ಗಾಂಜಾ ಗಿಡ ಬೆಳೆದಿದ್ದ ಅಪ್ಪ-ಮಗನ ಸೆರೆ
ರಾಯಚೂರು: ಗಾಂಜಾ ಗಿಡ ಬೆಳೆದಿದ್ದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಲಿಂಗಸಗೂರ ತಾಲೂಕಿನ ದೇವರಭೂಪುರ ಗ್ರಾಮದ ನಿವಾಸಿಗಳಾದ ಗೋವಿಂದಪ್ಪ ಮತ್ತು ಗುಂಡಪ್ಪ ಎಂಬುವವರು ತಮ್ಮ ಮನೆಯ ಹಿತ್ತಲಲ್ಲಿ 20,000 ರೂ ಮೌಲ್ಯದ ಗಾಂಜಾ ಗಿಡ ಬೆಳೆದಿದ್ದರು. ಅಲ್ಲದೆ ಕಳೆದ ಕೆಲ ದಿನಗಳಿಂದ ಗಾಂಜಾ ಮಾರಾಟ ಮಾಡ್ತಿದ್ರು ಎಂಬ ಆರೋಪ ಕೇಳಿ ಬರುತ್ತಿತ್ತು. ವಿಷಯ ತಿಳಿದ ಪೊಲೀಸರು ತಂದೆ-ಮಗ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು: ಗಾಂಜಾ ಗಿಡ ಬೆಳೆದಿದ್ದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಲಿಂಗಸಗೂರ ತಾಲೂಕಿನ ದೇವರಭೂಪುರ ಗ್ರಾಮದ ನಿವಾಸಿಗಳಾದ ಗೋವಿಂದಪ್ಪ ಮತ್ತು ಗುಂಡಪ್ಪ ಎಂಬುವವರು ತಮ್ಮ ಮನೆಯ ಹಿತ್ತಲಲ್ಲಿ 20,000 ರೂ ಮೌಲ್ಯದ ಗಾಂಜಾ ಗಿಡ ಬೆಳೆದಿದ್ದರು.
ಅಲ್ಲದೆ ಕಳೆದ ಕೆಲ ದಿನಗಳಿಂದ ಗಾಂಜಾ ಮಾರಾಟ ಮಾಡ್ತಿದ್ರು ಎಂಬ ಆರೋಪ ಕೇಳಿ ಬರುತ್ತಿತ್ತು. ವಿಷಯ ತಿಳಿದ ಪೊಲೀಸರು ತಂದೆ-ಮಗ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published On - 12:27 pm, Tue, 10 December 19