ಚಿಕ್ಕಬಳ್ಳಾಪುರ: ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು
ಚಿಕ್ಕಬಳ್ಳಾಪುರದ ಚಿಂತಾಮಣಿಯ ಉಪ ಕಾರಾಗೃಹದಲ್ಲಿ ಬ್ಯಾಟರಿ ಕಳ್ಳತನದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಿಚಾರಣಾಧೀನ ಕೈದಿಯೋರ್ವ ಮೃತಪಟ್ಟಿದ್ದಾನೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೋರ್ವ ಮೃತಪಟ್ಟಿದ್ದಾನೆ. 40 ವರ್ಷದ ಗಂಗಪ್ಪ ಮೃತಪಟ್ಟ ಕೈದಿ.
ಜೈಲಿನಲ್ಲೇ ಅಸ್ವಸ್ಥನಾಗಿದ್ದ ಗಂಗಪ್ಪನನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಂಗಪ್ಪ ಮೃತನಾಗಿದ್ದಾನೆ. ಬ್ಯಾಟರಿ ಕಳ್ಳತನ ಕೇಸ್ನಲ್ಲಿ ಮುಳಬಾಗಿಲು ಪೊಲೀಸ್ ಠಾಣಾ ಪೊಲೀಸರು ಗಂಗಪ್ಪನನ್ನು ಬಂಧಿಸಿದ್ದರು.
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು