ರೈತರ ‘ಬಾರುಕೋಲು’ ರಾಜಕಾರಣಿಗಳಿಗೆ ತಾಗದಂತೆ ವಿಧಾನಸೌಧ, ರಾಜಭವನಕ್ಕೆ ಬಿಗಿ ಭದ್ರತೆ
ರೈತ ಮುಖಂಡರು ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಬರುವುದಾಗಿ ಹೇಳಿದ್ದಾರೆ. ಱಲಿ ನಡೆಸಲು ಈಗಾಗಲೇ ಮನವಿ ಮಾಡಿದ್ದಾರೆ.
ಬೆಂಗಳೂರು: ರೈತರ ಹೋರಾಟದ ಕಾವು ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತ ಮುಖಂಡರು ನಾಳೆ ಬಾರುಕೋಲು ಚಳವಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ, ರಾಜಭವನದ ಸುತ್ತಮುತ್ತ ಪೊಲೀಸ್ ಬಿಗಿಭದ್ರತೆ ಇರಲಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧ ಸುತ್ತಮುತ್ತ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತೇವೆ. 10 ಎಸಿಪಿ, 3 ಡಿಸಿಪಿ, 30 ಇನ್ಸ್ಪೆಕ್ಟರ್, 40 ಕೆಎಸ್ಆರ್ಪಿ ಹಾಗೂ 40 ಸಿಎಆರ್ ತುಕಡಿ ಇರಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ರೈತ ಮುಖಂಡರು ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಬರುವುದಾಗಿ ಹೇಳಿದ್ದಾರೆ. ಱಲಿ ನಡೆಸಲು ಈಗಾಗಲೇ ಮನವಿ ಮಾಡಿದ್ದಾರೆ. ಅದರೆ, ಪೊಲೀಸ್ ಇಲಾಖೆಯಿಂದ ಇದುವರೆಗೆ ಯಾವುದೇ ಅನುಮತಿ ನೀಡಿಲ್ಲ. ರಾತ್ರಿಯ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಅನುಮತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಾಳೆ ಯಾವ ರೀತಿಯಲ್ಲಿ ಪ್ರತಿಭಟನೆ ಮಾಡ್ತಾರೆ ನೋಡಬೇಕು. ನಾವು ಈಗಾಗಲೇ ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರೆ ಕೂಡಲೇ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತ ನಾಳೆಯ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ರೈತ ನಾಯಕ ಕುರುಬೂರು ಶಾಂತಕುಮಾರ್ ಹಾಗೂ ಬಡಗಲಪುರ ನಾಗೇಂದ್ರ ಬಾರುಕೋಲು ಚಳುವಳಿಯಲ್ಲಿ ನಾವು ಭಾಗವಹಿಸುತ್ತಿಲ್ಲ ಎಂದಿದ್ದಾರೆ. ಬಾರುಕೋಲು ಚಳುವಳಿ ಬಗ್ಗೆ ಕೋಡಿಹಳ್ಳಿ ನಮ್ಮ ಜತೆ ಚರ್ಚಿಸಿಲ್ಲ. ಆದರೆ, ಅನ್ನದಾತರಿಂದ 2 ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಬೃಹತ್ ಪ್ರತಿಭಟನೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ರೈತರು ಅಕ್ಷರ ಕಲಿಯದಿದ್ದರೂ ದೇಶಕ್ಕೆ ಅನ್ನ ಹಾಕುತ್ತಾರೆ; ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು