AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಆಷಾಢ ಮಾಸದ ಮೊದಲ ಸೋಮವಾರ; ನಂಜುಂಡೇಶ್ವರನ ದರ್ಶನಕ್ಕೆ ಹರಿದುಬಂತು ಜನಸಾಗರ

ಕೊರೊನಾ ಅನ್​ಲಾಕ್ ಬಳಿಕ ಜಿಲ್ಲಾಡಳಿತದ ಆದೇಶದಂತೆ ಇಂದಿನಿಂದ ಎಲ್ಲಾ ಸೇವೆಗಳು ಮತ್ತೆ ಆರಂಭವಾಗಿದೆ. ದೂರದ ಊರುಗಳಿಂದ ಹರಕೆ ತೀರಿಸಲು ಬಹಳಷ್ಟು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ.

ಮೈಸೂರು: ಆಷಾಢ ಮಾಸದ ಮೊದಲ ಸೋಮವಾರ; ನಂಜುಂಡೇಶ್ವರನ ದರ್ಶನಕ್ಕೆ ಹರಿದುಬಂತು ಜನಸಾಗರ
ನಂಜನಗೂಡು ದೇವಾಲಯ
TV9 Web
| Updated By: ganapathi bhat|

Updated on:Jul 19, 2021 | 11:07 PM

Share

ಮೈಸೂರು: ಆಷಾಢ ಮಾಸದ ಮೊದಲನೇ ಸೋಮವಾರ ನಂಜುಂಡೇಶ್ವರನ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಯಾವುದೇ ಪೂಜೆ, ದರ್ಶನ, ಹರಕೆ ನೀಡುವುದು ನಿಲ್ಲಿಸಲಾಗಿತ್ತು. 2 ತಿಂಗಳಿಗೂ ಅಧಿಕ ದಿನಗಳ ಕಾಲ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಸೇವೆಗಳನ್ನು ನಡೆಸಲು ಅವಕಾಶ ಇರಲಿಲ್ಲ.

ದೇವಾಲಯದಲ್ಲಿ ಮುಡಿ ನೀಡುವುದಕ್ಕೂ ಬ್ರೇಕ್ ಹಾಕಲಾಗಿತ್ತು. ದೇವಾಲಯದ ಬಳಿ ಹೂ ಹಣ್ಣು ವ್ಯಾಪಾರ ಕೂಡ ನೆಲ ಕಚ್ಚಿತ್ತು. ಆದರೆ, ಕೊರೊನಾ ಅನ್​ಲಾಕ್ ಬಳಿಕ ಜಿಲ್ಲಾಡಳಿತದ ಆದೇಶದಂತೆ ಇಂದಿನಿಂದ ಎಲ್ಲಾ ಸೇವೆಗಳು ಮತ್ತೆ ಆರಂಭವಾಗಿದೆ. ದೂರದ ಊರುಗಳಿಂದ ಹರಕೆ ತೀರಿಸಲು ಬಹಳಷ್ಟು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಕಪಿಲೆಯಲ್ಲಿ ಮುಳುಗಿ ಸ್ನಾನ ಮಾಡಿ ಪುನೀತರಾಗಿದ್ದಾರೆ. ದೇವಾಲಯದ ಸುತ್ತ ಉರುಳು ಸೇವೆ ಕೂಡ ನಡೆದಿದೆ. ದಾಸೋಹದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ.

Mysuru Nanjanagudu Temple Food

ದೇವಾಲಯದಲ್ಲಿ ನಡೆದ ದಾಸೋಹ

ಹಾಗೆಂದು ಕೊರೊನಾ ಇರುವುದನ್ನೇ ಮರೆತು ನಡೆದುಕೊಳ್ಳುವುದು ಸೂಕ್ತವಲ್ಲ. ಕೊರೊನಾ ಪ್ರಕರಣಗಳು ಸಂಪೂರ್ಣ ಕಡಿಮೆ ಆಗಿಲ್ಲ. ರಾಜ್ಯದಲ್ಲಿ ಇಂದು 1,291 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 40 ಜನರು ನಿಧನರಾಗಿದ್ದಾರೆ. ಬೆಂಗಳೂರಲ್ಲಿ ಇಂದು 266 ಜನರಿಗೆ ಸೋಂಕು ಖಚಿತಪಟ್ಟಿದ್ದು, 6 ಜನರು ಮೃತಪಟ್ಟಿದ್ದಾರೆ. ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2885238ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ 28,21,491 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,197 ಜನರು ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 3,015 ಜನರು ಕೊವಿಡ್​ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಬಾಗಲಕೋಟೆ 1, ಬಳ್ಳಾರಿ 3, ಬೆಳಗಾವಿ 38, ಬೆಂಗಳೂರು ಗ್ರಾಮಾಂತರ 34, ಬೆಂಗಳೂರು ನಗರ 266, ಬೀದರ್ 1, ಚಾಮರಾಜನಗರ 27, ಚಿಕ್ಕಬಳ್ಳಾಪುರ 9 , ಚಿಕ್ಕಮಗಳೂರು 100, ಚಿತ್ರದುರ್ಗ 14, ದಕ್ಷಿಣ ಕನ್ನಡ 126, ದಾವಣಗೆರೆ 8, ಧಾರವಾಡ 13, ಗದಗ 1, ಹಾಸನ 125, ಹಾವೇರಿ 1, ಕಲಬುರಗಿ 8, ಕೊಡಗು 60, ಕೋಲಾರ 25, ಮಂಡ್ಯ 42, ಮೈಸೂರು 125, ರಾಯಚೂರು 6, ರಾಮನಗರ 5, ಶಿವಮೊಗ್ಗ 51, ತುಮಕೂರು 70, ಉಡುಪಿ 85, ಉತ್ತರ ಕನ್ನಡ 38, ವಿಜಯಪುರ 7 , ಯಾದಗಿರಿ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.

ಇದನ್ನೂ ಓದಿ: ಶಿಥಿಲಗೊಂಡಿದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಮೇಲ್ಛಾವಣಿ; ಭಕ್ತರಿಂದ ಆಕ್ರೋಶ

ಬೀದರ್: ದಕ್ಷಿಣ ಕಾಶಿ ಎಂದು ಕರೆಯಿಸಿಕೊಳ್ಳುವ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯದ ಕೊರತೆ

Published On - 10:56 pm, Mon, 19 July 21