Girl Baby ಹೆಣ್ಣು ಮಗು ಹುಟ್ಟಿದ್ದಕ್ಕೆ ಕುಟುಂಬದವರಿಂದ ತಾಯಿಗೆ ಅದ್ಧೂರಿ ಸ್ವಾಗತ.. ನೆರೆಹೊರೆಯವರಿಗೆಲ್ಲ ಸಿಹಿ ಹಂಚಿ ಸಂಭ್ರಮ

| Updated By: ಆಯೇಷಾ ಬಾನು

Updated on: Jun 27, 2021 | 10:25 AM

ಹೆಣ್ಣು ಮಗು ಜನಿಸಿ ಆರು ತಿಂಗಳ ಬಳಿಕ ತಂದೆಯ ಮನೆಗೆ ಬರುವಾಗ ಆ ಹೆಣ್ಣು ಮಗುವಿಗೆ ಹೂವಿನ ಹಾಸಿಗೆ ಹಾಕಿ ಹೂವಿನ ಸುರಿಮಳೆಗೈದು ಬರಮಾಡಿಕೊಂಡಿದ್ದಾರೆ. ಜೊತೆಗೆ ಇಡೀ ಕುಟುಂಬದವರು ಸೇರಿಕೊಂಡು ಆ ಮಗುವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

Girl Baby ಹೆಣ್ಣು ಮಗು ಹುಟ್ಟಿದ್ದಕ್ಕೆ ಕುಟುಂಬದವರಿಂದ ತಾಯಿಗೆ ಅದ್ಧೂರಿ ಸ್ವಾಗತ.. ನೆರೆಹೊರೆಯವರಿಗೆಲ್ಲ ಸಿಹಿ ಹಂಚಿ ಸಂಭ್ರಮ
ಹೆಣ್ಣು ಮಗು ಹುಟ್ಟಿದ್ದಕ್ಕೆ ಕುಟುಂಬದವರಿಂದ ತಾಯಿಗೆ ಅದ್ಧೂರಿ ಸ್ವಾಗತ
Follow us on

ಬೀದರ್: ಹೆಣ್ಣು ಮಗಳನ್ನು ಪಡೆಯಲು ನೂರು ಜನ್ಮದ ಪುಣ್ಯವಿರಬೇಕು. ಹೆಣ್ಣು ಮಗು ಇಲ್ಲದ ಮನೆ ಚಂದ್ರನಿಲ್ಲದ ಆಕಾಶದಂತೆ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಆದ್ರೆ ಹೆಣ್ಣು ಮಗು ಜನಿಸಿದ ಎಂದಾಕ್ಷಣ ಆಕಾಶವೇ ತಲೆಯ ಮೇಲೆ ಬಿದ್ದಂತೆ ನೊಂದು ಕೊಳ್ಳುವವರು ಈಗಲೂ ಕೆಲವರು ಇದ್ದಾರೆ. ಆದರೆ ಅದಕ್ಕೆ ಅಪವಾದವೆಂಬಂತೆ ಬೀದರ್ ಜಿಲ್ಲೆಯ ಹುಮ್ನಾಬಾದ ಪಟ್ಟಣದ ಬಸವನಗರ ನಿವಾಸಿಗಳಾದ ರೋಹಿತ ಹಾಗೂ ಪೂಜಾ ದಂಪತಿಗೆ ಹೆಣ್ಣು ಮಗು ಜನಿಸಿದ ವಿಷಯ ತಿಳಿದ ಕೂಡಲೆ ಮನೆಯಲ್ಲಿ ಸಂಭ್ರಮ ಆಚರಿಸಿದ್ದರು. ನೆರೆ ಹೊರೆಯವರಿಗೆ ಸಿಹಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದರು. ಹೆಣ್ಣು ಮಗು ಹುಟ್ಟಿದ್ದಕ್ಕೆ ದಂಪತಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ.

ಬೀದರ್ ಜಿಲ್ಲೆ ಹುಮ್ನಾಬಾದ್ನ ಬಸವನಗರ ನಿವಾಸಿಗಳಾದ ಹುಮ್ನಾಬಾದ್ನ ರೋಹಿತ್, ಪೂಜಾ ದಂಪತಿಗೆ 2021ರ ಜನವರಿ 26ರಂದು ಹೆಣ್ಣು ಮಗು ಜನಿಸಿತ್ತು. ಸದ್ಯ ಹೆಣ್ಣು ಮಗು ಜನಿಸಿ ಆರು ತಿಂಗಳ ಬಳಿಕ ತಂದೆಯ ಮನೆಗೆ ಬರುವಾಗ ಆ ಹೆಣ್ಣು ಮಗುವಿಗೆ ಹೂವಿನ ಹಾಸಿಗೆ ಹಾಕಿ ಹೂವಿನ ಸುರಿಮಳೆಗೈದು ಬರಮಾಡಿಕೊಂಡಿದ್ದಾರೆ. ಜೊತೆಗೆ ಇಡೀ ಕುಟುಂಬದವರು ಸೇರಿಕೊಂಡು ಆ ಮಗುವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ತಾಯಿ-ಮಗಳಿಗೆ ಅದ್ಧೂರಿ ಸ್ವಾಗತ

ವೃತ್ತಿಯಲ್ಲಿ ರೋಹಿತ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದು ಬೆಂಗಳೂರಿನ ಖಾಸಗಿ ಕಂಪ ನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೋಹಿತ ಪತ್ನಿ ಪೂಜಾ ಕಾಲೇಜು ಲೆಕ್ಚರ್ ಆಗಿದ್ದು ಇಬ್ಬರು ಸುಶಿಕ್ಷಿತರಾಗಿದ್ದಾರೆ. ಇವರಿಬ್ಬರಿಗೂ ಮೊದಲು ಹೆಣ್ಣು ಮಗುವಾಗಬೇಕು ಎಂಬ ಆಸೆಯಿತ್ತು. ಇವರ ಮನೆಯವಗೂ ಕೂಡಾ ಹೆಣ್ಣು ಮಗುವಾಗಬೇಕು‌ ಅನ್ನೊ ಆಸೆ ಹೊಂದಿದ್ದರು. ಹೀಗಾಗಿ ಅವರ ಆಸೆಯಂತೆ ಹೆಣ್ಣು ಮಗು ಜನಸಿದ್ದು ಮನೆಯಲ್ಲಿ ಸಂಭ್ರಮ ಇದೆ. ಜೊತೆಗೆ ಮೊದಲ ಬಾರಿ ತಂದೆಯ ಮನೆಗೆ ಮಗು ಬರುವಾಗ ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ.

ಇದನ್ನೂ ಓದಿ: ನಟಿಯರ ಫೋಟೋ ನೋಡಿ ಯಾಮಾರಬೇಡಿ; ಇಲ್ಲಿದೆ ‘ವರದನಾಯಕ’ ಹೀರೋಯಿನ್​ ಅಸಲಿ ಕಥೆ