ಮಳೆಯಿಂದಾಗಿ ತುಂಬಿದ ಕೆರೆ ಕಟ್ಟೆ, ಹಸಿರ ಸೊಬಗಿನಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ
ಹಾವೇರಿ: ಹಚ್ಚ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿರುವ ಪ್ರಕೃತಿ ಮಾತೆ. ಪ್ರಕೃತಿ ಮಾತೆ ಮಡಿಲಲ್ಲ ತುಂಬಿ ತುಳುಕುತ್ತಿರುವ ಕೆರೆ. ಕೆರೆಯ ಸುತ್ತ ಕಾಣೋ ಹಸಿರ ಸಿರಿ. ಹಸಿರ ಮರದಲ್ಲಿ ಹಕ್ಕಿಯೊಂದು ಪುಟ್ಟ ಗೂಡು ಕಟ್ಟಿಕೊಳ್ಳುತ್ತಿದ್ರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಓಡಾಡುತ್ತಿರುವ ಗಿಣಿರಾಮ. ಕೆರೆಯ ಕಟ್ಟೆ ಮೇಲೆ ಒಂದಿಷ್ಟು ಹಕ್ಕಿಗಳು ಸಾಲಾಗಿ ಕುಳಿತ್ತಿದ್ರೆ, ಪ್ರಕೃತಿ ಮಾತೆಗೆ ಮತ್ತಷ್ಟು ಮೆರಗು ತಂದಿರುವ ಬಣ್ಣಬಣ್ಣದ ಹೂವುಗಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ಹಸಿರು ತುಂಬಿದ ಮರಕ್ಕೆ ಬೆಳ್ಳಿ ಚುಕ್ಕಿ ಇಟ್ಟಂತೆ ಭಾಸವಾಗುತ್ತಿರುವ ಬೆಳ್ಳಕ್ಕಿ ಹಿಂಡು. ಅಬ್ಬಬ್ಬ […]
ಹಾವೇರಿ: ಹಚ್ಚ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿರುವ ಪ್ರಕೃತಿ ಮಾತೆ. ಪ್ರಕೃತಿ ಮಾತೆ ಮಡಿಲಲ್ಲ ತುಂಬಿ ತುಳುಕುತ್ತಿರುವ ಕೆರೆ. ಕೆರೆಯ ಸುತ್ತ ಕಾಣೋ ಹಸಿರ ಸಿರಿ. ಹಸಿರ ಮರದಲ್ಲಿ ಹಕ್ಕಿಯೊಂದು ಪುಟ್ಟ ಗೂಡು ಕಟ್ಟಿಕೊಳ್ಳುತ್ತಿದ್ರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಓಡಾಡುತ್ತಿರುವ ಗಿಣಿರಾಮ. ಕೆರೆಯ ಕಟ್ಟೆ ಮೇಲೆ ಒಂದಿಷ್ಟು ಹಕ್ಕಿಗಳು ಸಾಲಾಗಿ ಕುಳಿತ್ತಿದ್ರೆ, ಪ್ರಕೃತಿ ಮಾತೆಗೆ ಮತ್ತಷ್ಟು ಮೆರಗು ತಂದಿರುವ ಬಣ್ಣಬಣ್ಣದ ಹೂವುಗಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ಹಸಿರು ತುಂಬಿದ ಮರಕ್ಕೆ ಬೆಳ್ಳಿ ಚುಕ್ಕಿ ಇಟ್ಟಂತೆ ಭಾಸವಾಗುತ್ತಿರುವ ಬೆಳ್ಳಕ್ಕಿ ಹಿಂಡು. ಅಬ್ಬಬ್ಬ ಈ ಪ್ರಕೃತಿ ಮಾತೆಯ ಸೊಬಗನ್ನ ವರ್ಣಿಸೋಕೆ ಸಾಧ್ಯನೇ ಇಲ್ಲ.
ಹಾವೇರಿ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಎಡೆಬಿಡದೆ ಸುರಿದ ಮಳೆಗೆ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳೆಲ್ಲಾ ತುಂಬಿಕೊಂಡಿವೆ. ಕೆರೆಗಳು ತುಂಬಿದ್ದರಿಂದ ಕೆರೆಗಳ ಸುತ್ತ ಸುಂದರ ಹಸಿರಿನ ನಿಸರ್ಗವೇ ನಿರ್ಮಾಣವಾಗಿದೆ. ಹಸಿರಿನ ಗುಡ್ಡಗಳಲ್ಲಿ ಬಣ್ಣಬಣ್ಣದ ಹೂವುಗಳು ಅರಳಿ ನಿಂತಿವೆ. ಅದ್ರಲ್ಲೂ ಗೂಡು ಕಟ್ಟುತ್ತಿರೋ ಹಕ್ಕಿ, ಗಿಳಿಗಳ ಓಡಾಟ, ಬೀಡು ಬಿಟ್ಟಿರೋ ಬೆಳ್ಳಕ್ಕಿಗಳ ಹಿಂಡು ಹೀಗೆ ಸುಂದರ ವಾತಾವರಣವೇ ನಿರ್ಮಾಣವಾಗಿದೆ.
ಕೆರೆ ನೀರಿನಿಂದ ಕೆರೆಯ ಸುತ್ತಮುತ್ತ ಸುಂದರ ಹಸಿರ ಸೊಬಗು ಮೈದಳೆದು ನಿಂತಿದೆ. ಹಕ್ಕಿಗಳಿಗಂತೂ ಈ ಸುಂದರ ಹಸಿರ ನಿಸರ್ಗ ಹೇಳಿ ಮಾಡಿಸಿದ ತಾಣದಂತಿವೆ. ಪಕ್ಷಿಗಳು ಸಂತಾನೋತ್ಪತ್ತಿಗೆ ಗೂಡು ಕಟ್ಟುತ್ತಾ, ಮರಗಳ ಮೇಲೆ ಸ್ವಚ್ಛಂದವಾಗಿ ಹಾರಾಡಿಕೊಂಡಿವೆ. ಇನ್ನು ಬೆಳ್ಳಕ್ಕಿಗಳ ಹಿಂಡು ಕೆರೆಯ ಸುತ್ತಮುತ್ತಲಿನ ಮರಗಳ ಮೇಲೆಯೇ ಬಿಡಾರ ಹೂಡಿವೆ.
Published On - 2:05 pm, Sun, 8 December 19