French Open 2022: ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡುವ ರೋಹನ್ ಬೋಪಣ್ಣ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋಲು

TV9 Digital Desk

| Edited By: ಪೃಥ್ವಿಶಂಕರ

Updated on:Jun 02, 2022 | 7:51 PM

French Open 2022: ಬೋಪಣ್ಣ ಈ ಹಿಂದೆ 2015 ರ ವಿಂಬಲ್ಡನ್‌ನಲ್ಲಿ ಜೀನ್-ಜೂಲಿಯನ್ ರೋಜರ್ ಮತ್ತು ಹೋರಿಯಾ ಟೆಕೌ ಅವರನ್ನು ಸೋಲಿಸುವ ಮೂಲಕ ರೊಮೇನಿಯಾದ ಫ್ಲೋರಿನ್ ಮೆರ್ಜಿಯಾ ಅವರೊಂದಿಗೆ ಸೆಮಿ-ಫೈನಲ್ ತಲುಪಿದ್ದರು.

French Open 2022: ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡುವ ರೋಹನ್ ಬೋಪಣ್ಣ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋಲು
ರೋಹನ್ ಬೋಪಣ್ಣ ಮತ್ತು ಮ್ಯಾಟ್ವೆ ಮಿಡಲ್‌ಕೂಪ್

ಫ್ರೆಂಚ್ ಓಪನ್‌ನಲ್ಲಿ ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತು ಅವರ ಡಚ್ ಪಾಲುದಾರ ಎಂ ಮಿಡಲ್‌ಕೂಪ್ (M Middelkoop) ಅವರ ಪ್ರಯಾಣವು ಸೆಮಿಫೈನಲ್‌ನಲ್ಲಿಯೇ ಕೊನೆಗೊಂಡಿತು. ಅವರು ಸೆಮಿ-ಫೈನಲ್‌ನಲ್ಲಿ 12 ನೇ ಶ್ರೇಯಾಂಕದ ಮಾರ್ಸೆಲ್ಲೊ ಅರೆವಾಲೊ ಮತ್ತು ಜೀನ್-ಜುಲಿಯನ್ ರೋಜರ್ ವಿರುದ್ಧ ಮೂರು ಸೆಟ್‌ಗಳ ಪಂದ್ಯದಲ್ಲಿ ಸೋಲನುಭವಿಸಿದರು. ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಡಚ್ ಪಾಲುದಾರ ಎಂ ಮಿಡಲ್‌ಕೂಪ್ ಅವರೊಂದಿಗೆ ಕಳೆದ ಏಳು ವರ್ಷಗಳಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ತಲುಪಿದ್ದರು.

ಏಳು ವರ್ಷಗಳ ನಂತರ ಸೆಮಿಫೈನಲ್

ಬೋಪಣ್ಣ ಜೋಡಿ ಫ್ರೆಂಚ್ ಓಪನ್ 2022 (French Open 2022)ರ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಲಾಯ್ಡ್ ಗ್ಲಾಸ್‌ಪೂಲ್ ಮತ್ತು ಹೆನ್ರಿ ಹೆಲಿಯೊವಾರಾ ಅವರನ್ನು ಸೋಲಿಸಿದರು. ಬೋಪಣ್ಣ ಮತ್ತು ಮಿಡಲ್‌ಕೂಪ್ 4-6, 6-4, 7-6 ಸೆಟ್‌ಗಳಿಂದ ಬ್ರಿಟನ್‌ನ ಗ್ಲಾಸ್‌ಪೂಲ್ ಮತ್ತು ಫಿನ್‌ಲ್ಯಾಂಡ್‌ನ ಹೆಲಿಯೊವಾರಾ ವಿರುದ್ಧ ಗೆದ್ದು ಸೆಮಿ ಫೈನಲ್ ತಲುಪಿದ್ದರು. ಇದಕ್ಕೂ ಮೊದಲು, ಬೋಪಣ್ಣ ಅವರು 2015 ರ ವಿಂಬಲ್ಡನ್‌ನಲ್ಲಿ ರೊಮೇನಿಯಾದ ಫ್ಲೋರಿನ್ ಮೆರ್ಜಿಯಾ ಅವರೊಂದಿಗೆ ಸೆಮಿಫೈನಲ್ ತಲುಪಿದ್ದರು, ಅಲ್ಲಿ ಅವರು ಜೀನ್-ಜೂಲಿಯನ್ ರೋಜರ್ ಮತ್ತು ಹೋರಿಯಾ ಟೆಕೌ ಅವರನ್ನು ಸೋಲಿಸಿದ್ದರು.

ಮರಿನ್ ಚಿಲಿಚ್ ಸೆಮಿಫೈನಲ್ ಪ್ರವೇಶ

ಮೂವತ್ತಮೂರು ವರ್ಷದ ಮರಿನ್ ಚಿಲಿಚ್ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ 33 ಏಸ್‌ಗಳೊಂದಿಗೆ ಏಳನೇ ಶ್ರೇಯಾಂಕದ ಆಂಡ್ರೇ ರುಬ್ಲೆವ್ ಅವರನ್ನು ನಾಲ್ಕು ಗಂಟೆ ಮತ್ತು ಹತ್ತು ನಿಮಿಷಗಳ ಪಂದ್ಯದಲ್ಲಿ ಸೋಲಿಸಿದರು. ಕ್ರೊವೇಷಿಯಾದ ಚಿಲಿಚ್ ಎಂಟು ವರ್ಷಗಳ ಹಿಂದೆ ಯುಎಸ್ ಓಪನ್ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಚಿಲಿಚ್ ವಿಂಬಲ್ಡನ್ 2017 ಮತ್ತು ಆಸ್ಟ್ರೇಲಿಯನ್ ಓಪನ್ 2018 ರ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತಿದ್ದರು. ನಾಲ್ಕು ವರ್ಷಗಳ ಹಿಂದೆ ಅವರು ಕೊನೆಯ ಬಾರಿ ಗ್ರ್ಯಾಂಡ್ ಸ್ಲಾಮ್‌ನ ಸೆಮಿಫೈನಲ್ ತಲುಪಿದ್ದರು. ಇದೀಗ ಅವರು ಎಂಟನೇ ಶ್ರೇಯಾಂಕದ ಕಾಸ್ಪರ್ ರುಡ್ ಅವರನ್ನು ಎದುರಿಸಲಿದ್ದಾರೆ. ಎರಡನೇ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ನಾರ್ವೆಯ ರೂಡ್ ಡೆನ್ಮಾರ್ಕ್‌ನ 19 ವರ್ಷದ ರೂನ್ ಅವರನ್ನು 6-1, 4-6, 7-6, 6-3 ಸೆಟ್‌ಗಳಿಂದ ಸೋಲಿಸಿದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada