ಸಾವಿನ ಹೆದ್ದಾರಿ NH50 : ಸಾರ್ವಜನಿಕರ ಪ್ರಾಣಕ್ಕೆ ಕಂಟಕ NH50 ಹೆದ್ದಾರಿ
ಈಗಾಗಲೇ ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಟೆಂಡರ್ ಕರೆಯುವಾಗ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಉಢಾಪೆಯ ಉತ್ತರ ನೀಡುತ್ತಾರೆ.
ರಾಷ್ಟ್ರೀಯ ಹೆದ್ದಾರಿಯಾದ NH50 ನಿರ್ಮಾಣಗೊಂಡು ಬಹಳ ವರುಷ ಕಳೆದಿವೆ, ಪ್ರಾರಂಭದಲ್ಲಿ ಈ ಹೆದ್ದಾರಿಯನ್ನು NH 13 ಎಂದು ಕರೆಯಲಾಗುತ್ತಿತ್ತು, ರಸ್ತೆ ಅಗಲೀಕರಣ ಮಾಡಿದ ನಂತರ NH50 ಆಗಿದೆ. ಈ ಹೆದ್ದಾರಿಯು ಸುಮಾರು 750km ಉದ್ದವಿದ್ದು, ಚಿತ್ರದುರ್ಗ ಮತ್ತು ಹೊಸಪೇಟೆ ಗೆ ಹೋಗುವ ವಾಹನಗಳಿಗೆ ಈ ಹೆದ್ದಾರಿಯು ಸಹಕಾರಿಯಾಗಿದೆ. ಒಂದೇ ಬಾರಿಗೆ ನಾಲ್ಕು ವಾಹನ ಚಾಲನೆ ಮಾಡುವಷ್ಟು ರಸ್ತೆ ವಿಸ್ತಾರವಾಗಿದ್ದು, ರಸ್ತೆ ದಾಟಲು ಬಹಳ ಕಷ್ಟಕರವಾಗಿದೆ. ಈ ಹೆದ್ದಾರಿಯು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗ್ರಾಮಗಳಾದ ಆಲೂರು ಮತ್ತು ಕಾನಾ ಮಾಡುಗಿನ ನಡುವೆ ಹಾದುಹೋಗುವ ಹೆದ್ದಾರಿ ಇದಾಗಿದೆ, ಇದನ್ನು ಸಾವಿನ ಹೆದ್ದಾರಿ ಎಂದೇ ಅಲ್ಲಿನ ಗ್ರಾಮಸ್ಥರು ಕರೆಯುತ್ತಾರೆ, ಹೆದ್ದಾರಿಯನ್ನು ದಾಟುವಾಗ ಲಾರಿ ಬಸ್ಸುಗಳು ಗುದ್ದಿ ಈಗಾಗಲೇ ಸಾಕಷ್ಟು ಸಾವು ನೋವುಗಳಾಗಿವೆ, ಮತ್ತು ಮಕ್ಕಳು ಶಾಲೆಗೆ ಹೋಗಲು ಈ ಹೆದ್ದಾರಿಯನ್ನು ದಾಟಬೇಕಿದ್ದು. ಚಳ್ಳಕೆರೆಗೆ ಹಾಗೂ ಬಹಳಷ್ಟು ಹಳ್ಳಿಗಳಿಗೆ ಈ ಮಾರ್ಗದಿಂದಲೇ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ ಯಾವುದೇ ಅಂಡರ್ ಪಾಸ್, ಸರ್ಕಲ್ ಗಳು ಇಲ್ಲದೆ ಈ ರಸ್ತೆಯನ್ನು ನಿರ್ಮಿಸಿ ಇಂದು ಹಲವು ಸಾವು ನೋವುಗಳಿಗೆ ಸಾಕ್ಷಿಯಾಗಿದೆ ,ಇತ್ತೀಚೆಗೆ ಅಂದರೆ ಕಳೆದ 3 ತಿಂಗಳಲ್ಲಿ 10ಕ್ಕೂ ಹೆಚ್ಚು ಜನರ ಸಾವು ನೋವು ಸಂಭವಿಸಿದರು ಸರ್ಕಾರ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ,
ಈಗಾಗಲೇ ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಟೆಂಡರ್ ಕರೆಯುವಾಗ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಉಢಾಪೆಯ ಉತ್ತರ ನೀಡುತ್ತಾರೆ. ಆದರೆ ಆ ಟೆಂಡರ್ ಕರಿಯುವ ಹೊತ್ತಿಗೆ ಎಷ್ಟೂ ಸಾವು -ನೋವುಗಳು ಸಂಭವಿಸುತ್ತದೆ ಎಂದು ಗೊತ್ತಿಲ್ಲ. ಅಧಿಕಾರಿಗಳು ವರುಷಗಳಿಂದ ಹೀಗೆ ಹೇಳುತ್ತಾ ಬರುತ್ತಿದ್ದರೆ ಹೊರತು ಅಂಡರ್ ಪಾಸ್ ನಿರ್ಮಾಣ ಮಾಡುತ್ತಿಲ್ಲ .ಈಗಾಲೇ 30ಕ್ಕೂ ಹೆಚ್ಚು ಜನರ ಪ್ರಾಣ ತೆಗೆದಿರುವ ಈ ಹೆದ್ದಾರಿ .ಇನ್ನು ಸರ್ಕಾರದ ಬೇಜಾವಾಬ್ದಾರಿಯಿಂದ ಎಷ್ಟು ಜನರ ಪ್ರಾಣ ಹೋಗಬೇಕಿದೆ ಎಂದು ಇಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಬಿರುಗಾಳಿಗೆ ಭಯಗೊಂಡ ಬೆಕ್ಕುಗಳಿಗೆ ತನ್ನ ರೆಕ್ಕೆಗಳಡಿ ಆಶ್ರಯ ನೀಡಿದ ಕೋಳಿಯ ಫೋಟೋ ವೈರಲ್
ಸುತ್ತ – ಮುತ್ತ ಹಳ್ಳಿಗಳಿಗೆ ಇಲ್ಲಿರುವ ಆಸ್ಪತ್ರೆಯೇ ದೊಡ್ಡದು, ಹಾಗಾಗಿ ಚಿಕಿತ್ಸೆಗೆ ಜನರು ಮತ್ತು ಗರ್ಭಿಣಿಯರು ಹೆರಿಗೆಗೆ ಬರಲು ಈ ಹೆದ್ದಾರಿ ದಾಟಬೇಕು. ಹೈಸ್ಕೂಲ್ ಪಿಯುಸಿ. ಡಿಗ್ರಿಯ ಮಕ್ಕಳು ಪ್ರತಿನಿತ್ಯ ಜೀವ ಭಯದಲ್ಲೇ ರಸ್ತೆ ದಾಟುತ್ತಿದ್ದಾರೆ. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವಂತಾಗಿದೆ . ರಸ್ತೆಗೆ ಸರಿಯಾದ ಬೋರ್ಡ್ ಕೂಡ ಹಾಕಿರದ ಕಾರಣ ಸಾವರ್ಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೆದ್ದಾರಿ ನಿರ್ಮಿಸಿದ ಕಂಪನಿ ಬಗ್ಗೆಯು ಸಹ ಮಾಹಿತಿಯನ್ನು ಯಾರು ಕೊಡುತ್ತಿಲ್ಲ. ಹಾಗಾಗಿ ಪ್ರತಿ ಬಾರಿ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಸರ್ಕಾರ ಎಚ್ಚೆತ್ತುಕೊಂಡು ಅಂಡರ್ ಪಾಸ್ ನಿರ್ಮಿಸಿ ಸ್ಥಳೀಯರ ನೆರವಿಗೆ ಸರ್ಕಾರ ಬರಬೇಕಿದೆ.
ಈಗಾಲೇ ನಾವು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ, ಪ್ರತಿನಿತ್ಯ ತಮ್ಮ ಕೆಲಸಗಳಿಗೆ ಈ ರಸ್ತೆ ದಾಟುವುದು ಸಾವರ್ಜನಿಕರಿಗೆ ಅನಿವಾರ್ಯವಾಗಿದೆ ಹಾಗಾಗಿ ಶೀಘ್ರದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಆಗುತ್ತಿರುವ ಸಾವು ನೋವುಗಳಿಗೆ ಮುಕ್ತಿ ಕಾಣಿಸಬೇಕಿದೆ. ಭಾಗ್ಯಮ್ಮ .ಕೆ. ಗ್ರಾಮಪಂಚಾಯಿತ್ ಸದಸ್ಯೆ.ಆಲೂರು
ಹೊಲಗಳಿಗೆ ಹೋಗಲು ರೈತರು, ಹಸು ದನಕರುಗಳು ಈ ಹೆದ್ದಾರಿಯನ್ನು ದಾಟಬೇಕಾಗಿದೆ ನಾವುಗಳು ಗ್ರಾಮಪಂಚಾಯಿತಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ಉಪಯೋಗವಾಗುತ್ತಿಲ್ಲ. ಮಕ್ಕಳನ್ನು ಶಾಲೆ ಕಳುಹಿಸಲು ಸಹ ಭಯಪಡುವಂತಾಗಿದೆ, ಈಗಾಲೇ ಹಲವು ಮಕ್ಕಳು ರಸ್ತೆ ದಾಟುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಹಾಗಾಗಿ ಸರ್ಕಾರ ಇದರ ಬಗ್ಗೆ ಕೊಡಲೇ ಗಮನಹರಿಸಬೇಕಾಗಿದೆ.. ರೇವಣ ಸಿದ್ದಪ್ಪ . ಊರಿನ ಸಾವರ್ಜನಿಕ
ಐಶ್ವರ್ಯ ಕೋಣನ. ಆಲೂರು , ವಿಜಯನಗರ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ