ಮೈಸೂರು: ಸಾಲಬಾಧೆಯಿಂದಾಗಿ ರೈತ ಕುಗ್ಗಿದ್ದ. ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದ. ಇದನ್ನು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ದುರ್ದೈವಿ ಹುಣಸೂರು ತಾಲೂಕಿನ ಬಿ.ಆರ್. ಕಾವಲ್ ಗ್ರಾಮದ ಅಪ್ಪಾಜಿಗೌಡ(67) ಎಂದು ತಿಳಿದು ಬಂದಿದೆ.
ಅಪ್ಪಾಜಿಗೌಡ 6 ಎಕರೆ ಜಮೀನನ್ನು ಹೊಂದಿದ್ದನು. ಜಮೀನಿನ ತುಂಬ ತಂಬಾಕು, ಮುಸುಕಿನ ಜೋಳ ಹಾಗೂ ರಾಗಿಯನ್ನು ಬೆಳೆಯುತ್ತಿದ್ದನು. ಬ್ಯಾಂಕಿನಲ್ಲಿ ಒಟ್ಟು 9ಲಕ್ಷ ಸಾಲವಿತ್ತು. ಇದರ ಜೊತೆಗೆ, ಅನಾರೋಗ್ಯದ ಸಮಸ್ಯೆ ಕೂಡ ಇತ್ತು. ಸಾಲ ತೀರಿಸಲಾಗಿದೆ ಕ್ರಿಮಿನಾಶಕ ಸೇವಿಸಿ ಅಪ್ಪಾಜಿಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣಾಪುರ ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ