AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಗಿರಿಯಲ್ಲಿ ಏಷ್ಯಾದ 2ನೇ ಅತಿ ದೊಡ್ಡ ಏಕಶಿಲಾ ಬಂಡೆ ಹತ್ತಿ ಸಾಧನೆ ಮಾಡಿದ ಮಹಿಳೆಯರು

ಅಂತಾರಾಷ್ಟ್ರೀಯ ಪರ್ವತ ದಿನವಾದ ನಿನ್ನೆ ಆರು ಮಹಿಳಾ ಪರ್ವತಾರೋಹಿಗಳು ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟವನ್ನು ಏರುವ ಮೂಲಕ ರಾಕ್ ಕ್ಲೈಂಬಿಂಗ್​ನಲ್ಲಿ ಹೊಸ ಸಾಧನೆ ಮಾಡಿದ್ದಾರೆ.

ಮಧುಗಿರಿಯಲ್ಲಿ ಏಷ್ಯಾದ 2ನೇ ಅತಿ ದೊಡ್ಡ ಏಕಶಿಲಾ ಬಂಡೆ ಹತ್ತಿ ಸಾಧನೆ ಮಾಡಿದ ಮಹಿಳೆಯರು
ಮಧುಗಿರಿ ಬೆಟ್ಟದ ರಾಕ್ ಕ್ಲೈಂಬಿಂಗ್ ದಾರಿ
TV9 Web
| Updated By: ganapathi bhat|

Updated on:Apr 07, 2022 | 10:47 AM

Share

ತುಮಕೂರು: ಅಂತಾರಾಷ್ಟ್ರೀಯ ಪರ್ವತ ದಿನವಾದ ನಿನ್ನೆ ಆರು ಮಹಿಳಾ ಪರ್ವತಾರೋಹಿಗಳು ರಾಕ್ ಕ್ಲೈಂಬಿಂಗ್ ಸಾಹಸವನ್ನು ಮಾಡಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಬಂಡೆ, 3984.5 ಅಡಿ ಎತ್ತರವಿರುವ ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟವನ್ನು ಏರುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.

ಬೆಟ್ಟದ ಪೂರ್ವಕ್ಕೆ ಮುಖ ಮಾಡಿರುವ ಗೋಡೆಯನ್ನು ಮಹಿಳೆಯರು ಏರಿದ್ದಾರೆ. ಹೊಸ ರಾಕ್ ಕ್ಲೈಂಬಿಂಗ್ ದಾರಿ ಕಂಡುಹಿಡಿಯುವ ಮೂಲಕ ಧೈರ್ಯ ಮತ್ತು ದೃಢತೆ ಮೆರೆದಿದ್ದಾರೆ. ತಂಡದಲ್ಲಿ ಎಲ್ಲಾ ವಯೋಮಾನದ ಅನುಭವಿ ಮತ್ತು ಯುವ ಪರ್ವತಾರೋಹಿಗಳು ಭಾಗವಹಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್ ಕ್ಲೈಂಬರ್ ಮತ್ತು ಎರಡು ಮಕ್ಕಳ ತಾಯಿಯೂ ಆಗಿರುವ ಅರ್ಚನಾ (39) ಹಾಗೂ ವತ್ಸಲಾ (35) ಈ ಸಾಧನೆ ಮಾಡಿದ್ದಾರೆ. ಜೊತೆಗೆ, ವೃತ್ತಿಪರ ಬಂಡೆ ಆರೋಹಿ ಚೆಯಾ ಮಾರಕ್ (24), ಯುವ ಅಥ್ಲೀಟ್​ಗಳಾದ ಸ್ರಿಯಾ ಮಿಸ್ರಾ (15), ಗದಗದ ಗಂಗಮ್ಮ (22), ಮೈಸೂರಿನ ಬಿಂದು (22) ಪಾಲ್ಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಬಂಡೆ ಆರೋಹಿಗಳನ್ನು ಮತ್ತು ಜನರಲ್ ತಿಮ್ಮಯ್ಯ ಅಕಾಡೆಮಿ ಆಫ್ ಅಡ್ವೆಂಚರ್ ಸಂಸ್ಥೆಯನ್ನು ಅಭಿನಂದಿಸಿದ್ದಾರೆ. ನೇರವಾದ ಗೋಡೆಯಂತಿರುವ ಏಕಶಿಲಾ ಬಂಡೆಯನ್ನು ಏರಿ, ಹೊಸ ದಾರಿ ನಿರ್ಮಿಸುವ ಸವಾಲನ್ನು ಅವರು ಹಾಕಿಕೊಂಡಿರುವುದು ನಮಗೆ ಅಗಾಧ ಸಂತಸ ತಂದಿದೆ ಎಂದಿದ್ದಾರೆ.

ಬಿಂದು ಮತ್ತು ಚೆಯಾ ಮಾರಕ್

ಮಹಿಳಾ ಬಂಡೆ ಏರುಗರಾದ ಬಿಂದು ಮತ್ತು ಚೆಯಾ ಮಧುಗಿರಿ ಬೆಟ್ಟ ಏರಲು ತರಬೇತಿ ಪಡೆದು ಸಿದ್ಧತೆ ನಡೆಸಿಕೊಂಡಿದ್ದೆವು ಎಂದಿದ್ದಾರೆ. ಬಿಂದು ಬಾದಾಮಿ ಮತ್ತು ಬೆಂಗಳೂರಿನಲ್ಲಿ ರಾಕ್ ಕ್ಲೈಂಬಿಂಗ್ ಕೋರ್ಸ್​ನಲ್ಲಿ ಭಾಗವಹಿಸಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಹೊಸ ಎತ್ತರದ ದಾಖಲೆ ಬರೆದ ಮೌಂಟ್ ಎವೆರೆಸ್ಟ್: ಎತ್ತರ ಎಷ್ಟು ಹೆಚ್ಚಾಗಿದೆ?

Published On - 2:31 pm, Sat, 12 December 20