ಹಾರೆಕೋಲಿನಿಂದ ಹೊಡೆದು ಮಗನನ್ನು ಕೊಂದ ತಂದೆ; ಮದ್ಯಕ್ಕಾಗಿ ಪೀಡಿಸಿದ ಮಗನ ಬರ್ಬರ ಹತ್ಯೆ

ಮದ್ಯ ಸೇವನೆಗಾಗಿ ಸಾಕಷ್ಟು ಹಣ ಸುರಿಯುತ್ತಿದ್ದ ಬಸವರಾಜ ಹಿರೇಕುಂಬಿ ತನ್ನ ತಂದೆಯೊಂದಿಗೆ ಜಗಳ ತೆಗೆದಿದ್ದು ಇದೇ ಮೊದಲೇನಲ್ಲ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಆತ ಮನೆಯಲ್ಲಿ ರಂಪಾಟ ಮಾಡುತ್ತಿದ್ದ. ಹಣ ಕೊಡದೇ ಇದ್ದರೆ ಕಾಡುತ್ತಿದ್ದ.

ಹಾರೆಕೋಲಿನಿಂದ ಹೊಡೆದು ಮಗನನ್ನು ಕೊಂದ ತಂದೆ; ಮದ್ಯಕ್ಕಾಗಿ ಪೀಡಿಸಿದ ಮಗನ ಬರ್ಬರ ಹತ್ಯೆ
ಹತ್ಯೆಯಾದ ವ್ಯಕ್ತಿ

ಧಾರವಾಡ: ಮದ್ಯಪಾನ ಮಾಡಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಕಾಟ ತಡೆಯಲಾರದೇ ತಂದೆಯೇ ಆತನನ್ನು ಹೊಡೆದು ಕೊಂದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಧಾರವಾಡ ನಗರದ ತೆಲುಗರ ಓಣಿಯಲ್ಲಿ ಘಟನೆ ನಡೆದಿದ್ದು ಕುಡಿತದ ಚಟ (Alcoholic) ಅಂಟಿಸಿಕೊಂಡಿದ್ದ ಬಸವರಾಜ ಹಿರೇಕುಂಬಿ(36) ಹತ್ಯೆಯಾದ ವ್ಯಕ್ತಿ. ಈತ ತನ್ನ ತಂದೆಯ ಬಳಿ ಮದ್ಯ ಸೇವಿಸಲೆಂದು ಪದೇ ಪದೇ ಹಣ (Money) ಕೇಳುತ್ತಿದ್ದ ಎನ್ನಲಾಗಿದ್ದು, ಅದೇ ವಿಚಾರಕ್ಕಾಗಿ ಆರಂಭವಾದ ಜಗಳ ತಾರಕಕ್ಕೇರಿ ನಂತರ ತಂದೆ ಫಕೀರಪ್ಪ ಮಗನ ಕಾಟ ತಾಳಲಾರದೇ ಸಿಟ್ಟಿಗೆದ್ದು ಹಾರೆಕೋಲಿನಿಂದ ಹೊಡೆದು ಕೊಲೆ (Murder) ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮದ್ಯ ಸೇವನೆಗಾಗಿ ಸಾಕಷ್ಟು ಹಣ ಸುರಿಯುತ್ತಿದ್ದ ಬಸವರಾಜ ಹಿರೇಕುಂಬಿ ತನ್ನ ತಂದೆಯೊಂದಿಗೆ ಜಗಳ ತೆಗೆದಿದ್ದು ಇದೇ ಮೊದಲೇನಲ್ಲ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಆತ ಮನೆಯಲ್ಲಿ ರಂಪಾಟ ಮಾಡುತ್ತಿದ್ದ. ಹಣ ಕೊಡದೇ ಇದ್ದರೆ ಕಾಡುತ್ತಿದ್ದ. ರಾತ್ರಿ ಶುರುವಾದ ಜಗಳ ಬೆಳಗಾದರೂ ಮುಗಿಯುತ್ತಿರರಲಿಲ್ಲ. ಇದನ್ನು ನೋಡಿ ರೋಸಿಹೋದ ಫಕೀರಪ್ಪ, ತಾಳ್ಮೆ ಕಳೆದುಕೊಂಡು ಮಗನ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಹಣ ನೀಡದೇ ಇದ್ದರೆ ಮನೆ ದಾಖಲೆ ನೀಡೆಂದು ಮಗ ಪೀಡಿಸಲಾರಂಭಿಸಿದ್ದ, ಕುಡಿತಕ್ಕೆ ಆತ ಹಣ ಸುರಿಯುವುದರಿಂದ ಫಕೀರಪ್ಪ ಆತನ ಮಾತಿಗೆ ತಕರಾರು ತೆಗೆದಿದ್ದಾರೆ. ಆದರೆ, ಪಟ್ಟು ಸಡಿಲಿಸದ ಮಗ ಹಣ ಬೇಕು ಇಲ್ಲವೇ ಮನೆ ದಾಖಲೆ ಬೇಕು ಎಂದು ಪಟ್ಟು ಹಿಡಿದು ಬೆಳಗ್ಗಿನ ತನಕವೂ ಜಗಳ ಮಾಡಿದ್ದ. ಇದೂ ಕೂಡಾ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಆರೋಪಿ ತಂದೆ ಫಕೀರಪ್ಪ ಹಿರೇಕುಂಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವ್ಯಾಸಂಗಕ್ಕೆಂದು ತಂಗಿದ್ದ ಮನೆ ಮೇಲೆ ಕಾಂಪೌಂಡ್ ಬಿದ್ದು ಅಣ್ಣ, ತಂಗಿ ಸಾವು
ನೆಲಮಂಗಲ: ವ್ಯಾಸಂಗಕ್ಕೆಂದು ಉಳಿದುಕೊಂಡಿದ್ದ ಶೀಟ್‌ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ಸಾವಿಗೀಡಾದ ದಾರುಣ ಘಟನೆ ನೆಲಮಂಗಲದ ಬಿನ್ನಮಂಗಲ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಳಿಯ ಬಿನ್ನಮಂಗಲದಲ್ಲಿ ದುರ್ಘಟನೆ ಸಂಭವಿಸಿದ್ದು, ವೇಣುಗೋಪಾಲ(22), ಕಾವ್ಯ(20) ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

WALL FELL

ಗೋಡೆ ಕುಸಿದ ಸ್ಥಳ

ತಗ್ಗು ಪ್ರದೇಶದಲ್ಲಿದ್ದ ಶೀಟ್‌ ಮನೆ ಮೇಲೆ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಕಾಂಪೌಂಡ್ ಕುಸಿದ ಕಾರಣ ಅವಘಡ ಸಂಭವಿಸಿದೆ. ಕಾಂಪೌಂಡ್ ಪಕ್ಕ ಎಂಸ್ಯಾಂಡ್ ಹಾಕಿಡಲಾಗಿತ್ತು, ಮಳೆ ಜೋರಾದ ಕಾರಣ ಕಾಂಪೌಂಡ್ ಏಕಾಏಕಿ ಕುಸಿದಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಇಬ್ಬರ ಶವ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ಓದಿ:
ಮಳೆಯ ಆರ್ಭಟದಿಂದ ಮುಂಬೈನಲ್ಲಿ 33 ಜನ ಸಾವು; ಉತ್ತರಾಖಂಡದಲ್ಲಿ ಭಾರೀ ಭೂಕುಸಿತ 

ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆ ಕುಸಿತ; 15 ಮಂದಿ ಸಾವು, ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯಾಚರಣೆ