1 ತಿಂಗಳಿಂದ ಹೊಲದಲ್ಲಿ ನೀರು: ನೀರಿನಲ್ಲಿ ನಿಂತೇ ತೆನೆ ಕಿತ್ತ ಬೆಳೆಗಾರರು
ಕೊನೆಗೂ ತಾನು ಬೆಳೆದ ಮೆಕ್ಕೆಜೋಳವನ್ನು ಕಟಾವು ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ ಹಾವೇರಿ ಕೆರಿಮತ್ತಿಹಳ್ಳಿ ಗ್ರಾಮದ ಕಾಂತೇಶ ಪಾಟೀಲ್.
ಹಾವೇರಿ: ಒಂದು ತಿಂಗಳಿಂದ ಈ ಕೃಷಿಕನ ಎರಡೆಕೆರೆ ಹೊಲದಲ್ಲಿ ನೀರು ತುಂಬಿತ್ತು. ಅತ್ತ ನೀರೂ ಇಳಿಯದೇ, ಇತ್ತ ಬೆಳೆದ ಬೆಳೆ ಕೈಗೂ ಸೇರದೇ ಕೃಷಿಕ ಕಂಗಾಲಾಗಿದ್ದ. ಏನ್ಮಾಡೋದಪ್ಪಾ.. ಕಷ್ಟಪಟ್ಟು ದುಡಿದರೂ ಬೆಳೆ ಕೈಸೇರುತ್ತಿಲ್ಲ ಎಂದು ತಲೆ ಮೇಲೆ ಕೈ ಹೊತ್ತಿದ್ದ. ಆದರೆ, ಕೊನೆಗೂ ತಾನು ಬೆಳೆದ ಮೆಕ್ಕೆಜೋಳವನ್ನು ಕಟಾವು ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ ಹಾವೇರಿ ಕೆರಿಮತ್ತಿಹಳ್ಳಿ ಗ್ರಾಮದ ಕಾಂತೇಶ ಪಾಟೀಲ್.
ಒಂದು ತಿಂಗಳ ಹಿಂದೆ ಜಿಲ್ಲೆಯ ಹೆಗ್ಗೇರಿ ಕೆರೆಯ ನೀರು ಕಾಂತೇಶ ಪಾಟೇಲ್ ಅವರ ಎರಡೆಕರೆ ಹೊಲಕ್ಕೆ ನುಗ್ಗಿತ್ತು. ಒಂದು ತಿಂಗಳಾದರೂ ಇಳಿಯದ ನೀರಿನಿಂದ ಕಾಂತೇಶ ಕಳವಳಕ್ಕೊಳಗಾಗಿದ್ದರು. ಇಷ್ಟು ದಿನ ನೀರು ಇಳಿಯದಿರುವುದನ್ನು ಕಾಯುತ್ತಿದ್ದರು. ಆದರೆ, ತಿಂಗಳು ಕಳೆದರೂ ನೀರು ಇಳಿಯಲಿಲ್ಲ.
ಕೊನೆಗೂ, ಕಾಂತೇಶ ಪಾಟೇಲ್ ನಿಟ್ಟುಸಿರುಬಿಟ್ಟಿದ್ದಾರೆ. ಕೃಷಿ ಕಾರ್ಮಿಕರನ್ನು ಬಳಸಿ ಹೊಲದಲ್ಲಿ ಬೆಳೆದ ಮೆಕ್ಕೆಜೋಳವನ್ನು ಕಟಾವು ಮಾಡಿಸಿದ್ದಾರೆ. ನೀರಲ್ಲಿರುವ ಮೆಕ್ಕೆಜೋಳ ಬೆಳೆಗಾರನ ಕೈಸೇರಿದೆ. ಈಗ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ ಕಾಂತೇಶ ಪಾಟೇಲ್.
Published On - 7:20 pm, Tue, 8 December 20