KSRTC ಬಸ್ ಡಿಕ್ಕಿ, ಸ್ಕೂಟರ್ನಲ್ಲಿ ತೆರಳುತ್ತಿದ್ದ ತಂದೆ-ಮಗ ಸಾವು
ಮೈಸೂರು: ಕೋಟೆಹುಂಡಿ ಸರ್ಕಲ್ ಬಳಿ KSRTC ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತವಾಗಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟ್ಟೆ ಹುಣಸೂರಿನ ಪ್ರಕಾಶ್(50), ಸುರೇಶ್(23) ಮೃತ ದುರ್ದೈವಿಗಳು. ಜೆ.ಪಿ.ನಗರದ ಮಹದೇವಪುರದಲ್ಲಿ ತಂದೆ-ಮಗ ವಾಸವಿದ್ದರು. ರೇಷನ್ ಅಕ್ಕಿಗಾಗಿ ಥಂಬ್ ಕೊಡಲು ಕಟ್ಟೆ ಹುಣಸೂರಿಗೆ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಮೈಸೂರು: ಕೋಟೆಹುಂಡಿ ಸರ್ಕಲ್ ಬಳಿ KSRTC ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತವಾಗಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟ್ಟೆ ಹುಣಸೂರಿನ ಪ್ರಕಾಶ್(50), ಸುರೇಶ್(23) ಮೃತ ದುರ್ದೈವಿಗಳು.
ಜೆ.ಪಿ.ನಗರದ ಮಹದೇವಪುರದಲ್ಲಿ ತಂದೆ-ಮಗ ವಾಸವಿದ್ದರು. ರೇಷನ್ ಅಕ್ಕಿಗಾಗಿ ಥಂಬ್ ಕೊಡಲು ಕಟ್ಟೆ ಹುಣಸೂರಿಗೆ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.