ್
ಇನ್ನು ಇದೇ ಮಾರ್ಚ್ 26 ರಂದು ರೈತರ ಹೋರಾಟ ನಾಲ್ಕು ತಿಂಗಳು ಪೂರ್ಣಗೊಳಿಸಲಿದೆ. ಹೀಗಾಗಿ ಆವತ್ತು ಭಾರತ್ ಬಂದ್ ಆಚರಿಸಲು ರೈತ ಸಂಘಟನೆಗಳು ಕರೆ ನೀಡಿವೆ. ರಾಜ್ಯದಲ್ಲೂ ಕರ್ನಾಟಕ ಬಂದ್ ಹೆಸರಲ್ಲಿ ಆವತ್ತು ಮುಷ್ಕರ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಇನ್ನು ಸಮಾವೇಶದ ನೇತೃತ್ವ ವಹಿಸಿದ್ದ ರಾಷ್ಟ್ರೀಯ ರೈತ ನಾಯಕ ರಾಕೇಶ್ ಸಿಂಗ್ ಟಿಕಾಯತ್, ಕೇಂದ್ರದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲಾ, ಮೋದಿ ಸರ್ಕಾರ ಅಂತಾ ಗುಡುಗಿದ್ರು.
ರೈತರ ಕಿಚ್ಚು ಹೆಚ್ಚಾಗ್ತಿದ್ದಂತೆ ಸಿಎಂ ಬಿಎಸ್‌ವೈ ಸೂಚನೆಯಂತೆ ಸ್ಥಳಕ್ಕೆ ಕೃಷಿ ಸಚಿವ ಬಿಸಿ ಪಾಟೀಲ್ ಎಂಟ್ರಿಯಾಗಿದ್ರು. 23 ಬೇಡಿಕೆಗಳ ರೈತರ ಮನವಿ ಸ್ವೀಕರಿಸಿದ ಸಚಿವರು , ರೈತರ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುತ್ತೇನೆ . ಈ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ತಾರೆ ಅಂದ್ರು .
ಒಟ್ನಲ್ಲಿ ಸಂಯುಕ್ತ ಹೋರಾಟ ಸಮಿತಿ, ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಱಲಿಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ರು. ಕೃಷಿಕರ ಹೋರಾಟ ಕಿಚ್ಚು ರಂಗೇರಿದೆ. ಕರ್ನಾಟಕ ಜನ ಸದ್ಯದಲ್ಲೇ ಮತ್ತೊಂದು ಬಂದ್ ಎದುರಿಸಬೇಕಾಗಿದೆ.
ಇದನ್ನೂ ಓದಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ