ಬಸ್ ಸಂಚಾರ ತಡೆದ ನೌಕರರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು..
ಮೌನವಾಗಿ ಮುಷ್ಕರ ನಡೆಸಲು ಅವಕಾಶ ನೀಡಿದ್ದ ಪೊಲೀಸರು, ಚಾಲನೆ ಮಾಡಲು ಬಯಸುವ ಚಾಲಕರು ಬಸ್ನ ಚಲಾಯಿಸಬಹುದು ಎಂದಿದ್ದರು.
ಬೆಂಗಳೂರು: ಚಲಿಸುತಿದ್ದ ಬಸ್ಗಳನ್ನು ತಡೆಯಲು ಮುಂದಾದ ನಾಲ್ವರು ನೌಕರನ್ನು ಮೆಜೆಸ್ಟಿಕ್ನಲ್ಲಿ ಉಪ್ಪಾರಪೇಟೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೌನವಾಗಿ ಮುಷ್ಕರ ನಡೆಸಲು ಅವಕಾಶ ನೀಡಿದ್ದ ಪೊಲೀಸರು, ಚಾಲನೆ ಮಾಡಲು ಬಯಸುವ ಚಾಲಕರು ಬಸ್ ಚಾಲನೆ ಮಾಡಬಹುದು ಎಂದಿದ್ದರು. ಆದರೆ ಅಂತಹ ಬಸ್ಗಳನ್ನು ತಡೆದು ಗಲಾಟೆ ಮಾಡಲು ಮುಂದಾದ್ರೆ ಕೇಸ್ ಮಾಡಿ ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದು, ಇದೀಗ ಸದ್ಯಕ್ಕೆ ನಾಲ್ಕು ಜನ ನೌಕರರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ BMTC ಬಸ್ ಸಂಚಾರ: ಮೆಜೆಸ್ಟಿಕ್‌ಗೆ ಆಗಮಿಸಿದ 2 ಬಸ್‌ಗಳು
Published On - 12:35 pm, Sat, 12 December 20