ಲಾಕ್​ಡೌನ್​ ಎಫೆಕ್ಟ್: ಬೆಳೆದ ಬೆಳೆಗೆ ಬೆಲೆ ಇಲ್ಲ; ಕಟಾವು ಮಾಡದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟ ಮಂಡ್ಯದ ರೈತ

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದ ರೈತ ಉತ್ತಮವಾಗಿ ಬೆಳೆ ಬೆಳೆದರೂ ಮಾರ್ಕೆಟ್ ಮಾಡಲಾಗದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟಿದ್ದಾರೆ. ಬೆಳೆಯನ್ನು ಜಮೀನಿನಲ್ಲೇ ಬಿಟ್ಟಿರುವ ರೈತ ನಂದೀಶ್. ನಂದೀಶ್ ತನ್ನ ಎರಡೂವರೆ ಎಕರೆ ಪ್ರದೇಶದಲ್ಲಿ ಚೆಂಡು ಹೂ, ಸಿಹಿಕುಂಬಳಕಾಯಿ ಬೆಳೆ ಬೆಳೆದಿದ್ದರು.

ಲಾಕ್​ಡೌನ್​ ಎಫೆಕ್ಟ್: ಬೆಳೆದ ಬೆಳೆಗೆ ಬೆಲೆ ಇಲ್ಲ; ಕಟಾವು ಮಾಡದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟ ಮಂಡ್ಯದ ರೈತ
ಕಟಾವು ಮಾಡದೆ ಜಮೀನಿನಲ್ಲಿ ಬಿಟ್ಟ ಚೆಂಡು ಹೂ ಮತ್ತು ಸಿಹಿಕುಂಬಳಕಾಯಿ
sandhya thejappa

|

May 18, 2021 | 2:27 PM

ಮಂಡ್ಯ: ಕಳೆದ ಬಾರಿ ಲಾಕ್​ಡೌನ್​ನಿಂದ ರೈತ ವರ್ಗ ಸಂಕಷ್ಟ ಅನುಭವಿಸಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆದು ಒಳ್ಳೆಯ ಲಾಭವನ್ನು ಪಡೆಯಬೇಕು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅನಿವಾರ್ಯವಾಗಿ ಲಾಕ್​ಡೌನ್​ ಘೋಷಿಸಿದೆ. ಹೀಗಾಗಿ ರೈತನ ಕನಸು ನುಚ್ಚು ನೂರಾಗಿದೆ. ಲಾಕ್​ಡೌನ್​ನಿಂದ ಬೆಳೆಗೆ ಹೆಚ್ಚು ಬೇಡಿಕೆ ಇಲ್ಲ. ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗೆ ಕಂಗಾಲಾದ ರೈತರೊಬ್ಬರು ಬೆಳೆದ ಬೆಳೆಯನ್ನು ಜಮೀನಿನಲ್ಲೇ ಬಿಡುವ ನಿರ್ಧಾರ ಮಾಡಿದ್ದಾರೆ.

ಸದ್ಯ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ರೈತರದ್ದಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದ ರೈತ ಉತ್ತಮವಾಗಿ ಬೆಳೆ ಬೆಳೆದರೂ ಮಾರ್ಕೆಟ್ ಮಾಡಲಾಗದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟಿದ್ದಾರೆ. ಬೆಳೆಯನ್ನು ಜಮೀನಿನಲ್ಲೇ ಬಿಟ್ಟಿರುವ ರೈತ ನಂದೀಶ್. ನಂದೀಶ್ ತನ್ನ ಎರಡೂವರೆ ಎಕರೆ ಪ್ರದೇಶದಲ್ಲಿ ಚೆಂಡು ಹೂ, ಸಿಹಿಕುಂಬಳಕಾಯಿ ಬೆಳೆ ಬೆಳೆದಿದ್ದರು. ಫಸಲು ಕೂಡ ಉತ್ತಮವಾಗಿ ಬಂದಿತ್ತು. ಬೆಳೆಯನ್ನು ಮೊದಲು ಕಟಾವು ಮಾಡಬೇಕಂದು ನಂದೀಶ್ ಯೋಚಿಸಿದ್ದರು. ಆ ವೇಳೆ ರಾಜ್ಯದಲ್ಲಿ ಲಾಕ್​ಡೌನ್​​ ಘೋಷಣೆಯಾಯಿತು.

ಲಾಕ್​ಡೌನ್​ನಿಂದಾಗಿ ಕಂಗಾಲಾದ ರೈತ ಬೆಳೆಯನ್ನು ಕಟಾವು ಮಾಡಿ ಮಾರ್ಕೆಟ್​ಗೆ ಸಾಗಿಸಿದ್ದರೂ ಅಲ್ಲಿಕೊಂಡುಕೊಳ್ಳುವವರಿಲ್ಲದೆ ನಷ್ಟವಾಗುತ್ತದೆ ಎಂದು ಯೋಚಿಸಿದರು. ಈಗಾಗಲೇ ಬೆಳೆ ಬೆಳೆದು ನಷ್ಟ ಅನುಭವಿಸಿದ್ದಲ್ಲದೆ ಅದನ್ನ ಕಟಾವು ಮಾಡಿ ಮಾರ್ಕೆಟ್​ಗೆ ಸಾಗಿಸಿ ಮತ್ತೆ ನಷ್ಟ ಅನುಭವಿಸುವ ಬದಲು ಬೆಳಯನ್ನು ಜಮೀನಿನಲ್ಲೇ ಬಿಡುವುದು ಒಳ್ಳೆಯದು ಎಂದು ರೈತ ನಿರ್ಧರಿಸಿದರು. ಒಂದೇ ಒಂದು ಬಾರಿಯೂ ಬೆಳೆ ಕಟಾವು ಮಾಡದ ರೈತ ಹೀಗಾಗಿ ಜಮೀನಿನಲ್ಲೇ 5 ಟನ್​ ವರೆಗೂ ಚೆಂಡು ಹೂ. ಸುಮಾರು 7 ಟನ್​ ವರೆಗೂ ಸಿಹಿಕುಂಬಳ ಕಾಯಿಯನ್ನು ಬಿಟ್ಟಿದ್ದಾರೆ.

ಬೆಳೆದ ಹೂವನ್ನು ಎಸೆದ ರೈತರು ಚಿಕ್ಕಬಳ್ಳಾಪುರ: ಮೇ 20 ರಿಂದ 23ರ ವರೆಗೂ ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಬಂದ್ ಹಿನ್ನೆಲೆ ಹೂ ಮಾರಾಟ ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರುಪಾಯಿ ಸಲಾ ಸೂಲ ಮಾಡಿದ ಬೆಳೆದ ಹೂಗಳನ್ನು ಎಸೆದು ಅಸಮಧಾನ ಹೊರ ಹಾಕಿದ್ದಾರೆ. ನಷ್ಟಕ್ಕೆ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋತಿಯ ಹಸಿವು ನೀಗಿಸಿದ ನಿರ್ಮಾಪಕ ನೆಲಮಂಗಲ: ಲಾಕ್​ಡೌನ್​ನಿಂದ ಮೂಕ ಪ್ರಾಣಿಗಳು ಆಹಾರ ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿವೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಗೊಲ್ಲಹಳ್ಳಿ ಹಾಗೂ ಗೋದಿಮಿಲ್ ಬಳಿ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಂದೊತ್ತಿನ ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಕೋತಿಗಳಿಗೆ ಕಲ್ಲಂಗಡಿ, ಬಾಳೆಹಣ್ಣು, ಪರಂಗಿ, ಮಾವು, ತಮ್ಮ ಕಾರಿನಲ್ಲಿ ತಂದು ಹಾಕುವ ಮುಖಾಂತರ ನಿರ್ಮಾಪಕ ಶಿವು ಕೃಷ್ಣಪ್ಪ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ

ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ

ಒಂದು ಆಂಬುಲೆನ್ಸ್​ನಲ್ಲಿ​ 3 ಕೊರೊನಾ ಸೋಂಕಿತರ ಮೃತದೇಹ: ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ

(farmer has left crop in land without a price for the crop in mandya)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada