ನೂರಾರು ರೈತರಿಂದ ರಸ್ತೆತಡೆ: ಪೊಲೀಸರ ವಶಕ್ಕೆ ರೈತ ಮುಖಂಡರು

|

Updated on: Dec 08, 2020 | 7:11 PM

ರಸ್ತೆ ಮೇಲೆ ವಾಹನಗಳಿಗೆ ಅಡ್ಡಲಾಗಿ ಮಲಗಿದ ರೈತರು ಸರ್ಕಾರ ಮತ್ತು ಜೆಡಿಎಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ರೈತರಿಂದ ರಸ್ತೆತಡೆ: ಪೊಲೀಸರ ವಶಕ್ಕೆ ರೈತ ಮುಖಂಡರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಭೂಸುಧಾರಣಾ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ನಗರದ ಆನಂದರಾವ್​ ವೃತ್ತದಲ್ಲಿ ನೂರಾರು ರೈತರು ರಸ್ತೆತಡೆ ಚಳವಳಿ ನಡೆಸಿದರು. ಈ ಸಂದರ್ಭ ಪೊಲೀಸರು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಮತ್ತು ಬಡಗಲೂರು ನಾಗೇಂದ್ರ ಅವರನ್ನು ವಶಕ್ಕೆ ತೆಗೆದುಕೊಂಡರು.

ರಸ್ತೆ ಮೇಲೆ ವಾಹನಗಳಿಗೆ ಅಡ್ಡಲಾಗಿ ಮಲಗಿದ ರೈತರು ಸರ್ಕಾರ ಮತ್ತು ಜೆಡಿಎಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್​​ನಲ್ಲಿ ಕಾಂಗ್ರೆಸ್​ ವಿರೋಧದ ನಡುವೆಯೂ, ಜೆಡಿಎಸ್​ ಬೆಂಬಲದೊಂದಿಗೆ ಅಂಗೀಕಾರದ ಮುದ್ರೆ ದಕ್ಕಿಸಿಕೊಂಡಿತು. ವಿಧೇಯಕದ ಪರ 31 ಹಾಗೂ ವಿರುದ್ಧ 27 ಮತಗಳು ಬಿದ್ದವು.

ಈ ವಿಧೇಯಕ ವಿಧಾನಸಭೆಯಲ್ಲಿ ಸೆಪ್ಟೆಂಬರ್​ನಲ್ಲಿ ಅಂಗೀಕಾರವಾಗಿತ್ತು. ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದಾಗ, ಸರ್ಕಾರಕ್ಕೆ ತರಾತುರಿ ಏಕೆ ಎಂದು ಪ್ರಶ್ನಿಸಿದ್ದ ಎಚ್.ಡಿ.ಕುಮಾರಸ್ವಾಮಿಯವರ ಪಕ್ಷ ಇಂದು ವಿಧಾನಪರಿಷತ್​ನಲ್ಲಿ ಬಿಲ್​ ಬೆಂಬಲಿಸಿದ್ದು ಗಮನ ಸೆಳೆಯಿತು

ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರ; JDS ಬೆಂಬಲ

Published On - 7:09 pm, Tue, 8 December 20