ರಾಯಚೂರು: ಮಂತ್ರಾಲಯದ ಗೋಶಾಲೆಗೆ ಮೇವು ದಾನ ನೀಡಿದ ರೈತರು

|

Updated on: Mar 09, 2021 | 1:16 PM

ರಾಯಚೂರು: ಮಂತ್ರಾಲಯದ ಗೋಶಾಲೆಯ ಜಾನುವಾರುಗಳಿಗೆ ಮೇವು ದಾನ ನೀಡಿ ರೈತರು ಉದಾರತೆ ಮೆರೆದಿದ್ದಾರೆ. ಸಿರವಾರ ತಾಲೂಕಿನ ಭಾಗ್ಯ ನಗರ ಕ್ಯಾಂಪಿನ ರೈತರು ಸುಮಾರು 30 ಟ್ರ್ಯಾಕ್ಟರ್​ನಷ್ಟು ಮೇವು ದಾನ ನೀಡಿದ್ದಾರೆ. ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ದಾನವನ್ನು ಸ್ವೀಕರಿಸಿ, ರೈತರಿಗೆ ಆಶೀರ್ವದಿಸಿದ್ದಾರೆ. ಪ್ರತಿ ವರ್ಷವೂ ಕೂಡಾ ರೈತರು ಮಂತ್ರಾಲಯಕ್ಕೆ ಮೇವು ದಾನ ಮಾಡುತ್ತಾ ಬಂದಿದ್ದಾರೆ. ಗೋಶಾಲೆಯಲ್ಲಿ ಸುಮಾರು ನೂರೈವತ್ತು ಜಾನುವಾರುಗಳಿದ್ದು, ಮೇವುಗಳನ್ನು ರೈತರು ದಾನ ನೀಡುತ್ತಾ ಬಂದಿದ್ದಾರೆ. ಮಾರ್ಚ್​ 14ರಿಂದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಮಾರ್ಚ್​ […]

ರಾಯಚೂರು: ಮಂತ್ರಾಲಯದ ಗೋಶಾಲೆಗೆ ಮೇವು ದಾನ ನೀಡಿದ ರೈತರು
ಮಂತ್ರಾಲಯ ಗೋಶಾಲೆಯ ಜಾನುವಾರಿಗಳಿಗೆ ಮೇವು ದಾನ ನೀಡಿ ರೈತರು
Follow us on

ರಾಯಚೂರು: ಮಂತ್ರಾಲಯದ ಗೋಶಾಲೆಯ ಜಾನುವಾರುಗಳಿಗೆ ಮೇವು ದಾನ ನೀಡಿ ರೈತರು ಉದಾರತೆ ಮೆರೆದಿದ್ದಾರೆ. ಸಿರವಾರ ತಾಲೂಕಿನ ಭಾಗ್ಯ ನಗರ ಕ್ಯಾಂಪಿನ ರೈತರು ಸುಮಾರು 30 ಟ್ರ್ಯಾಕ್ಟರ್​ನಷ್ಟು ಮೇವು ದಾನ ನೀಡಿದ್ದಾರೆ. ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ದಾನವನ್ನು ಸ್ವೀಕರಿಸಿ, ರೈತರಿಗೆ ಆಶೀರ್ವದಿಸಿದ್ದಾರೆ.

ಪ್ರತಿ ವರ್ಷವೂ ಕೂಡಾ ರೈತರು ಮಂತ್ರಾಲಯಕ್ಕೆ ಮೇವು ದಾನ ಮಾಡುತ್ತಾ ಬಂದಿದ್ದಾರೆ. ಗೋಶಾಲೆಯಲ್ಲಿ ಸುಮಾರು ನೂರೈವತ್ತು ಜಾನುವಾರುಗಳಿದ್ದು, ಮೇವುಗಳನ್ನು ರೈತರು ದಾನ ನೀಡುತ್ತಾ ಬಂದಿದ್ದಾರೆ.

ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದ ರೈತರು

ಮಾರ್ಚ್​ 14ರಿಂದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ

ಮಾರ್ಚ್​ 14 ರಿಂದ 20ರವರೆಗೆ ರಾಘವೇಂದ್ರ ಗುರು ವೈಭವೋತ್ಸವ ನಡೆಯಲಿದೆ. ಹಾಗೂ ಸಪ್ತ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು 32 ಅಡಿ ಏಕಶಿಲಾ ಶ್ರೀ ಅಭಯ ಆಂಜನೇಯ ಸ್ವಾಮಿ ವಿಗ್ರಹವನ್ನು ಮಾರ್ಚ್​ 14ರಂದು ಅನಾವರಣಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿ ಅರವಿಂದ ಕುಮಾರ್, ಕೆ. ನಟರಾಜನ್, ಆಂದ್ರ ಪ್ರದೇಶ​ ಹೈಕೋರ್ಟ್​ ನ್ಯಾಯಮೂರ್ತಿ ಉಮಾದೇವಿ ಹಾಗೂ ದಾನಿಗಳಾದ ಬೆಂಗಳೂರಿನ ಜಿ. ಕೃಷ್ಣ ಮೂರ್ತಿ ಮತ್ತು ಕುಟುಂಬದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಮಣದ ವಿಶೇಷ: ಮಂತ್ರಾಲಯಕ್ಕೆ ಸಾವಿರಾರು ಭಕ್ತರ ದಂಡು

ಇದನ್ನೂ ಓದಿ: ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮಂತ್ರಾಲಯ ಶ್ರೀಗಳಿಗೆ ಗೌರವ ಡಾಕ್ಟರೇಟ್