
ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು.
ರೈತನಿಂದ ಲಂಚ ಪಡೆದು ಅನುಮತಿ ನೀಡಿದ ವೆಂಕಟೇಶ್ ಕಡಿಮೆ ದರಕ್ಕೆ ಅವುಗಳನ್ನು ತಾನೆ ಕೊಂಡುಕೊಂಡಿದ್ದಾನೆ. ತಾನು ಕೊಂಡುಕೊಂಡ ದರಕ್ಕಿಂತ 4 ಪಟ್ಟು ಜಾಸ್ತಿ ದರಕ್ಕೆ ಹುಮ್ನಾಬಾದ್ ವ್ಯಾಪಾರಿ ಬಸವರಾಜ ಎಂಬುವವರಿಗೆ ಮಾರಿದ್ದಾನೆ. ಇಷ್ಟೇ ಅಲ್ಲದೆ ಸರ್ಕಾರಿ ಮರಗಳನ್ನು ಸಹ ಬಿಡುವುದಿಲ್ಲ ಎಂದು ಜಿಲ್ಲೆಯ ರೈತರು ಗಂಭೀರ ಆರೋಪ ಮಾಡಿದ್ದಾರೆ.
Published On - 8:46 am, Sun, 8 December 19