ಅಪ್ರಾಪ್ತೆಯನ್ನು ಪ್ರೀತಿಸಿದ್ದ ಇಬ್ಬರು ಮಕ್ಕಳ ತಂದೆ: ಆತ್ಮಹತ್ಯೆಯೊಂದಿಗೆ ಅಂತ್ಯವಾದ ಪ್ರೇಮ್ ಕಹಾನಿ

ಆಗಲೇ ಮದುವೆಯಾಗಿ ಎರಡು ಮಕ್ಕಳಿರುವ ನರಸಪ್ಪ, ಲಿಂಗಸಗೂರು ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಬಾಲಕಿ ಜೊತೆಗೆ ಪರಾರಿಯಾಗಿದ್ದ. ಬಳಿಕ ಇಂದು ಬೆಳಗ್ಗೆ ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಚೀಟಿ ಬರೆದಿಟ್ಟು ವಿಷ ಸೇವಿಸಿದ್ದಾರೆ.

ಅಪ್ರಾಪ್ತೆಯನ್ನು ಪ್ರೀತಿಸಿದ್ದ ಇಬ್ಬರು ಮಕ್ಕಳ ತಂದೆ: ಆತ್ಮಹತ್ಯೆಯೊಂದಿಗೆ ಅಂತ್ಯವಾದ ಪ್ರೇಮ್ ಕಹಾನಿ
Updated By: ganapathi bhat

Updated on: Apr 07, 2022 | 5:29 PM

ರಾಯಚೂರು: ಜಾಲೆರದೊಡ್ಡಿ ಗ್ರಾಮದ ಮಹಾದೇವಿ (17) ಎಂಬಾಕೆಯ ಜೊತೆ ಲವ್ವಿ ಡವ್ವಿ ಆಟವಾಡಿದ್ದ ಯರಜಂತಿಯ ನರಸಪ್ಪ (25) ಬಳಿಕ ಅಪ್ರಾಪ್ತ ಬಾಲಕಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಲಿಂಗಸಗೂರ ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ವರದಿಯಾಗಿದೆ. ವಿಷ ಸೇವಿಸಿದ ಬಾಲಕಿ ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿರುವ ನರಸಪ್ಪ ಸ್ಥಿತಿ ಗಂಭೀರವಾಗಿದೆ.

ಆಗಲೇ ಮದುವೆಯಾಗಿ ಎರಡು ಮಕ್ಕಳಿರುವ ನರಸಪ್ಪ, ಲಿಂಗಸಗೂರು ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಬಾಲಕಿ ಜೊತೆಗೆ ಪರಾರಿಯಾಗಿದ್ದ. ಬಳಿಕ ಇಂದು ಬೆಳಗ್ಗೆ ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಚೀಟಿ ಬರೆದಿಟ್ಟು ವಿಷ ಸೇವಿಸಿದ್ದಾರೆ.

ಮುಂದಿನ ಜನ್ಮದಲ್ಲಿ ಇಬ್ಬರೂ ಗಂಡ ಹೆಂಡತಿ ಆಗೋಣವೆಂದು ಚೀಟಿಯಲ್ಲಿ ಬರೆಯಲಾಗಿದೆ. ಯರಜಂತಿ ಗ್ರಾಮದ ನರಸಪ್ಪನ ಮಾವನಗುಡಿ ಹತ್ತಿರ ಅಂತ್ಯ ಸಂಸ್ಕಾರ ಮಾಡುವಂತೆಯೂ ಚೀಟಿಯಲ್ಲಿ ತಿಳಿಸಿ ಆತ್ಮಹತ್ಯೆ ನಡೆಸಿದ್ದಾರೆ.

ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮದುವೆಗೆ ಒಪ್ಪದ ಹಿರಿಯರು: ಆತ್ಮಹತ್ಯೆಗೆ ಶರಣಾದ ಜೋಡಿ ಹಕ್ಕಿ

Published On - 1:04 pm, Sat, 12 December 20