KSHDCL ಅಧ್ಯಕ್ಷ-ಎಂಡಿ ಕಿತ್ತಾಟದ ವೀಡಿಯೊ: ತಾನು ಆತ್ಮಹತ್ಯೆ ಮಾಡಿಕೊಂಡರೆ ಡಿ. ರೂಪಾ ಕಾರಣ ಎಂದಿರುವ ಅಧ್ಯಕ್ಷ ರಾಘವೇಂದ್ರ ಶೆಟ್ಟಿ

|

Updated on: Jun 02, 2022 | 7:28 PM

KSHDCL ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತು ಎಂ.ಡಿ. ರೂಪಾ ಮೌದ್ಗಿಲ್ ಫೈಟ್​​ ತಾರಕಕ್ಕೇರಿದೆ. ಮೇ 27ರಂದು ನಡೆದಿದ್ದ ನಿಗಮದ ವಾರ್ಷಿಕ ಸಭೆಯಲ್ಲಿ ಕಿತ್ತಾಟ ಜೋರಾಗಿಯೆ ನಡೆದಿದೆ. ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಎಂ.ಡಿ. ರೂಪಾ ಮೌದ್ಗಿಲ್ ಕಾರಣ ಎಂದು ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಪದೇ ಪದೇ ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವೇಳೆ ಎಂಡಿ ರೂಪಾ ಸಭೆಯಿಂದ ಎದ್ದು ಹೋಗಿರುವುದೂ ಕಾಣಬರುತ್ತದೆ.

KSHDCL ಅಧ್ಯಕ್ಷ-ಎಂಡಿ ಕಿತ್ತಾಟದ ವೀಡಿಯೊ: ತಾನು ಆತ್ಮಹತ್ಯೆ ಮಾಡಿಕೊಂಡರೆ ಡಿ. ರೂಪಾ ಕಾರಣ ಎಂದಿರುವ ಅಧ್ಯಕ್ಷ ರಾಘವೇಂದ್ರ ಶೆಟ್ಟಿ
KSHDCL ಅಧ್ಯಕ್ಷ, ಎಂಡಿ ಕಿತ್ತಾಟದ ವೀಡಿಯೊ: ತಾನು ಆತ್ಮಹತ್ಯೆ ಮಾಡಿಕೊಂಡರೆ ಡಿ. ರೂಪಾ ಕಾರಣ ಎಂದಿರುವ ಅಧ್ಯಕ್ಷ ರಾಘವೇಂದ್ರ ಶೆಟ್ಟಿ
Follow us on

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಮತ್ತು ನಿಗಮದ ಅಧ್ಯಕ್ಷ ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿದ್ದು, ಎಂಡಿ ರೂಪಾ ಮೌದ್ಗಿಲ್ (IPS D Roopa Moudgil) ಮತ್ತು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Belur Raghavendra Shetty) ನಡುವಣ ಜಟಾಪಟಿ ಮುಂದುವರಿದಿದೆ. ನಿಗಮದ ಆಯಕಟ್ಟಿನ ಜಾಗದಲ್ಲಿ ಕುಳಿತು ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿರುವ ಇಬ್ಬರೂ ತೂ ತೂ ಮೈ ಮೈ ಅನ್ನುತ್ತಿದ್ದಾರೆ (Misappropriation). IPS ರೂಪಾ ಮೌದ್ಗಿಲ್ ಮತ್ತು ಜನಪ್ರತಿನಿಧಿ ಬೇಳೂರು ರಾಘವೇಂದ್ರ ಶೆಟ್ಟಿ ಇಬ್ಬರೂ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದ್ದಾರೆ (Karnataka Handicrafts Development Corporation – Cauvery Handicrafts -KSHDCL).

ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ರಾಘವೇಂದ್ರ ಶೆಟ್ಟಿ ಮತ್ತು ಎಂ.ಡಿ. ರೂಪಾ ಮೌದ್ಗಿಲ್ ನಡುವಣ ಫೈಟ್​​ ತಾರಕಕ್ಕೇರಿದೆ. ಮೇ 27ರಂದು ನಡೆದಿದ್ದ ನಿಗಮದ ವಾರ್ಷಿಕ ಆಡಳಿತ ಮಂಡಳಿ ಸಭೆಯಲ್ಲಿ ಕಿತ್ತಾಟ ಜೋರಾಗಿಯೆ ನಡೆದಿದೆ. ಸಭೆಯಲ್ಲಿ ಅಧ್ಯಕ್ಷ ಮತ್ತು ಎಂಡಿ ಕಿತ್ತಾಟದ ವೀಡಿಯೊ ಇದೀಗ ಬಹಿರಂಗಗೊಂಡಿದೆ. ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ IPS ರೂಪಾ ಮೌದ್ಗಿಲ್ ಕಾರಣ ಎಂದು ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಪದೇ ಪದೇ ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವೇಳೆ ಎಂಡಿ ರೂಪಾ ಸಭೆಯಿಂದ ಎದ್ದು ಹೋಗಿರುವುದೂ ಕಾಣಬರುತ್ತದೆ.

ಬೇಳೂರು ರಾಘವೇಂದ್ರ ಶೆಟ್ಟಿ ಮಾಡಿರುವ ಇತರೆ ಆರೋಪಗಳು ಏನೇನು:

ಐಪಿಎಸ್​ ಅಧಿಕಾರಿ ಡಿ.ರೂಪಾ 2 ದಿನಕ್ಕೊಮ್ಮೆ ಕಚೇರಿ​ಗೆ ಬರ್ತಾರೆ. ಫೈಲ್​​ಗಳನ್ನು ತರಿಸಿಕೊಂಡು ಮನೆಯಲ್ಲೇ‌ ಕೆಲಸ‌ ಮಾಡ್ತಾರೆ ಎಂದು ವಿಧಾನಸೌಧದಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪ ಮಾಡಿದ್ದಾರೆ. ನಿಗಮದ ಅಧ್ಯಕ್ಷರಾದ ನನಗೆ ಕಚೇರಿ ದಾಖಲೆಗಳನ್ನು ಕೊಡುವುದಿಲ್ಲ. ನನ್ನ ಕಚೇರಿಯಲ್ಲಿ ಸಿಸಿ ಕ್ಯಾಮರಾ ಕನೆಕ್ಷನ್ ಕಡಿತಗೊಳಿಸಿದ್ದಾರೆ. 5 ಕೋಟಿ ರೂಪಾಯಿ ಅವ್ಯವಹಾರ‌ ನನ್ನ ಅವಧಿಯಲ್ಲಿ ಆಗಿಲ್ಲ. ಇದರಿಂದ ರೂಪಾ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ನನ್ನ ವಿರುದ್ಧ 5 ಕೋಟಿ ರೂ. ಅವ್ಯವಹಾರ ಆರೋಪ ಮಾಡಿದ್ದಾರೆ. ಡಿ.ರೂಪಾ ಬಳಿ ಒಂದೇ ಒಂದು ದಾಖಲೆಯಿದ್ರೆ ಬಿಡುಗಡೆ ಮಾಡಲಿ. ಮಹಿಳಾ ಸಿಬ್ಬಂದಿ ನೇಮಿಸಲು ಕೇಳಿದ್ದೇನೆ ಅಂತ ಆರೋಪಿಸಿದ್ದಾರೆ. ಕಚೇರಿಗೆ ಟೈಪಿಸ್ಟ್ ನೇಮಕ‌ ಮಾಡುವಂತೆ ಕೇಳಿದ್ದು ತಪ್ಪಾ? ಇದರ‌ ಬಗ್ಗೆಯೂ ಇಷ್ಟು ಕೀಳಾಗಿ ಮಾತಾಡಿರೋದು ಎಷ್ಟು ಸರಿ? ಬೆಲೆಬಾಳುವ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಿಲ್ಲ. ಬದಲಿಗೆ ನಾನೇ ನಿಗಮಕ್ಕೆ ಒಂದಷ್ಟು ವಸ್ತುಗಳನ್ನು ಕೊಟ್ಟಿದ್ದೇನೆ. ಅದಕ್ಕೆ ಬೇಕಾದ ಸ್ಲಿಪ್ ಗಳೂ ನನ್ನ ಬಳಿ ಇವೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.

Published On - 7:15 pm, Thu, 2 June 22